ನನಗೆ ರಾಮನ ಬಗ್ಗೆ ಭಕ್ತಿ ಇಲ್ಲ, ಅಯೋಧ್ಯೆಗೆ ಹೋಗಲ್ಲ: ಪ್ರಿಯಾಂಕ್ ಖರ್ಗೆ

Public TV
2 Min Read
priyank kharge

– ವಾಸ್ತುಶಿಲ್ಪ, ಕಲೆ ನೋಡಲು ರಾಮಮಂದಿರಕ್ಕೆ ಹೋಗ್ತೀನಿ

ಬೆಂಗಳೂರು: ನನಗೆ ರಾಮನ (Lord Rama) ಬಗ್ಗೆ ಭಕ್ತಿ ಇಲ್ಲ. ಹೀಗಾಗಿ ನಾನು ರಾಮ ಮಂದಿರಕ್ಕೆ (Ram Mandir) ಹೋಗಲ್ಲ. ಆದರೆ ರಾಮ ಮಂದಿರದ ವಾಸ್ತುಶಿಲ್ಪ, ಕಲೆ ನೋಡಲು ಹೋಗುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದರು.

ವಿಕಾಸಸೌಧದಲ್ಲಿ ರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಮಾತನಾಡಿದ ಅವರು, ನನಗೆ ರಾಮನ ಬಗ್ಗೆ ಭಕ್ತಿ ಇಲ್ಲ. ಹೀಗಾಗಿ ರಾಮನನ್ನು ನೋಡಲು ಹೋಗಲ್ಲ. ರಾಮನನ್ನು ನೋಡಲು ಹೋಗಲ್ಲ. ಆದರೆ ಅಲ್ಲಿನ ಕಲೆ, ವಾಸ್ತುಶಿಲ್ಪ ನೋಡೊಕೆ ಮಾತ್ರ ಹೋಗುತ್ತೇನೆ ಎಂದರು. ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ಅಪ್ರತಿಮ ದೇಶಪ್ರೇಮಿ: ಸಿದ್ದರಾಮಯ್ಯ

ಕಾಂಗ್ರೆಸ್ (Congress) ರಾಮ ಮಂದಿರ ವಿರೋಧ ಮಾಡಿಲ್ಲ. ಶಂಕರಾಚಾರ್ಯರು ವಿರೋಧ ಮಾಡಿದ್ದು. ರಾಮನಿಗೆ ಸಾಧು ಸಂತರು ಜೀವ ತುಂಬಬೇಕು ಎಂದು ಅವರು ಹೇಳಿದ್ದರು. ಅಪೂರ್ವ ಮಂದಿರ ಉದ್ಘಾಟನೆ ಬೇಡ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಸೋಮವಾರ ಪ್ರಧಾನಿಗಳು ಸುಪ್ರೀಂಕೋರ್ಟ್ ಆದೇಶದ ಮೇಲೆ ರಾಮ ಮಂದಿರ ಆಗಿದೆ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ಆದೇಶಕ್ಕೆ ನಾವು ವಿರೋಧ ಮಾಡಿಲ್ಲ. ನಮ್ಮ ಕಾರ್ಯಕರ್ತರು ಅವರ ಇಚ್ಛೆಯಂತೆ ಮಾಡಿ ಎಂದು ಹೈಕಮಾಂಡ್ ಹೇಳಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಕೇಳಲು ಕಷ್ಟ: ಸಿದ್ದರಾಮಯ್ಯ

ನಾನು ರಾಮನ ದೇವಸ್ಥಾನಕ್ಕೆ ಹೋಗಲ್ಲ. ಕಲೆ, ಸಂಸ್ಕೃತಿ ನೋಡಲು ಹೋಗುತ್ತೇನೆ. ನನಗೆ ಭಕ್ತಿ ಇಲ್ಲ. ನಾನು ಸಂವಿಧಾನದ ಭಕ್ತ. ರಾಮನ ಮೇಲೆ ನನಗೆ ಭಕ್ತಿ ಇಲ್ಲ, ಅದಕ್ಕೆ ಹೋಗಲ್ಲ. ಆದರೆ ಅಲ್ಲಿನ ಕಲೆ, ವಾಸ್ತುಶಿಲ್ಪ ನೋಡೋಕೆ ಹೋಗುತ್ತೇನೆ. ನಾನು ಬುದ್ಧ ಬಸವ ತತ್ವ ಪಾಲನೆ ಮಾಡುತ್ತೇನೆ. ಬಿಜೆಪಿ (BJP) ಅವರಿಗೆ ಸವಾಲ್ ಹಾಕ್ತೀನಿ ಎಷ್ಟು ಜನರಿಗೆ ರಾಮಾಯಣ, ಋಗ್ವೇದ, ಹನುಮಂತ ಜಪ ಬರುತ್ತೆ ಹೇಳಲಿ ನೋಡೋಣ. ಸಿಎಂ ಹೇಳಿದ್ರೆ ಹೋಗ್ತೀನಿ. ಆದರೆ ನನಗೆ ರಾಮನ ಬಗ್ಗೆ ಭಕ್ತಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಇದು ತಹಶೀಲ್ದಾರ್ ತಪ್ಪು, ಕಣ್ಣನ್ ಅವರದ್ದಲ್ಲ- ಸಂಬಳ ವಾಪಸ್ ಕೇಳಿದ ವಿಚಾರಕ್ಕೆ ರಾಮಲಿಂಗಾರೆಡ್ಡಿ ಸ್ಪಷ್ಟನೆ

Share This Article