ಬೆಂಗಳೂರು: ಕೆಲ ದಿನಗಳ ಹಿಂದೆ ಮಾಜಿ ಸಚಿವ, ಬಿಜೆಪಿ (BJP) ಶಾಸಕ ಸುರೇಶ್‌ಕುಮಾರ್ (S Sureshkumar) ಅನಾರೋಗ್ಯದ ಹಿನ್ನೆಲೆ ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಐಸಿಯು ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಿದ್ದು ಈಗ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ತಮ್ಮ ಅನಾರೋಗ್ಯ ಸಂಬಂಧ ವದಂತಿ ಹಬ್ಬಿದ ಹಿನ್ನೆಲೆ ಸುರೇಶ್‌ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ತನಗಾದ ಆರೋಗ್ಯ ಸಮಸ್ಯೆಯ ಬಗ್ಗೆ ದೀರ್ಘವಾದ ಪೋಸ್ಟ್ ಹಾಕಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ
Advertisement
ಪೋಸ್ಟ್ನಲ್ಲಿ ಏನಿದೆ?
ನನ್ನ ಆರೋಗ್ಯ ಕಳೆದ ಆಗಸ್ಟ್ 20 ರಿಂದ ತೀವ್ರ ಸಮಸ್ಯೆಗೆ ಒಳಗಾಗಿತ್ತು. ಆಗಸ್ಟ್ 15 ರವರೆಗೆ ನಮ್ಮ ಕ್ಷೇತ್ರದಲ್ಲಿ ಸುಮಾರು 3 ಕಡೆ ಜನಸ್ಪಂದನ, ಆಗಸ್ಟ್ 14 ರಂದು ಮಧ್ಯರಾತ್ರಿ ರಾಷ್ಟ್ರಧ್ವಜ ಹಾರಿಸುವ ಭರ್ಜರಿ ಕಾರ್ಯಕ್ರಮ, ನಮ್ಮ ಕ್ಷೇತ್ರದ ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಿದ ಅತ್ಯಂತ ಯಶಸ್ವಿ ಆಶು ಭಾಷಣ ಸ್ಪರ್ಧೆ, ಆಗಸ್ಟ್ 15 ರಂದು ಬೆಳಗ್ಗೆಯಿಂದ ಸಂಜೆಯವರೆಗೂ ಸ್ವಾತಂತ್ರ‍್ಯ ದಿನಾಚರಣೆಯ ಕಾರ್ಯಕ್ರಮಗಳು, ಆಗಸ್ಟ್ 16 ರಂದು ಕ್ಷೇತ್ರದ ರಾಮ ಮಂದಿರ ವಾರ್ಡಿನಲ್ಲಿ ಕೈಗೊಂಡ ಜನ ಸ್ಪಂದನ ಕಾರ್ಯಕ್ರಮ ಹೀಗೆ ಸಂಪೂರ್ಣವಾಗಿ ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ಭಾರೀ ಮಳೆಗೆ ಹೆದ್ದಾರಿ ಕುಸಿತ – ಮೃತರ ಸಂಖ್ಯೆ 6ಕ್ಕೆ ಏರಿಕೆ
Advertisement
Advertisement
ಆಗಸ್ಟ್ 16, ವರಮಹಾಲಕ್ಷ್ಮಿ ಹಬ್ಬದಂದು ರಾಮಮಂದಿರ 4ನೇ ಬ್ಲಾಕ್‌ನ ಎಬಿಸಿ ಪಾರ್ಕ್ನಲ್ಲಿ ಮುಂಜಾನೆ ಜನಸ್ಪಂದನ ಕಾರ್ಯಕ್ರಮ ಯೋಜಿಸಲಾಗಿತ್ತು. ಅಂದು ಸಂಜೆ ಐದು ಗಂಟೆಯ ವೇಳೆಗೆ ನನ್ನ ಆರೋಗ್ಯ ಸ್ವಲ್ಪ ಹೆಚ್ಚೇ ಹದಗೆಟ್ಟಿತು. ಸಂಜೆ ವೇಳೆಗೆ ಎರಡು ಕಾಲುಗಳು ತುಂಬಾ ನೋಯಲು ಪ್ರಾರಂಭಿಸಿದವು. ಮಾರನೆಯ ದಿನ ಇಡೀ ದೇಹದಲ್ಲಿ ಒಂದಿಂಚು ಸಹ ನೋವು ಇಲ್ಲದ ಜಾಗ ನನಗೆ ಲಭ್ಯವಿರಲಿಲ್ಲ. ಅದರ ಮಾರನೆಯ ದಿನ ನನ್ನ ರಕ್ತ ಪರೀಕ್ಷೆ ಮಾಡಲಾಯಿತು. ಅದರಲ್ಲೂ ಯಾವುದೇ ಚಿನ್ಹೆ ಗೊತ್ತಾಗಲಿಲ್ಲ. ಇದನ್ನೂ ಓದಿ: ನ್ಯಾಯಾಲಯದ ತೀರ್ಪು ಬರುವ ಮೊದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿಎಸ್‌ವೈ
