ಬೆಂಗಳೂರು: ನನ್ನ ತಂದೆಯನ್ನು ಪಾಕಿಸ್ತಾನ ಕೊಲ್ಲಲಿಲ್ಲ, ಯುದ್ಧ ಅವರನ್ನು ಕೊಂದಿದ್ದು ಎಂಬ ಭಿತ್ತಿಪತ್ರ ಹಿಡಿದ ಕಾರ್ಗಿಲ್ ಹುತಾತ್ಮ ಯೋಧನ ಮಗಳು ಹಾಗೂ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗುರುಮೆಹರ್ ಕೌರ್ ಅವರ ಹಳೆಯ ವೀಡಿಯೋ ವೈರಲ್ ಆಗಿದ್ದು ಇದಕ್ಕೆ ಸಂಸದ ಪ್ರತಾಪ್ ಸಿಂಹ ಮೀಮ್‍ವೊಂದನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಗುರುಮೆಹರ್ ಅವರನ್ನು ದಾವೂದ್ ಇಬ್ರಾಹಿಂನೊಂದಿಗೆ ಹೋಲಿಕೆ ಮಾಡಲಾದ ಶಂಕನಾದ್ ಎಂಬ ಫೇಸ್‍ಬುಕ್ ಪೇಜ್‍ವೊಂದರ ಮೀಮ್ ಹಂಚಿಕೊಂಡಿರೋ ಪ್ರತಾಪ್ ಸಿಂಹ ನಾನು ನನ್ನ ಮಾತಿಗೆ ಬದ್ಧ ಎಂದು ಟ್ವಿಟ್ಟರ್‍ನಲ್ಲೂ ಹೇಳಿದ್ದಾರೆ.
Advertisement
ಮೀಮ್‍ನಲ್ಲೇನಿದೆ?: ಪಾಕಿಸ್ತಾನ ನನ್ನ ತಂದೆಯನ್ನು ಕೊಲ್ಲಲಿಲ್ಲ, ಯುದ್ಧ ಅವರನ್ನು ಕೊಂದಿದ್ದು ಎಂಬ ಗುರುಮೆಹರ್ ಅವರ ಫೋಟೋ ಪಕ್ಕ ದಾವೂದ್ ಇಬ್ರಾಹಿಂ ಫೋಟೋ ಇದ್ದು 1993ರಲ್ಲಿ ಜನರನ್ನು ಕೊಂದಿದ್ದು ನಾನಲ್ಲ, ಬಾಂಬ್ ಅವರನ್ನು ಕೊಂದಿದ್ದು ಎಂದು ಬರೆಯಲಾಗಿದೆ. ಗುರುಮೆಹರ್ ಅವರ ಫೋಟೋ ಮೇಲೆ ಸೈನಿಕನ ಮಗಳು ಎಂದು ಹಾಗೂ ದಾವೂದ್ ಇಬ್ರಾಹಿಂ ಫೋಟೋ ಮೇಲೆ ಪೊಲೀಸರ ಮಗ ಎಂಬ ಬರಹವಿದೆ. ಕೊನೆಯಲ್ಲಿ ದಾವೂದ್ ಇಬ್ರಾಹಿಂ ಆದ್ರೂ ತನ್ನ ದೇಶ ವಿರೋಧಿ ಚಟುವಟಿಕೆಯನ್ನ ಸಮರ್ಥಿಸಿಕೊಳ್ಳಲು ತಂದೆಯ ಹೆಸರನ್ನು ಊರುಗೋಲಾಗಿ ಬಳಸಲಿಲ್ಲ ಎಂದು ಬರೆಯಲಾಗಿದೆ.
Advertisement
Advertisement
ಈ ಬಗ್ಗೆ ಇಂದು ಮತ್ತೆ ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿರೋ ಪ್ರತಾಪ್ ಸಿಂಹ, ನಾನು ಶಂಕನಾದ್ ಪೇಜಿನ ಪೋಸ್ಟನ್ನು ರೀಪೋಸ್ಟ್ ಮಾಡಿದ್ದೇನೆ ಅಷ್ಟೆ. ನಾನು ನನ್ನ ಮಾತಿಗೆ ಈಗಲೂ ಬದ್ಧ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.
