-1984ರಲ್ಲಿ ಹೈಜಾಕ್ ಆದ ವಿಮಾನದಲ್ಲಿ ನನ್ನ ಅಪ್ಪನೂ ಇದ್ದರು
ನವದೆಹಲಿ: ಐಸಿ 814 ವಿಮಾನ ಹೈಜಾಕ್‌ನಲ್ಲಿ ನನ್ನಪ್ಪನೂ ಇದ್ದರು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಬಹಿರಂಗಪಡಿಸಿದರು.
ಸ್ವಿಟ್ಜರ್‌ಲ್ಯಾಂಡ್‌ನ (Switzerland) ಜಿನೇವಾದಲ್ಲಿ (Geneva) ಇಂಡಿಯನ್ ಡಯಸ್ಪೋರಾದಲ್ಲಿ ಮಾತನಾಡಿದ ಅವರು, ಐಸಿ814 ದಿ ಕಂದಹಾರ್ ಹೈಜಾಕ್ (IC 814 The Kandahar Hijack) ನೆಟ್‌ಫ್ಲಿಕ್ಸ್ ವೆಬ್‌ಸೀರಿಸ್ (Netflix Webseries) ವಿವಾದದ ಬಗ್ಗೆ ಮಾತನಾಡಿದರು.ಇದನ್ನೂ ಓದಿ: ಕೇಜ್ರಿವಾಲ್‌ಗೆ ಜಾಮೀನು – 6 ತಿಂಗಳ ಬಳಿಕ ಜೈಲಿನಿಂದ ಹೊರಬಂದ ದೆಹಲಿ ಸಿಎಂ
ಮುಸ್ಲಿಂ ಹೆಸರಿನ ಬದಲಾಗಿ, ಹಿಂದೂಗಳ ಹೆಸರನ್ನು ಬಳಸಿರುವ ವಿವಾದದ ಕುರಿತಾಗಿ ಮಾತನಾಡಿ, ಐಸಿ814 ಹೈಜಾಕ್ ಮಾಡಿದ ವಿಮಾನದಲ್ಲಿ ನನ್ನಪ್ಪ ಕೂಡ ಇದ್ದರು ಎಂದು ಬಹಿರಂಗ ಪಡಿಸಿದ್ದಾರೆ. ನನ್ನ ತಂದೆ ಕೃಷ್ಣಸ್ವಾಮಿ ಸುಬ್ರಹ್ಮಣ್ಯಂ ಅವರು ಐಸಿ814 ವಿಮಾನದಲ್ಲಿದ್ದರು.
ಇನ್ನೂ ನಾನು ಐಸಿ814 ದಿ ಕಂದಹಾರ್ ಹೈಜಾಕ್ ನೆಟ್‌ಫ್ಲಿಕ್ಸ್ ವೆಬ್‌ಸೀರಿಸ್ ಅನ್ನು ನೋಡಿಲ್ಲ. ಆದ್ದರಿಂದ ನಾನು ಆ ಕುರಿತು ಯಾವುದೇ ಅಭಿಪ್ರಾಯವನ್ನು ಹಂಚಿಕೊಳ್ಳುವುದಿಲ್ಲ ಎಂದರು. 1984ರಲ್ಲಿ ಯುವ ಅಧಿಕಾರಿಯಾಗಿ ಅಪಹರಣವನ್ನು ವ್ಯವಹರಿಸುವ ತಂಡದ ಭಾಗವಾಗಿದ್ದೆ. ಆಗ ಮನೆಗೆ ಕರೆ ಮಾಡಿ ತಡವಾಗಿ ಬರುತ್ತೇನೆಂದು ತಿಳಿಸಿದಾಗ ನನ್ನ ತಂದೆ ಅದೇ ವಿಮಾದಲ್ಲಿದ್ದರೆಂದು ತಿಳಿದು ಬಂದಿತು.ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ರೈಲ್ವೇ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಯತ್ನ
ಒಂದು ಕಡೆ ಅಪಹರಣವನ್ನು ವ್ಯವಹರಿಸುವ ಭಾಗವಾಗಿ ಮತ್ತು ಇನ್ನೊಂದು ಕಡೆ ನನ್ನ ತಂದೆ ಆ ವಿಮಾದಲ್ಲಿದ್ದರೆಂದು ಸರ್ಕಾರಕ್ಕೆ ಒತ್ತಾಯಿಸುವುದಾ ಎಂದು ಹೇಳಿದರು.