ನನಗೆ ಕಾಲು ನೋವಿರುವ ಕಾರಣ ಸದನದಲ್ಲಿ ಭಾಗವಹಿಸಿಲ್ಲ ಅಷ್ಟೇ: ಕೆ.ಎಸ್ ಈಶ್ವರಪ್ಪ

Advertisements

ಶಿವಮೊಗ್ಗ: ನನಗೆ ಕಾಲು ನೋವಿರುವ ಕಾರಣ ಭಾಗವಹಿಸಿಲ್ಲ ಅಷ್ಟೇ. ಇದರಲ್ಲಿ ಬೇರೆ ವಿಶೇಷ ಏನಿಲ್ಲ. ನೀವು ಹುಡುಕಿದ್ರೂ ಸಿಗಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K S Eshwarappa) ಹೇಳಿದ್ದಾರೆ.

Advertisements

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಸದನ (Session) ದಲ್ಲಿ ಭಾಗವಹಿಸಬೇಕು ಎಂಬ ಆಸೆ ಇದೆ. ಆದರೆ ವೈದ್ಯರು ರೆಸ್ಟ್ ಮಾಡಿ ಅಂದಿದ್ದಾರೆ ಎಂದರು.

Advertisements

ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸಮರ್ಥವಾಗಿ ಟೀಕೆ ಮಾಡ್ತಿದ್ದಾರೆ ಅನ್ನುವ ಅಂಶ ರಾಜ್ಯದ ಜನತೆಗೆ ಅನಿಸ್ತಿಲ್ಲ. ಗಂಟಲಿನಿಂದ ಜೋರಾಗಿ ವಾಗ್ದಾಳಿ ಮಾಡಿದ್ರೆ ಜನ ಒಪ್ಪುವುದಿಲ್ಲ. ನಾವು ಭ್ರಷ್ಟಾಚಾರ ಬಿಚ್ಚಿಡ್ತೀವಿ ಬಿಚ್ವಿಡ್ತೀವಿ ಅಂತಾ ಮೊದಲಿನಿಂದಲೂ ಹೇಳಿಕೊಂಡು ಬಂದರು. ಇವತ್ತಿನವರೆಗೂ ಭ್ರಷ್ಟಾಚಾರದ ಬಗ್ಗೆ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. 40% ಅಂತಾ ಕೆಂಪಣ್ಣ ಹೇಳಿದ್ರೂ, ಆದರೆ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ಒಬ್ಬನೇ ಒಬ್ಬ ಸಚಿವನ ವಿರುದ್ದ ದಾಖಲೆ ಬಿಡುಗಡೆ ಮಾಡಿದ್ರೆ ಉತ್ತರ ಕೊಡ್ತೀವಿ. ಕೆಂಪಣ್ಣ ಕಾಂಗ್ರೆಸ್ (Congress) ಏಜೆಂಟ್ ಅನ್ನುವ ಅನುಮಾನ ರಾಜ್ಯದ ಜನರದ್ದಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಬೋಟ್ (Boat) ನಲ್ಲಿ ತೇಲಿಕೊಂಡು ಹೋಗಿದ್ದನ್ನು ನೋಡಿದೆ. ಒಂದೂವರೆ ಅಡಿ ನೀರು ನನ್ನ ಮೊಮ್ಮಗ ಆ ನೀರಿನಲ್ಲಿ ನಡೆದುಕೊಂಡು ಹೋಗ್ತಾನೆ. ಇವರು ಒಂದೂವರೆ ಅಡಿ ನೀರಲ್ಲಿ ಬೋಟಲ್ಲಿ ನಿಂತುಕೊಂಡು ನಾನು ವಿಪಕ್ಷ ನಾಯಕನಾಗಿ ವೀಕ್ಷಣೆ ಮಾಡದೇ ಅಂತಾ ತೋರಿಸಲು ಮಾಡಿದ ನಾಟಕ. ಅಕ್ರಮ ಒತ್ತುವರಿಯನ್ನು ಬಿಜೆಪಿ (BJP) ತೆರವು ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: 2030ರೊಳಗೆ ರಾಜ್ಯದ ಎಲ್ಲ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್ ಮಾಡುವ ಗುರಿ: ಶ್ರೀರಾಮುಲು ಘೋಷಣೆ

Advertisements

ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಮಾಡಲಿಲ್ಲ. ನಲಪಾಡ್ (Nalapad) ಅವರ ಸಂಸ್ಥೆಯಿಂದಲೇ ಒತ್ತುವರಿ ಆಗಿದೆ ಅಂತಾ ಒಪ್ಪಿಕೊಂಡಿದ್ದಾರೆ. ಇಷ್ಟು ವರ್ಷ ಒತ್ತುವರಿ ಅವಕಾಶ ಮಾಡಿ ಕೊಟ್ಟಿದ್ದೆ ಕಾಂಗ್ರೆಸ್. ಯಾವುದೇ ಪಕ್ಷ ನೋಡದೇ ಒತ್ತುವರಿಯನ್ನು ಸರ್ಕಾರ ತೆರವು ಮಾಡುತ್ತಿದೆ. ಪ್ರಭಾವಿ ವ್ಯಕ್ತಿಗಳ ಬಿಟ್ಟು ಬಡವರ ಕಟ್ಟಡ ಒಡೆಯುತ್ತಿದ್ದಾರೆ ಎಂಬ ಬಣ್ಣ ಕಟ್ಟುತ್ತಿದ್ದಾರೆ ಎಂದು ಹೇಳಿದರು.

ಯಾವುದೇ ಒಳ್ಳೆಯ ಕೆಲಸ ಮಾಡುವಾಗ ಟೀಕೆ ಇದ್ದದ್ದೆ. ಒತ್ತುವರಿ ತೆರವು ಮಾಡಲು ಜನರೇ ಸಹಕಾರ ಕೊಡುತ್ತಿದ್ದಾರೆ. ಹೀಗಾಗಿ ಬೆಂಗಳೂರು ನಾಗರೀಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್ – ಇಂದು 8 ʼಕೈʼ ಶಾಸಕರು ಬಿಜೆಪಿ ಸೇರ್ಪಡೆ

Live Tv

Advertisements
Exit mobile version