Advertisement
Dear Media, I hv simply reposted d FB post f Shankanad n I stand by it. My constituency is facing drought, show us d way2 get #Azadi frm it.
— Pratap Simha (@mepratap) February 27, 2017
ಇದನ್ನೂ ಓದಿ: ಎಬಿವಿಪಿ ವಿರುದ್ಧ ಮಾತಾಡಿದ್ದಕ್ಕೆ ಕಾರ್ಗಿಲ್ ಹುತಾತ್ಮ ಯೋಧನ ಮಗಳಿಗೆ ಅತ್ಯಾಚಾರದ ಬೆದರಿಕೆ
ಏನಿದು ಪ್ರಕರಣ: ಕಳೆದ ಬುಧವಾರ ದೆಹಲಿಯ ರಾಮ್‍ಜಸ್ ಕಾಲೇಜಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘ(ಎಐಎಸ್‍ಎ) ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಜೆಎನ್‍ಯು ವಿದ್ಯಾರ್ಥಿಗಳಾದ ಉಮರ್ ಖಲೀದ್ ಹಾಗೂ ಶೆಹ್ಲಾ ರಷೀದ್‍ರನ್ನು ಕಲ್ಚರ್ ಆಫ್ ಪ್ರೊಟೆಸ್ಟ್ಸ್ ಎಂಬ ಸೆಮಿನಾರ್ ನೀಡಲು ಆಹ್ವಾಸಲಾಗಿತ್ತು. ಇದಕ್ಕೆ ಅಬಿವಿಪಿ ವಿರೋಧ ವ್ಯಕ್ತಪಡಿಸಿದ್ದೇ ಈ ಗಲಾಟೆಗೆ ಕಾರಣವಾಗಿದೆ. ಇದಾದ ಬಳಿಕ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗುರ್‍ಮೆಹರ್ ಕೌರ್, ನಾನು ಎಬಿವಿಪಿಗೆ ಹೆದರುವುದಿಲ್ಲ. ನಾನು ಒಂಟಿಯಲ್ಲ, ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ನನ್ನ ಜೊತೆಗಿದ್ದಾರೆ ಎಂಬ ಭಿತ್ತಿಪತ್ರ ಹಿಡಿದಿರುವ ಫೋಟೋವನ್ನ ಫೇಸ್‍ಬುಕ್ ಪ್ರೊಫೈಲ್ ಪಿಕ್ಚರ್ ಮಾಡಿದ್ದರು. ನಂತರ ಈ ಫೋಟೋ ವೈರಲ್ ಆಗಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೇನಲ್ಲಿ ವೈರಲ್ ಆಗಿದ್ದ ಗುರುಮೆಹರ್ ಕೌರ್ ಅವರ ವೀಡಿಯೋವೊಂದರಲ್ಲಿ ಪಾಕಿಸ್ತಾನ ನನ್ನ ತಂದೆಯನ್ನು ಕೊಲ್ಲಲಿಲ್ಲ, ಯುದ್ಧ ಅವರನ್ನು ಕೊಂದಿದ್ದು ಎಂಬ ಭಿತ್ತಿಪತ್ರ ಹಿಡಿದಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆ ಸಿಕ್ಕಿದ್ದು ಕ್ರಿಕೆಟರ್ ವೀರೆಂದ್ರ ಸೆಹ್ವಾಗ್, ನಟ ರಂದೀಪ್ ಹೂಡಾ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕಾರ್ಗಿಲ್ ಹುತಾತ್ಮ ಯೋಧನ ಮಗಳ ಈ ಹಳೇ ಪೋಸ್ಟ್ ಗೆ ಸೆಹ್ವಾಗ್ ಪ್ರತಿಕ್ರಿಯಿಸಿದ್ದು ಹೀಗೆ