ಮೆಲ್ಬರ್ನ್: 40 ವರ್ಷದ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಸಚಿನ್ ಕೋಪ ಮಾಡಿಕೊಂಡಿದ್ದನ್ನು ಹಲವು ಬಾರಿ ನೋಡಿದ್ದು, ಆದರೆ ಧೋನಿ ಕೋಪಗೊಂಡಿದ್ದನ್ನು ಒಮ್ಮೆಯೂ ನೋಡಿಲ್ಲ ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
37 ವರ್ಷದ ಧೋನಿ ಕ್ರಿಕೆಟ್ ಲೆಜೆಂಡ್ ಆಟಗಾರ. ವೈಯಕ್ತಿಕವಾಗಿ ನಾನು ಧೋನಿ ಕೋಪಗೊಂಡಿದನ್ನು ನೋಡಿಲ್ಲ. ಆದರೆ ಸಚಿನ್ ಅವರು ಕೋಪಗೊಂಡ ಸಂದರ್ಭಗಳನ್ನು ನೋಡಿದ್ದೇನೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
Advertisement
Advertisement
ಧೋನಿರಂತಹ ಮತ್ತೊಬ್ಬ ಆಟಗಾರರನ್ನು ತಂಡಕ್ಕೆ ತರಲು ಆಗುವುದಿಲ್ಲ. ಅಂತಹ ಆಟಗಾರರು 30, 40 ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತಾರೆ. ಒಂದೊಮ್ಮೆ ಧೋನಿ ನಿವೃತ್ತಿ ಹೊಂದಿದರೆ ಆಗ ನಿಮಗೇ ಇದರ ಅರಿವಾಗುತ್ತದೆ ಎಂದರು. ಇದೇ ವೇಳೆ ರಿಷಬ್ ಪಂತ್ ಕುರಿತ ಪ್ರಶ್ನೆಗೆ ಉತ್ತರಿಸಿ, ರಿಷಬ್ ಉತ್ತಮ ಸಾಮಥ್ರ್ಯವನ್ನು ಹೊಂದಿದ್ದು, ಆತ ಮುಂದಿನ 20 ವರ್ಷಗಳಲ್ಲಿ ಧೋನಿ ಸ್ಥಾನವನ್ನು ತುಂಬಿದರೆ ಸಂತಸ ಪಡುತ್ತೇನೆ. ರಿಷಬ್ ಹೀರೋ ಧೋನಿ ಆಗಿದ್ದು, ಟೆಸ್ಟ್ ಸರಣಿಯಲ್ಲಿ ಎಲ್ಲರಿಗಿಂತ ಹೆಚ್ಚು ಸಮಯ ಧೋನಿ ಅವರಿಗೆ ಫೋನ್ ಮಾಡಿ ಮಾತನಾಡಿದ್ದಾನೆ ಎಂದು ಹೇಳಿದರು. ಇದನ್ನು ಓದಿ: ಬಾಲ್ ಹಿಡ್ಕೊಂಡ್ರೆ ನಿವೃತ್ತಿ ಅಂತಾರೆ : ಹಾಸ್ಯ ಚಟಾಕಿ ಹಾರಿಸಿ ಧೋನಿ ಟಾಂಗ್ – ವಿಡಿಯೋ
Advertisement
ಧೋನಿ ಕಳೆದ 10 ವರ್ಷಗಳಿಂದ ತಂಡದ ನಾಯಕರಾಗಿದ್ದು ಟೀಂ ಇಂಡಿಯಾ ಇಂದು ಇಷ್ಟೊಂದು ಬಲಿಷ್ಠವಾಗಿ ರೂಪುಗೊಳ್ಳಲು ಕಾರಣ. ಆತ ತಂಡದಲ್ಲಿದ್ದರೆ ನಾಯಕ ಕೊಹ್ಲಿ ಅವರ ಜವಾಬ್ದಾರಿಯನ್ನು ಅರ್ಧದಷ್ಟು ನಿರ್ವಹಿಸುತ್ತಾರೆ. ಧೋನಿಯ ಅನುಭವ ಡ್ರೆಸಿಂಗ್ ರೂಮ್‍ನಲ್ಲಿ ಉತ್ತಮ ವಾತಾವರಣ ರೂಪಿಸುತ್ತದೆ. 2011 ರಿಂದ ಧೋನಿ ಏನೆ ಸಾಧನೆ ಮಾಡಿದ್ದರು, ಕಳಪೆ ಪ್ರದರ್ಶನ ತೋರಿದ್ದರು ಕೂಡ ಇದುವರೆಗೂ ಒಂದೇ ಒಂದು ಟಿವಿ ಸಂದರ್ಶನವನ್ನು ನೀಡಿಲ್ಲ. ಇದು ಧೋನಿ ಸರಳತೆಗೆ ಸಾಕ್ಷಿ ಎಂದು ಹಾಡಿ ಹೊಗಳಿದರು. ಇದನ್ನು ಓದಿ: ಆನ್‌ಫೀಲ್ಡ್ ನಲ್ಲೇ ಖಲೀಲ್ ಅಹ್ಮದ್ ವಿರುದ್ಧ ಗರಂ ಆದ ಧೋನಿ – ವೈರಲ್ ವಿಡಿಯೋ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv