ರಾಯಚೂರು: ನನ್ನ ಇಡೀ ಜೀವನದಲ್ಲಿ ಇಂತಹ ಪ್ರಧಾನಿಯನ್ನು ನೋಡಿರಲಿಲ್ಲ. ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ಮೋದಿನೇ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ (HM Revanna) ಕಿಡಿಕಾರಿದರು.ಇದನ್ನೂ ಓದಿ: 3 ವರ್ಷದ ನಿರಾಣಿ ಮೊಮ್ಮಗನಿಂದ ಏಷ್ಯಾ ಬುಕ್ ಆಫ್ ರೆಕಾರ್ಡ್!
ರಾಯಚೂರಿನಲ್ಲಿ ಮಾತನಾಡಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ (PM Modi) ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಗ್ಯಾರಂಟಿಗಳು ನಡೆಯುವುದೇ ಇಲ್ಲ ಎಂದಿದ್ದರು. ಆದರೆ ಈಗ ಅವರೇ ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡಿದರು. ಅವರ ಆಡಳಿತ ಇರುವ ಮಧ್ಯಪ್ರದೇಶದಲ್ಲಿ 1,200 ರೂ. ಕೊಡುತ್ತಿದ್ದಾರೆ. ಚುನಾವಣೆ ವೇಳೆ ಏನಾದರೂ ಒಂದು ಭಾಷಣ ಮಾಡಿಬಿಡುವುದು ಮೋದಿಯವರ ಒಂದು ಕಲೆಯಾಗಿದೆ. ಅದಕ್ಕೆ ತಿರುಳು ಇರಲ್ಲ. ಇಂತಹ ಪ್ರಧಾನ ಮಂತ್ರಿಯನ್ನು ನಾನಂತು ನನ್ನ ಜೀವನದಲ್ಲಿ ನೋಡಿರಲಿಲ್ಲ. ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ಮೋದಿನೇ ಎಂದು ಹೇಳಿದರು.
ಆಸ್ಸಾಂ (Assam) ಹೊತ್ತಿಕೊಂಡು ಉರಿದರೂ ಮಾತನಾಡಲ್ಲ, ಉತ್ತರಪ್ರದೇಶದಲ್ಲಿ (Uttara Pradesh) ಹೆಣ್ಮಕ್ಕಳ ಬಗ್ಗೆ ತೊಂದರೆ ಆದರೂ ಮಾತನಾಡಲ್ಲ. ಆದರೆ ವಿರೋಧ ಪಕ್ಷ ಎಲ್ಲೆಲ್ಲಿ ಆಡಳಿತ ಮಾಡುತ್ತೋ ಅಲ್ಲಲ್ಲಿ ಮೋದಿ ಕೆದಕೋಕೆ ನೋಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಹಾಸನಾಂಬೆ ಹುಂಡಿ ಎಣಿಕೆ – 9 ದಿನದಲ್ಲಿ 12.63 ಕೋಟಿ ಹಣ ಸಂಗ್ರಹ