ಬೆಂಗಳೂರು: ನನಗೆ ಸಿಐಡಿ (CID) ತನಿಖೆಯಲ್ಲಿ ವಿಶ್ವಾಸ ಇಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕೇಸ್‌ಗೆ ಸಂಬಂಧಿಸಿದಂತೆ ನನಗೆ ಸಿಐಡಿ ನೋಟಿಸ್ ಕೊಟ್ಟಿಲ್ಲ ಎಂದು ಎಂಎಲ್‌ಸಿ ಸಿ.ಟಿ ರವಿ (CT Ravi) ಹೇಳಿದ್ದಾರೆ.
ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸುವರ್ಣಸೌಧದಲ್ಲಿ ಗಲಾಟೆಗೆ ಸಂಬಂಧಿಸಿದಂತೆ ನೋಟಿಸ್ ಕೊಟ್ಟಿದ್ದರು. ಹೋಗಿ ವಿವರಣೆ ಕೊಟ್ಟು ಬಂದಿದ್ದೇನೆ. ಅಲ್ಲಿಯೇ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡುತ್ತೇವೆ ಎಂದರು. ಅದಕ್ಕೆ ನಾನು ಒಪ್ಪಲಿಲ್ಲ. ಮೊದಲು ಸಿಐಡಿ ತನಿಖಾ ವ್ಯಾಪ್ತಿ ಸ್ಪಷ್ಟಪಡಿಸಿ. ಸಭಾಪತಿ ರೂಲಿಂಗ್ ಕೊಟ್ಟ ಮೇಲೆ ತನಿಖೆ ಮಾಡಲು ಬರುತ್ತಾ ಎಂಬುದನ್ನು ಸ್ಪಷ್ಟಪಡಿಸಿ ಅಂದಿದ್ದೆ ಎಂದರು. ಇದನ್ನೂ ಓದಿ: ಬಸ್ ಆಯ್ತು, ಈಗ ಮೆಟ್ರೋ ದರ ಏರಿಕೆ – ನಾಳೆಯೇ ಅಧಿಕೃತ ಘೋಷಣೆ
Advertisement
Advertisement
ವಾರ್ತಾ ಇಲಾಖೆ, ಡಿಪಿಎಆರ್‌ನಿಂದ ವೀಡಿಯೋ ಪಡೆದು ವಾಯ್ಸ್ ಸ್ಯಾಂಪಲ್ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ವಾಯ್ಸ್ ಸ್ಯಾಂಪಲ್ ಮ್ಯಾಚ್ ಮಾಡಿಕೊಳ್ಳಲಿ. ಸಾರ್ವಜನಿಕವಾಗಿ ನಾನು ಮಾತನಾಡಿರುವುದು ಬಹಳಷ್ಟು ಇರುತ್ತದೆ. ಆದರೆ ಸಭಾಪತಿ, ಗೃಹ ಸಚಿವರಿಗೂ ಪತ್ರ ಬರೆದಿದ್ದಾರೆ. ಹೀಗಿದ್ದರೂ ವಿಡಿಯೋ ಎಲ್ಲಿಂದಲಾದ್ರೂ ತರಲಿ. ಇದು ರಾಜಕೀಯ ಒತ್ತಡದಿಂದ ಮಾಡುತ್ತಿರುವುದು ಸ್ಪಷ್ಟ. ನಾನು ಕೊಟ್ಟ ದೂರಿನ ಎಫ್‌ಐಆರ್ ಆಗಿಲ್ಲ. ಬೇರೆ ತನಿಖೆ ಮಾಡುತ್ತಾರೆ. ನನ್ನ ದೂರಿನ ಎಫ್‌ಐಆರ್ ಏಕೆ ಮಾಡಿಲ್ಲ? ಇದಕ್ಕೆ ಉತ್ತರ ಕೊಡಲಿ. ಸುಳ್ಳು ಕಥೆ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ಹಾಗಾಗಿ ನನಗೆ ಸಿಐಡಿ ತನಿಖೆ ಮೇಲೆ ವಿಶ್ವಾಸ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎಂ ಮಂಗ್ಳೂರಿನಲ್ಲಿ ಇರುವಾಗಲೇ ಬ್ಯಾಂಕ್ ಲೂಟಿ – ಬಂದೂಕು ತೋರಿಸಿ ದರೋಡೆ
Advertisement
Advertisement
ಸಿಐಡಿ ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ. ನಾನು ಕೊಟ್ಟ ದೂರು ಇದುವರೆಗೂ ಎಫ್‌ಐಆರ್ ಹಾಕಿಲ್ಲ. ನನ್ನ ವಿರುದ್ಧ ಕೊಟ್ಟ ದೂರು ತನಿಖೆ ಆಗುತ್ತಿದೆ. ಇದರ ಅರ್ಥ ಏನು? ತಮ್ಮ ಮೇಲಿನ ಆರೋಪ ಮುಚ್ಚಿಕೊಳ್ಳಲು ಸುದ್ದಿ ಬಿಡುಗಡೆ ಮಾಡಿಸುತ್ತಿದ್ದಾರೆ. ಅಂತೆ-ಕಂತೆ ಮಾಹಿತಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ದೂರು ಕೊಟ್ಟವರ ಮುಖ ಉಳಿಸಿಕೊಳ್ಳೋಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನ್ಯಾಯಾಲಯ ಏನೇ ತೀರ್ಪು ಕೊಟ್ಟರೂ ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: Aeroindia 2025| ಯಲಹಂಕ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಎತ್ತರ ಇಳಿಸಿ: ಬಿಬಿಎಂಪಿ