ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಅಧಿಕೃತ ನಿವಾಸದಲ್ಲಿ ‘ಖಾಸಗಿ ಔತಣಕೂಟ’ದ ಸಂದರ್ಭದಲ್ಲಿ, ಭಾರತದ ಜನರಿಗೆ ಸೇವೆ ಸಲ್ಲಿಸುವುದು ತಮ್ಮ ಏಕೈಕ ಗುರಿ ಎಂದು ಹೇಳಿದ್ದಾರೆ.
ನೀವು ನಿಮ್ಮ ಇಡೀ ಜೀವನವನ್ನು ಭಾರತೀಯ ಜನರ ಸೇವೆಗೆ ಮುಡಿಪಾಗಿಟ್ಟಿದ್ದೀರಿ. ಜನರು ಅದನ್ನು ಅನುಭವಿಸುತ್ತಾರೆ ಎಂದು ರಷ್ಯಾದ (Russia) ಅಧ್ಯಕ್ಷರು ಪ್ರಧಾನಿಗೆ ತಿಳಿಸಿದ್ದರು. ಇದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ, ನೀವು ಹೇಳಿದ್ದು ಸರಿ. ನನಗೆ ಒಂದೇ ಗುರಿ ಇದೆ. ನನ್ನ ದೇಶ, ಭಾರತದ ಜನರು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 22ನೇ ಶೃಂಗಸಭೆ – ರಷ್ಯಾದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ
ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ಪುಟಿನ್ ಅವರು, ಖಾಸಗಿ ಔತಣಕೂಟಕ್ಕಾಗಿ ನೊವೊ-ಒಗರಿಯೋವೊದಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಸ್ವಾಗತಿಸಿದರು. ಈ ವೇಳೆ ಪುಟಿನ್, ಗೌರವಾನ್ವಿತ ಪ್ರಧಾನ ಮಂತ್ರಿ! ಆತ್ಮೀಯ ಸ್ನೇಹಿತ! ಮತ್ತೊಮ್ಮೆ ಶುಭ ಮಧ್ಯಾಹ್ನ, ನಿಮ್ಮನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ. ನಾವು ನಾಳೆ ಅಧಿಕೃತ ಸಂಭಾಷಣೆಗಳನ್ನು ನಡೆಸುತ್ತೇವೆ. ಆದರೆ ಇಂದು ಈ ಮನೆಯ ವಾತಾವರಣದಲ್ಲಿ ನಾವು ಬಹುಶಃ ಶಾಂತವಾಗಿ ಮಾತನಾಡಬಹುದು ಎಂದು ಮೋದಿಗೆ ತಿಳಿಸಿದ್ದಾರೆ.
ಮೂರನೇ ಅವಧಿಗೆ ಪ್ರಧಾನಿಯಾದ ಮೋದಿ ಅವರನ್ನು ಪುಟಿನ್ ಅಭಿನಂದಿಸಿದ್ದಾರೆ. ನೀವು ಪ್ರಧಾನಿಯಾಗಿ ಮತ್ತೆ ಆಯ್ಕೆಯಾಗಿರುವುದಕ್ಕೆ ಮೊದಲು ನಿಮ್ಮನ್ನು ಅಭಿನಂದಿಸುತ್ತೇನೆ. ಇದು ಆಕಸ್ಮಿಕವಲ್ಲ ಎಂದು ನಾನು ಭಾವಿಸುತ್ತೇನೆ. ನೀವು ತುಂಬಾ ಶಕ್ತಿಯುತ ವ್ಯಕ್ತಿಯಾಗಿದ್ದೀರಿ. ಭಾರತ ಮತ್ತು ಭಾರತೀಯ ಜನರ ಹಿತಾಸಕ್ತಿಗಳಲ್ಲಿ ಫಲಿತಾಂಶಗಳನ್ನು ಸಾಧಿಸುವುದು ಹೇಗೆ ಎಂದು ನಿಮಗೆ ತಿಳಿದಿದೆ. ಭಾರತವು ಆರ್ಥಿಕತೆಯ ವಿಷಯದಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಬಹುಶಃ ಈಗ ಇದು ಜನಸಂಖ್ಯೆಯ ದೃಷ್ಟಿಯಿಂದ ವಿಶ್ವದ ಅತಿದೊಡ್ಡ ದೇಶವಾಗಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಮಿಡತೆ, ರೇಷ್ಮೆ ಹುಳು ಸೇರಿ 16 ಬಗೆಯ ಕೀಟ ಸೇವನೆಗೆ ಸಿಂಗಾಪುರ ಸರ್ಕಾರ ಅನುಮತಿ
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಮನೆಯಲ್ಲಿ ಸ್ನೇಹಿತನನ್ನು ಭೇಟಿಯಾಗುವುದು ತುಂಬಾ ಸಂತೋಷವಾಗಿದೆ. ನೀವು ನನ್ನನ್ನು ನಿಮ್ಮ ಮನೆಗೆ ಆಹ್ವಾನಿಸಿದ್ದೀರಿ. ಅಂತಹ ಆಸಕ್ತಿದಾಯಕ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.