ರಾಮನಗರ: ನಾನು ಜೈಲಿಗೆ ಹೋಗಿ ಬಂದವನು. ನನ್ನನ್ನೇ ಎದುರು ಹಾಕೋತೀರಾ ಎಂದು ರಾಮನಗರ ಡಿಎಚ್‍ಓ ಅಮರ್‌ನಾಥ್ ರೌಡಿಗಳ ರೀತಿ ಲ್ಯಾಬ್ ಟೆಕ್ನಿಷಿಯನ್ ಗೆ ಅವಾಜ್ ಹಾಕಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಆಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಕೆ ಬಗ್ಗೆ ನಡೆದ ಅಕ್ರಮವನ್ನು ಕೇಳಲು ಬಂದವರ ಮೇಲೆ ಡಿಎಚ್‍ಓ ತಮ್ಮ ಪೌರುಷ ತೋರಿದ್ದಾರೆ. ಕಳೆದ 6 ತಿಂಗಳ ಹಿಂದೆ ರಾಮನಗರ ಡಿಎಚ್‍ಓ ಕಚೇರಿಯಲ್ಲಿಯೇ ಚನ್ನಪಟ್ಟಣ ತಾಲೂಕಿನ ನಂಜಾಪುರ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಗೆ ಅಮರ್‌ನಾಥ್ ಅವರು ಅವಾಜ್ ಹಾಕಿದ್ದಾರೆ.
ನಂಜಾಪುರದ ಆಸ್ಪತ್ರೆಗೆ ಸಿಸಿಟಿವಿಯನ್ನ ಟೆಂಡರ್ ನೀಡದೇ ಅಳವಡಿಸಲಾಗುತಿತ್ತು. ಇದನ್ನು ಆಸ್ಪತ್ರೆಯ ವೈದ್ಯರು ಹಾಗೂ ಲ್ಯಾಬ್ ಟೆಕ್ನಿಷಿಯನ್ ಪುಟ್ಟಸ್ವಾಮಿಗೌಡ ವಿರೋಧಿಸಿದ್ದರು. ಇದರಿಂದ ವೈದ್ಯರ ಸಭೆ ದಿನದಂದು ಪುಟ್ಟಸ್ವಾಮಿಗೌಡರನ್ನ ಕರೆದು ಅಮರ್‌ನಾಥ್ ಧಮ್ಕಿ ಹಾಕಿದ್ದಾರೆ.
ನಾನು ಅರೆಸ್ಟ್ ಆಗಿ 10 ದಿನ ಪರಪ್ಪನ ಅಗ್ರಹಾರದಲ್ಲಿ ಇದ್ದು, ಜೈಲೂಟ ತಿಂದು ಬಂದವನು. ಒಂದು ಮರ್ಡರ್ ಮಾಡಿದರೂ ಅಷ್ಟೇ 10 ಮರ್ಡರ್ ಮಾಡಿದರೂ ಅಷ್ಟೇ ನಾನು ಏನು, ನನ್ನ ಹಿನ್ನೆಲೆ ಏನು ಅಂತ ತಿಳ್ಕೊಳ್ಳಿ. ನನ್ನನ್ನ ಯಾರೂ ಕೆಣಕಬೇಡಿ ಎಂದು ಡಾಕ್ಟರ್ ಗಳ ಮುಂದೆಯೇ ರೌಡಿಗಳ ರೀತಿ ಲ್ಯಾಬ್ ಟೆಕ್ನಿಷಿಯನ್ ಗೆ ಅವಾಜ್ ಹಾಕಿದ್ದಾರೆ. ಈ ದೃಶ್ಯವನ್ನು ಕೆಲವರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ನನಗೆ ಡಿಸ್ಮಿಸ್, ಸಸ್ಪೆನ್ಸನ್ ಅನ್ನೋದು ಪುಟ್ಕೋಸಿ. ಜೈಲಿಗೆ ಹೋಗಿ ಬಂದವನಿಗೆ ಇದೆಲ್ಲ ಯಾವ ಲೆಕ್ಕ. ನಾನ್ ಏನೂ, ನನ್ನ ಹಿನ್ನೆಲೆ ಏನೂ ಅನ್ನೊದನ್ನ ತಿಳ್ಕೋಬೇಕಿತ್ತು. ಡಿಎಚ್‍ಓ ಪೊಸ್ಟ್ ಕತ್ತೆ ಬಾಲ, ಇವತ್ತೇ ಬೇಕಾದರೆ ರಿಸೈನ್ ಮಾಡುತ್ತೇನೆ ಎಂದು 60 ಜನ ಡಾಕ್ಟರ್ ಮುಂದೆಯೇ ಅವಾಜ್ ಹಾಕಿದ್ದಾರೆ.
https://www.youtube.com/watch?v=qa6yVMlKBhQ