ಟಾಲಿವುಡ್ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಆಡಿದ್ದಾರೆ ಎನ್ನಲಾದ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ತಾವು ಆ ರೀತಿ ಮಾತೇ ಆಡಿಲ್ಲ. ಎಲ್ಲವೂ ಕಪೋಕಲ್ಪಿತ ಎಂದು ಅವರು ವಿವರಣೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ‘ಪುಷ್ಪ ಸಿನಿಮಾದ ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾ ಮಂದಣ್ಣಕ್ಕಿಂತಲೂ (Rashmika Mandanna) ಚೆನ್ನಾಗಿ ಮಾಡುತ್ತಿದ್ದೆ’ ಎಂದು ಹೇಳಿದ್ದಾರೆ ಎನ್ನಲಾಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು.
ಈ ಕುರಿತು ಐಶ್ವರ್ಯಾ ರಾಜೇಶ್ ಅವರ ಪಿ.ಆರ್ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿ, ‘ಇದೊಂದು ತಪ್ಪು ಕಲ್ಪನೆಯಿಂದ ಆದ ಪ್ರಮಾದ. ಯಾವುದೇ ಕಾರಣಕ್ಕೂ ಐಶ್ವರ್ಯಾ ಅವರು ಆ ರೀತಿ ಮಾತುಗಳನ್ನು ಆಡಿಲ್ಲ. ‘ನಿಮ್ಮ ನೆಚ್ಚಿನ ಪಾತ್ರ ಯಾವುದು? ಯಾವ ರೀತಿಯ ಪಾತ್ರದಲ್ಲಿ ಕಾಣಲು ಬಯಸುತ್ತೀರಿ’ ಎಂದು ಕೇಳಲಾದ ಪ್ರಶ್ನೆಗೆ ‘ಪುಷ್ಪ (Pushpa) ಸಿನಿಮಾದ ಶ್ರೀವಲ್ಲಿ (Srivalli) ರೀತಿಯ ಪಾತ್ರಗಳು ಎಂದರೆ ನನಗೆ ಇಷ್ಟ. ಆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ’ ಎಂದಿದ್ದಾರೆ. ಇದನ್ನೂ ಓದಿ:ಸಹೋದರ ವರುಣ್ ತೇಜ್- ಲಾವಣ್ಯ ಮದುವೆ ಬಗ್ಗೆ ನಿಹಾರಿಕಾ ಪ್ರತಿಕ್ರಿಯೆ
ಐಶ್ವರ್ಯಾ ರಾಜೇಶ್ ಆಡಿದ್ದಾರೆ ಎನ್ನಲಾದ ಮಾತುಗಳು ಸಖತ್ ಟ್ರೋಲ್ ಆಗಿದ್ದವು. ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕೂಡ ಐಶ್ವರ್ಯಾ ಮೇಲೆ ಮುಗಿ ಬಿದ್ದಿದ್ದರು. ಕೆಟ್ಟ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದರು. ಇದೆಲ್ಲವನ್ನೂ ಗಮನಿಸಿದ ಐಶ್ವರ್ಯಾ ಅದನ್ನು ತಿಳಿ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಾವು ಆ ರೀತಿಯಲ್ಲಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.