ಬೆಂಗಳೂರು: ಕೇವಲ ಮಾತಿಗೆ ಮಾತಿ ಬೆಳೆದಿದೆ ಅಷ್ಟೇ. ಹಲ್ಲೆ ಮಾಡಿದ್ದಾರೆ ಎನ್ನುವುದು ಶುದ್ಧ ಸುಳ್ಳು ಎಂದು ಕಂಪ್ಲಿ ಶಾಸಕ ಗಣೇಶ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ್ದು ಶುದ್ಧ ಸುಳ್ಳು. ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ಬಾಟಲಿ ತೆಗೆದುಕೊಂಡು ಹೊಡೆದಿದ್ದಾರೆ. ಅವರಿಗೆ 14-15 ಹೊಲಿಗೆ ಹಾಕಿದ್ದಾರೆ ಎಂದು ತೋರಿಸುತ್ತಿದ್ದೀರಿ. ಆದರೆ ಆನಂದಣ್ಣಗೆ ನಾನು ಪ್ರಾಮಾಣಿಕವಾಗಿ ನಾನು ಹಾಗೂ ನನ್ನ ಕುಟುಂಬ ಅವರ ಬೆನ್ನಿಗೆ ನಿಂತಿದ್ದೇವೆ. ವೈಯಕ್ತಿಕವಾಗಿ ನನಗೆ ಅವರ ಬಗ್ಗೆ ಅವರ ಕುಟುಂಬದ ಬಗ್ಗೆ ಬಹಳ ಗೌರವ ನೀಡುತ್ತೇನೆ. ಇದು ಬೇಕು ಅಂತಾ ಮಾಡಿದ್ದಲ್ಲ ಎಂದರು.
ನನ್ನ ಗನ್‍ಮ್ಯಾನ್ ಬಗ್ಗೆಯೂ ಬಹಳ ಮಾತನಾಡುತ್ತಿದ್ದೀರಿ. ಆದರೆ ಅದೆಲ್ಲಾ ಸುಳ್ಳು. ನನಗೆ ಆನಂದಣ್ಣ ಅವರ ಬಗ್ಗೆ ಯಾವುದೇ ದ್ವೇಷ ಇಲ್ಲ. ನಾವು ಕೇವಲ ಮಾತನಾಡಿದ್ದು, ಆದರೆ ದೊಡ್ಡ ಮಟ್ಟದಲ್ಲಿ ಈಗ ಸೃಷ್ಟಿ ಆಗಿರುವ ರೀತಿ ಏನೂ ನಡೆದಿಲ್ಲ. ಮಾತಿಗೆ ಮಾತು ಬೆಳಿತು ಅಷ್ಟೇ ಎಂದು ಹೇಳುತ್ತಾ ಕಂಪ್ಲಿ ಗಣೇಶ್ ಅಲ್ಲಿಂದ ಹೊರಟು ಹೋದರು.
https://www.youtube.com/watch?v=2s8iSLkOnfk&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv