ಶಿವಮೊಗ್ಗ: ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮುರುಘಾ ಶ್ರೀ ಬಂಧನ ವಿಚಾರವಾಗಿ ಮಾತನಾಡಿದ ಅವರು, ಮಠದ ಸ್ವಾಮಿಗಳು ಅಂದರೆ ನನಗೆ ದೇವರಿದ್ದಂತೆ. ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ. ತನಿಖೆ ನಡೆಯುತ್ತಿದೆ ಸತ್ಯವೋ ಸುಳ್ಳೋ ಹೊರಗೆ ಬರಲಿ. ಮಠ, ಮಂದಿರ, ಭಕ್ತಿ, ಜಾಗೃತಿ ಉಂಟು ಮಾಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಡುಗೆ ಮನೆಯ ನೆಲಮಾಳಿಗೆಯಲ್ಲಿ 2.3ಕೋಟಿ ರೂ. ಮೌಲ್ಯದ ಚಿನ್ನದ ನಾಣ್ಯ ಪತ್ತೆ
Advertisement
Advertisement
ಇದೇ ವೇಳೆ ರಾಜ್ಯಕ್ಕೆ ಮೋದಿ ಭೇಟಿ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಇಂತಹ ಐವತ್ತು ಕಾರ್ಯಕ್ರಮಗಳನ್ನು ನಾವು ಮಾಡುತ್ತೇವೆ. ಬಿಜೆಪಿಗೆ ಜನ ಬೆಂಬಲ ಕೊಡುತ್ತಿರುವುದಕ್ಕೆ ನಿನ್ನೆಯ ಕಾರ್ಯಕ್ರಮ ಸಾಕ್ಷಿಯಾಗಿದೆ. ಮೋದಿ ಎಲ್ಲಿ ಬರುತ್ತಾರೋ ಅಲ್ಲಿ ಜನರ ಸಂಚಲನ ಇರುತ್ತದೆ. ಜನಜಾಗೃತಿ ಮೂಡಿಸಿ ದೇಶಭಕ್ತಿ ಮೂಡಿಸುವ ಪ್ರತೀಕ ಅಂದರೆ ಮೋದಿ. ಮೋದಿ ಭೇಟಿಯಲ್ಲಿ ಚುನಾವಣೆ ವಿಚಾರ ಬರಲೇ ಇಲ್ಲ. ಅವರ ಭಾಷಣದಲ್ಲಿ ಒಂದೇ ಒಂದು ರಾಜಕೀಯ ವಿಷಯ ಇರಲಿಲ್ಲ. ಅಭಿವೃದ್ಧಿ ಕಾರ್ಯದ ಬಗ್ಗೆ ಭಾಷಣ ಮಾಡಿದರು. ಕೋರ್ ಕಮಿಟಿ ಸಭೆಯಲ್ಲೂ 30-35 ನಿಮಿಷ ಇದ್ದರು. ಅಲ್ಲಿಯೂ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚೆ ನಡೆಯಿತು. ಇಂತಹ ನಿಜವಾದ ರಾಷ್ಟ್ರ ಭಕ್ತನನ್ನು ಪಡೆದದ್ದು ನಮ್ಮ ಪುಣ್ಯ. ಅವರು ರಾಜ್ಯಕ್ಕೆ ಭೇಟಿ ನೀಡಿದ್ದು ನಮಗೆಲ್ಲಾ ಸ್ಫೂರ್ತಿ ತುಂಬಿದೆ. ನಮ್ಮ ಬಲಗೈಗೆ ಶಕ್ತಿ ಬಂದಂತಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ಸಿದ್ದರಾಮೋತ್ಸವಕ್ಕೆ 75 ಕೋಟಿ ಖರ್ಚು ಮಾಡಿ ಜನರನ್ನು ಕರೆ ತಂದರು. ಆದರೆ ಮೋದಿ ಕಾರ್ಯಕ್ರಮದಲ್ಲಿ ಜನ ಸ್ವ ಇಚ್ಛೆಯಿಂದ ಬಂದಿದ್ದರು. ಸಿದ್ದರಾಮೋತ್ಸವ ಇಡೀ ರಾಜ್ಯದ ಕಾರ್ಯಕ್ರಮ ಆಗಿದ್ದರೆ, ಮೋದಿ ಕಾರ್ಯಕ್ರಮ ಒಂದು ಜಿಲ್ಲೆಯದ್ದಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕೋಮು ಸಂಘರ್ಷದ ಮಧ್ಯೆ ಸಾಮರಸ್ಯ ಮೆರೆದ ಮುಸ್ಲಿಂ ಕುಟುಂಬ – ಗಣೇಶ ಪ್ರತಿಷ್ಠಾಪಿಸಿ ಹಬ್ಬ ಆಚರಣೆ
ಶಿವಮೊಗ್ಗದಲ್ಲಿ ಶಾಂತಿಗಾಗಿ ಜಾಥಾ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ಶಿವಮೊಗ್ಗ ಶಾಂತವಾಗಿದೆ. ರಾಷ್ಟ್ರ ದ್ರೋಹಿ ಚಟುವಟಿಕೆ ಮಾಡಿರುವವರ ಬಾಲ ಮುರಿದಿದ್ದೇವೆ. ಅಂತಹವರಿಗೆ ಎಲ್ಲಿಡಬೇಕೋ ಅಲ್ಲಿ ಇಟ್ಟಿದ್ದೇವೆ. ಅವರೆಲ್ಲಾ ಈಗಾಗಲೇ ಜೈಲಿನಲ್ಲಿದ್ದಾರೆ. ಇವತ್ತು ಏನು ನಡೆಯುತ್ತದೋ ನಡೆಯಲಿ. ನಮಗೆ ಈ ಬಗ್ಗೆ ಆಹ್ವಾನ ಇಲ್ಲ. ಏಕೆ ಬಿಟ್ಟಿದ್ದಾರೋ ಗೊತ್ತಿಲ್ಲ. ಶಿವಮೊಗ್ಗ ಶಾಂತಿಯಿಂದ ಇರಬೇಕು ಎಂಬುದು ನನ್ನ ಆಸೆ ಎಂದು ತಿಳಿಸಿದ್ದಾರೆ.