ಬಳ್ಳಾರಿ: ಆಲ್‍ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ (ಎಂಇಪಿ) ಪಕ್ಷದ ಮುಖ್ಯಸ್ಥೆ ನೌಹೀರಾ ಶೇಖ್ ಅವರನ್ನು ಪಾರು ಮಾಡಲು ಜನಾರ್ದನ ರೆಡ್ಡಿ ಪ್ರಯತ್ನಿಸಿದ್ದರು ಎನ್ನುವ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಮಾಧ್ಯಮಗಳಿಗೆ ಹಾವಂಭಾವಿ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಮಾಧ್ಯಮಗಳಲ್ಲಿ ಈ ಪ್ರಕರಣ ಕುರಿತು ನೋಡಿದ್ದೇನೆ. ಕಾನೂನು ಅದರ ಕೆಲಸ ಮಾಡುತ್ತೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದು ಪ್ರತಿಕ್ರಿಯಿಸಿದರು. ಇದನ್ನು ಓದಿ: ಎಂಇಪಿ ನಾಯಕಿ ನೌಹಿರಾ ಶೇಖ್ ಕೇಸ್ ಖುಲಾಸೆಗೆ ಕೋಟಿ ಕೋಟಿ ಹಣ ಪಡೆದ್ರಾ ರೆಡ್ಡಿ?
Advertisement
ಚುನಾವಣೆಯಿಂದ ಸುಸ್ತಾಗಿ ನಾನು ಸುಮ್ಮನಿದ್ದೇನೆ. ಯಾರನ್ನು ನಾನು ಭೇಟಿ ಮಾಡಿಲ್ಲ. ನಿಮಗೆ ಈ ಪ್ರಕರಣ ಕುರಿತು ಎಷ್ಟು ತಿಳಿದಿದೆಯೋ ನನಗೂ ಅಷ್ಟೇ ಗೊತ್ತಿರೋದು ಎಂದು ಉತ್ತರಿಸಿದರು.
Advertisement
Advertisement
ರೆಡ್ಡಿ ಮೇಲಿನ ಆರೋಪ ಏನು?
ತನ್ನ ಮೇಲೆ ದಾಖಲಾಗಿರುವ ಪ್ರಕರಣಗಳಿಂದ ಪಾರು ಮಾಡುವಂತೆ ನೌಹಿರಾ ಶೇಖ್ ಗಾಲಿ ಜನಾರ್ದನ ರೆಡ್ಡಿ ಅವರ ಸಹಾಯಕೋರಿದ್ದರು. ನೌಹಿರಾ ಶೇಖ್ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದ ರೆಡ್ಡಿ ಕೋಟಿ ಕೋಟಿ ಹಣ ಪಡೆದಿದ್ದರು ಎನ್ನಲಾಗಿದೆ. ರೆಡ್ಡಿ ಅವರ ಆಪ್ತರ ಬ್ಯಾಂಕ್ ಖಾತೆಗೆ ಈ ಹಣ ಸಂದಾಯವಾಗಿದೆ ಎಂಬ ಮಾಹಿತಿಯೂ ಈಗ ಲಭ್ಯವಾಗಿದೆ. ಸದ್ಯ ರೆಡ್ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಮೂಲಕ ಸಹಾಯ ಮಾಡಲು ಜನಾರ್ದನ ರೆಡ್ಡಿ ಮುಂದಾಗಿದ್ದರು ಎನ್ನಲಾಗಿದೆ.
Advertisement
ಯಾರು ಈ ನೌಹಿರಾ ಶೇಖ್?
ನೌಹಿರಾ ಶೇಖ್ ಬೆಂಗಳೂರು, ಹೈದ್ರಾಬಾದ್, ಮುಂಬೈ, ಪುಣೆ, ದೆಹಲಿಯಲ್ಲಿ ಬಂಡವಾಳ ಹೂಡಿಕೆ ಮಾಡುವ ಹೆಸರಿನಲ್ಲಿ ಹಲವರಿಂದ ಹಣ ಪಡೆದು ಸಾವಿರ ಕೋಟಿಗೂ ಹೆಚ್ಚು ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಸ್ವರಾಜ್ ಪಕ್ಷದ ಸಂಸ್ಥಾಪಕಿಯಾಗಿರುವ ನೌಹಿರಾ ವಿರುದ್ಧ 2018 ಮೇ ತಿಂಗಳ ಬಳಿಕ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಅಗಸ್ಟ್ 25ರಂದು ಹೈದರಾಬಾದ್‍ನಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣ ಸಂಬಂಧ ಗುಪ್ತಚರ ಇಲಾಖೆಯೂ ಮಾಹಿತಿ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ. ನೌಹಿರಾ ವಂಚಿಸಿದವರಲ್ಲಿ ಹೆಚ್ಚಿನವರು ಮುಸ್ಲಿಂ ಧರ್ಮಕ್ಕೆ ಸೇರಿದವರೇ ಆಗಿದ್ದು, ಹೀರಾ ಗ್ರೂಪ್ ಸಂಸ್ಥೆಯ ಮೂಲಕ ವ್ಯವಹಾರ ನಡೆಸುವುದಾಗಿ ನೌಹಿರಾ ಭರವಸೆ ನೀಡಿ ಹಣ ಸಂಗ್ರಹಿಸಿದ್ದರು ಎಂಬ ಮಾಹಿತಿ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv