ಬೆಂಗಳೂರು: ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಸಂಬಂಧಿಸಿದಂತೆ ಪ್ರಕಟವಾದ ಫೇಸ್‍ಬುಕ್ ಪೋಸ್ಟಿಗೂ ನನಗೂ ಸಂಬಂಧವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಫೇಸ್ಬುಕ್ ಲೈವ್ ಮೂಲಕ ಸ್ಪಷ್ಟಪಡಿಸಿದ ಅವರು, ಇಂಟರ್ನೆಟ್ ಅನ್ನೋದು ಫ್ರೀ ಮೀಡಿಯಾ. ಫೇಸ್ಬುಕ್ ನಲ್ಲಿ ಯಾರು ಯಾರ ಬಗ್ಗೆ ಬೇಕಾದ್ರೂ ಪರ, ವಿರೋಧಗಳ ಪೇಜ್ ಮಾಡಬಹುದು. ಪರ ಅಂದ್ಕೊಂಡು ಸಂಖ್ಯೆ ಜಾಸ್ತಿ ಆದಕೂಡಲೇ ವಿರೋಧ ಅಂತ ಮಾಡ್ಕೊಳ್ಳಬಹುದು. ಇದು ಯಾರ ಕಂಟ್ರೋಲಲ್ಲೂ ಇರಲ್ಲ. ಫೇಸ್ಬುಕ್ ನಲ್ಲಿ ನಾನು ಯಾರನ್ನು ಫಾಲೋ ಮಾಡ್ತಿಲ್ಲ. ಹೀಗಾಗಿ ಕೆಲವೊಂದು ಅಪ್ ಡೇಟ್ ಗಳು ಕಾಣಿಸುವುದು ಇಲ್ಲ ಎಂದು ಹೇಳಿದರು.
13 ವರ್ಷದ ನನ್ನ ಪ್ರತಿಕೋದ್ಯಮದ ಅನುಭವದಲ್ಲಿ ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಛತ್ರಪತಿ ಶಿವಾಜಿ ಮೊದಲಾದವರ ಬಗ್ಗೆ ಬರೆಯುತ್ತಾ ಬಂದಿದ್ದೀನಿ. ಇಂದು ನನ್ನ ಯಾರೆಲ್ಲಾ ನನ್ನ ಅಭಿಮಾನಿಗಳಿದ್ದರೋ ಅವರೆಲ್ಲಾ ನ್ನ ಲೇಖನಗಳನ್ನು ಓದಿದ್ದಾರೆ. ಹೀಗಾಗಿ ಅವರು ಇಂತಹ ನಾಲಾಯಕ್ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಅವರು ನನ್ನ ಅಭಿಮಾನಿಗಳಾಗಲೂ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
ನಾನೇ ಸ್ವತಃ ತಪ್ಪು ಮಾಡಿದ್ರೆ ಅದನ್ನ ಬಿಂಬಿಸಿ. ಆದ್ರೆ ಯಾರೋ ಮಾಡಿದ ಪೋಸ್ಟ್ ಗೆ ನನ್ನ ಎಳೆದು ತರಬೇಡಿ. ಹೀಗಾಗಿ ಆ ಪೇಜ್ ವಿರುದ್ಧ ಕ್ರಮ ಕೈಗೊಳ್ಳಿ. ಮೂರು ದಿನಗಳ ಹಿಂದೆಯೇ ಇದನ್ನ ಪೋಸ್ಟ್ ಮಾಡಿದ್ರಂತೆ ಅಂತ ಅವರು ಹೇಳಿದ್ರು.
ಫೇಸ್ಬುಕ್ ನಲ್ಲಿ ನಂದು ಎಂ ಪಿ ಪ್ರತಾಪ್ ಸಿಂಹ ಅನ್ನೋ ಒಂದೇ ಒಂದು ಅಕೌಂಟ್ ಇದೆ. ಅದಕ್ಕೆ ಬ್ಲ್ಯೂ ಟಿಕ್ ಮಾರ್ಕ್ ಇದೆ. ಅದೊಂದು ವೆರಿಫೈಡ್ ಅಕೌಂಟ್. ಪ್ರತಾಪ್ ಸಿಂಹ ಅನ್ನೋ ಇನ್ನೊಂದು ಅಕೌಂಟ್ ಇದೆ. ಇದು ನನ್ನ ಪರ್ಸನಲ್ ಅಕೌಂಟ್ ಅಷ್ಟೆ. ಫೇಸ್ಬುಕ್, ಟ್ವಿಟ್ಟರ್ ನ ನನ್ನ ಅಕೌಂಟಿನಲ್ಲಿ ನನ್ನ ಸಾಮಾಜಿಕ ಕೆಲಸಗಳು, ಪ್ರತಿಕ್ರಿಯೆಗಳು ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇನಷ್ಟೇ ಅಂತ ಸ್ಪಷ್ಟಪಡಿಸಿದ್ದಾರೆ.
https://www.facebook.com/MPPratapSimha/videos/1985872098339805/