ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ 218 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು, ಬಾದಾಮಿಯ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದೆ. ಇದರಿಂದ ಕಾಂಗ್ರೆಸ್ ಪಟ್ಟಿ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಭಿನ್ನಮತ ಮುಗಿಲೆದ್ದಿದೆ.
ಭಾನುವಾರ ರಾತ್ರಿ ಕಾಂಗ್ರೆಸ್ ಪಟ್ಟಿ ರಿಲೀಸ್ ಆಗಿದ್ದು, ಇದರಲ್ಲಿ ಈ ಬಾರಿ ಹಾಲಿ ಶಾಸಕರಾದ ಬಾಗಲಕೋಟೆಯ ಬಾದಾಮಿ ಕ್ಷೇತ್ರದ ಶಾಸಕ ಬಿ.ಬಿ. ಚಿಮ್ಮನಕಟ್ಟಿ ರನ್ನು ಕೈಬಿಡಲಾಗಿದೆ. ಸದ್ಯಕ್ಕೆ ಬಾದಾಮಿ ಕ್ಷೇತ್ರದಲ್ಲಿ ದೇವರಾಜ್ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.
ಟಿಕೆಟ್ ಸಿಗದ ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಪಕ್ಷ ಟಿಕೆಟ್ ಘೋಷಣೆ ಮಾಡಿಲ್ಲ. ಸಿಎಂ ಬಾದಾಮಿ ಅಭ್ಯರ್ಥಿಯಾಗಿದ್ದರೆ ಆದರೆ ಸ್ಥಾನ ಬಿಟ್ಟುಕೊಡುತ್ತಿದೆ. ಆದರೆ ಈಗ ದೇವರಾಜ್ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಆದ್ದರಿಂದ ಈಗ ಸಾಧ್ಯವಿಲ್ಲ ಸಿಎಂ ಕೂಡಾ ನನಗೆ ಬಿಫಾರಂ ಕೊಡುತ್ತೀನಿ ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ಆರೋಗ್ಯ ಸರಿಯಿಲ್ಲ ಅನ್ನೋದು ಸುಳ್ಳು. ನನಗೆ ಬಿಪಿ, ಶುಗರ್ ಏನು ಇಲ್ಲ. ನಾನು ಆರೋಗ್ಯವಾಗಿದ್ದೀನಿ. ನಾನು 5 ಬಾರಿ ಶಾಸಕನಾಗಿದ್ದೀನಿ. 6 ನೇ ಬಾರಿಯೂ ನಾನೇ ಗೆದ್ದು ಶಾಸಕನಾಗುತ್ತೇನೆ. ಕಾಂಗ್ರೆಸ್ ಟಿಕೆಟ್ ಕೊಡುತ್ತದೆ. ನಾನು ಸಿಎಂ ಜೊತೆ ಚರ್ಚೆ ನಡೆಸಿದ್ದೇನೆ. ಅವರು ಕೂಡ ಭರವಸೆ ಕೊಟ್ಟಿದ್ದಾರೆ. ಮುಂದಿನ 2 ದಿನ ಕಾದು ನೋಡಿ, ಮತ್ತೆ ನಾನೇ ಟಿಕೆಟ್ ತಗೊಂಡು ಶಾಸಕನಾಗುವೆ. ಟಿಕೆಟ್ ನನಗೆ ಸಿಗುತ್ತದೆ ಎಂದು ಹೇಳಿದ್ದಾರೆ.