ತೆಲುಗು ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಇಬ್ಬರೂ ಸಂಬಂಧ ಹೊಂದಿದ್ದಾರೆ ಎಂದು ನರೇಶ್ ಪತ್ನಿ ರಮ್ಯಾ ಆರೋಪ ಮಾಡಿದ್ದರು. ನಾಲ್ಕೈದು ವರ್ಷಗಳಿಂದ ಅವರು ಜೊತೆಯಾಗಿಯೇ ಇದ್ದಾರೆ ಎಂದೂ ಹೇಳಿದ್ದರು. ಹಾಗಾಗಿ ನಟ ಸುಚೇಂದ್ರ ಪ್ರಸಾದ್ ಜೊತೆ ಪವಿತ್ರಾ ಲೋಕೇಶ್ ಇಲ್ಲವಾ? ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೆ ಸ್ವತಃ ಪವಿತ್ರಾ ಲೋಕೇಶ್ ಅವರೇ ಉತ್ತರಿಸಿದ್ದಾರೆ. ಪಬ್ಲಿಕ್ ಟಿವಿ ಎಕ್ಸ ಕ್ಲೂಸಿವ್ ಸಂದರ್ಶನದಲ್ಲಿ ತಮ್ಮ ಮತ್ತು ಸುಚೇಂದ್ರ ಪ್ರಸಾದ್ ಜೊತೆಗಿನ ವೈವಾಹಿಕ ಜೀವನದ ಕುರಿತು ಮಾತನಾಡಿದ್ದಾರೆ.
“ಸುಚೇಂದ್ರ ಪ್ರಸಾದ್ ನನ್ನ ಕುರಿತು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ನಾನು ಆರು ವರ್ಷಗಳಿಂದ ಅವರ ಜೊತೆ ಬದುಕುತ್ತಿಲ್ಲ. 2017ರಿಂದಲೇ ನಾನು ಅವರಿಂದ ದೂರವಾಗಿ, ಬೇರೆ ಫ್ಲ್ಯಾಟ್ ನಲ್ಲಿ ಬದುಕುತ್ತಿದ್ದೇನೆ. ಯಾಕೆ ಅವರಿಂದ ದೂರವಾದೆ, ನಮ್ಮಿಬ್ಬರ ಮಧ್ಯೆ ಅದೇನಾಯಿತು ಎನ್ನುವುದನ್ನು ನಾನು ಹೇಳಲಾರೆ. ಅದು ನನ್ನ ವೈಯಕ್ತಿಕ ನಿರ್ಧಾರ. ಈ ಕುರಿತು ಮತ್ತೇನೂ ಹೇಳಲಾರೆ” ಎಂದಿದ್ದಾರೆ ಪವಿತ್ರಾ ಲೋಕೇಶ್. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ
ಪವಿತ್ರಾ ಲೋಕೇಶ್ ಮತ್ತ ಸುಚೇಂದ್ರ ಪ್ರಸಾದ್ ಹಲವು ವರ್ಷಗಳ ಕಾಲ ಸತಿಪತಿಗಳಾಗಿ ಮಾದರಿ ದಂಪತಿಗಳಾಗಿದ್ದರು. ಅನೇಕ ಬಾರಿ ಪವಿತ್ರಾ ಅವರ ಬಗ್ಗೆ ಸುಚೇಂದ್ರ ಪ್ರಸಾದ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ರಮ್ಯಾ ಅವರು ಆರೋಪ ಮಾಡಿದ ನಂತರ ಸುಚೇಂದ್ರ ಪ್ರಸಾದ್ ಧ್ವನಿ ಎನ್ನಲಾದ ಆಡಿಯೋದಲ್ಲಿ ಪವಿತ್ರಾ ಅವರ ಬಗ್ಗೆ ಸಲ್ಲದ ಮಾತುಗಳನ್ನೂ ಆಡಿದ್ದಾರೆ. ಪವಿತ್ರಾ ಲೋಕೇಶ್ ಬಗ್ಗೆ ಮರುಕ ವ್ಯಕ್ತ ಪಡಿಸಿದ್ದಾರೆ.