– ನನ್ನ ಅಸಮಾಧಾನ ಜಿಲ್ಲೆಯ ಕೆಲ ಶಾಸಕರ ವಿರುದ್ಧ ಎಂದ ಶಾಸಕ
ಕೋಲಾರ: ನನಗೆ ಸರ್ಕಾರ, ಮಂತ್ರಿಗಳ ವಿರುದ್ಧ ಬೇಸರ ಇಲ್ಲ. ನನ್ನ ಅಸಮಾಧಾನ ಏನಿದ್ದರೂ ಜಿಲ್ಲೆಯ ಕೆಲ ಶಾಸಕರ ವಿರುದ್ಧ ಎಂದು ಮಾಲೂರು ಶಾಸಕ ಕೆವೈ ನಂಜೇಗೌಡ (KY Nanjegowda) ಹೇಳಿದ್ದಾರೆ.
ಕೋಲಾರದಲ್ಲಿ (Kolar) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾದಿಯಾಗಿ ಡಿಸಿಎಂ, ಸಚಿವರು ನನಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಯಾವುದೇ ಮಂತ್ರಿಗಳು ಸಹ ನನಗೆ ಅನುದಾನ ನೀಡದೆ ಇಲ್ಲ. ಸರ್ಕಾರದಲ್ಲಿ ಮಂತ್ರಿ ಮಂಡಲದಲ್ಲಿ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ ಎಂದರು. ಇದನ್ನೂ ಓದಿ: ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿ ದಾಖಲೆ ಬರೆದ ಸಿದ್ದರಾಮಯ್ಯ
ನಾಳೆ ಬೆಳಗ್ಗೆ ನನಗೆ ಸುರ್ಜೇವಾಲ ಅವರು ಬುಲಾವ್ ನೀಡಿದ್ದಾರೆ. ಪಕ್ಷಕ್ಕೆ ಡ್ಯಾಮೇಜ್ ಆಗುವ ಕೆಲ ಶಾಸಕರ ವರ್ತನೆ ಜೊತೆಗೆ ಪಕ್ಷಕ್ಕೆ ಡ್ಯಾಮೇಜ್ ಆಗುವ ಬೆಳವಣಿಗೆಗಳ ಕುರಿತು ತಿಳಿಸುವೆ. ಪಕ್ಷಕ್ಕಿಂತ ನಾವ್ಯಾರು ದೊಡ್ಡವರಲ್ಲ, ಪಕ್ಷಕ್ಕೆ ನಾವೆಲ್ಲರೂ ಬದ್ಧ. ಅಂತಹ ವಿಚಾರಗಳನ್ನು ನಾನು ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡುವೆ ಎಂದು ಹೇಳಿದರು. ಇದನ್ನೂ ಓದಿ: 60 ವರ್ಷದಿಂದ ಉಳುಮೆ ಮಾಡ್ತಿದ್ದ ರೈತನಿಗೆ ಶಾಕ್ – ತಹಶೀಲ್ದಾರ್ ಸಹಿ ನಕಲಿಸಿ, 8 ಎಕರೆ ಬೇರೆಯವ್ರ ಹೆಸರಿಗೆ ವರ್ಗ
ಪಕ್ಷ ಇಂತಹ ದೊಡ್ಡ ಅವಕಾಶ ಮಾಡಿಕೊಟ್ಟಿರುವುದು ನನ್ನ ಪುಣ್ಯ. ಹಾಗಾಗಿ ನಾಳೆ ಸುರ್ಜೇವಾಲ ಅವರನ್ನ ಭೇಟಿಯಾಗಿ ಎಲ್ಲಾ ವಿಚಾರಗಳ ಕುರಿತು ಚರ್ಚಿಸುವೆ. ಅಲ್ಲದೇ ಡಿಸಿಸಿ ಬ್ಯಾಂಕ್ ಹಾಗೂ ಕೋಮುಲ್ ಬೆಳವಣಿಗೆಗಳ ಕುರಿತು ಮಾತನಾಡುವೆ ಎಂದು ತಿಳಿಸಿದರು. ಇದನ್ನೂ ಓದಿ: ಹೃದಯಾಘಾತವಲ್ಲ ಟ್ರ್ಯಾಕ್ಟರ್ ಅಪಘಾತದಲ್ಲಿ ಹಾಸನದ ಯೋಧ ಸಾವು