Advertisement
ಆಗಸ್ಟ್ 19 ರಂದು ನೋವು ತಡೆಯಲಾರದೆ ಬಾಧೆ ಎದುರಿಸಲಾಗದೇ ಆಸ್ಪತ್ರೆಗೆ ಸೇರಲೇಬೇಕಾಯಿತು. ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಕೊಟ್ಟು ಬುಧವಾರ ಅಂದರೆ 23 ಆಗಸ್ಟ್ ರಂದು ನನ್ನ ಡಿಸ್ಚಾರ್ಜ್ ಮಾಡಲಾಯಿತು. ಆದರೆ ಮಾರನೆಯ ದಿನ ಮತ್ತು ವಿಪರೀತ ದೇಹದಲ್ಲಿ ಅಸ್ತವ್ಯಸ್ತ ಉಂಟಾಯಿತು ಆಗ ವೈದ್ಯರು ತಪಾಸಣೆ ಮಾಡಿದ ಮೇಲೆ ನನಗೆ ಚಿಕನ್ ಗುನ್ಯಾ ಸಮಸ್ಯೆ ಗಂಭೀರ ಸ್ವರೂಪ ತಾಳಿದ್ದು ವೈದ್ಯರಿಂದ ತಿಳಿಯಿತು. ಇದನ್ನೂ ಓದಿ: ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಹಿಡಿದ ಕಾಂಗ್ರೆಸ್ – ಬಿಜೆಪಿಗೆ ಮುಖಭಂಗ
ಅಲ್ಲಿಂದ ಪ್ರಾರಂಭವಾದ ನನ್ನ ಚಿಕನ್ ಗುನ್ಯಾ (Chikungunya) ವಿರುದ್ಧದ ಹೋರಾಟ ಇಂದು ಬೆಳಗ್ಗೆ ಒಂದು ಹಂತ ತಲುಪಿ, ಎಲ್ಲಾ ವೈದ್ಯರ ಉತ್ತಮ ಆರೈಕೆ, ಅಗತ್ಯ ಚಿಕಿತ್ಸೆ ಮೂಲಕ, ಆಸ್ಪತ್ರೆಯ ನರ್ಸ್ಗಳ ಕಾಳಜಿಯಿಂದ ಕೂಡಿದ ಸೇವೆಯ ಪರಿಣಾಮವಾಗಿ ಇಂದು ನಾನು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ. ತಮಗೆಲ್ಲ ಗೊತ್ತು ಚಿಕನ್ ಗುನ್ಯಾ ನಂತರದ ಪರಿಣಾಮ ಸುಧಾರಿಸಲು ಕನಿಷ್ಠ 3 ವಾರಗಳು ಬೇಕು. ವೈದ್ಯರುಗಳ ಸಲಹೆಯ ಮೇರೆಗೆ ನಾನು ಸುಧಾರಣೆಗಾಗಿ ನನ್ನ ಸಂಬಂಧಿಕರ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ಗುಣಮುಖವಾಗುವ ಹಾದಿಯಲ್ಲಿ ನನಗೆ ಮತ್ತೊಮ್ಮೆ ತಮ್ಮೆಲ್ಲರ ಆಶೀರ್ವಾದ ಹಾರೈಕೆ ಅಗತ್ಯವಿದೆ. ಇದನ್ನೂ ಓದಿ: ರಾಜಸ್ಥಾನ ಪೊಲೀಸ್ ಅಧೀನ ಸೇವೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ
ಅನೇಕ ಗೆಳೆಯರು ಕುಕ್ಕೆ ಸುಬ್ರಹ್ಮಣ್ಯದಿಂದ ಹಿಡಿದು, ಅಂಗಾಳ ಪರಮೇಶ್ವರಿ ದೇವಿಯವರೆಗೂ ವಿವಿಧ ಪೂಜೆ ಸಲ್ಲಿಸಿ ನನ್ನ ಆರೋಗ್ಯ ಸುಧಾರಿಸಲೆಂದು ಹಾರೈಸಿರುವುದು ನನ್ನ ಮನ ತುಂಬಿ ಬಂದಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಆರ್ಕೆಸ್ಟ್ರಾ ನಡೆಯುತ್ತಿದ್ದ ವೇಳೆ ಕುಸಿದ ಟಿನ್ ಶೆಡ್ – ನೂರಾರು ಜನರಿಗೆ ಗಾಯ, 10 ಮಂದಿ ಗಂಭೀರ