ವಿಜಯಪುರ: 45 ವರ್ಷಗಳ ರಾಜಕಾರಣದಲ್ಲಿ ಇಷ್ಟೊಂದು ಹೊಲಸು ಸರ್ಕಾರವನ್ನು ನಾನು ನೋಡಿಯೇ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ (Ramesh Jigajinagi) ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಎಂಬುದು ಇಲ್ಲವೇ ಇಲ್ಲ. ನಾನು 45 ವರ್ಷಗಳಿಂದ ಸರ್ಕಾರ ನೋಡುತ್ತಿರುವೆ. ಇಂತಹ ಸರ್ಕಾರ ಜನದಲ್ಲಿ ನಾನು ನೋಡಿಲ್ಲ. ಇಷ್ಟೊಂದು ಹೊಲಸು ಸರ್ಕಾರವನ್ನೇ ನಾನು ನೋಡಿಲ್ಲ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನೂರು ಜನ್ರು ಗೋ-ಬ್ಯಾಕ್ ಅಂದ್ರೆ, ಅದಕ್ಕಿಂತ ಜಾಸ್ತಿ ಕಮ್ ಬ್ಯಾಕ್ ಅನ್ನೋರು ಇರ‍್ತಾರೆ: ಡಿಕೆಶಿ
ಬೆಳಿಗ್ಗೆ ಮುಸ್ಲಿಂ, ಮಧ್ಯಾಹ್ನ ದಲಿತರ ಹೆಸರು, ಸಾಯಂಕಾಲ ಹಿಂದುಳಿದವರ ಹೆಸರು ಹೇಳುತ್ತೀರಾ? ಈ ಮೂರು ಸಮಾಜದಿಂದ ಸರ್ಕಾರ ಆಗತ್ತಾ? ಬೇರೆ ಸಮಾಜ ಇವರಿಗೆ ಬೇಕಿಲ್ಲವಾ? ಮುಂದಿನ ದಿನಮಾನದಲ್ಲಿ ಭಗವಂತ ಕೂಡಾ ಇವರನ್ನು ಕಾಪಾಡಲು ಆಗಲ್ಲ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಹೆಣ್ಣುಮಕ್ಕಳ ಓಡಾಡೋಕೆ ಆಗುತ್ತಿಲ್ಲ. ಮುಂದೆ ಈ ಸರ್ಕಾರಕ್ಕೆ ಯಾರು ಬೆಂಬಲ ಕೊಡಲ್ಲ. ಬೇರೆ ಬೇರೆ ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಈ ಸರ್ಕಾರ ಮಾಡುತ್ತಿದೆ. ಮುಂಬರುವ ದಿನದಲ್ಲಿ ಈ ಸರ್ಕಾರ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ ಎಂದಿದ್ದಾರೆ.ಇದನ್ನೂ ಓದಿ: ಮ್ಯಾಚ್‌ನಲ್ಲಿ ಪಾಕ್ ಆಟಗಾರರ ಜೊತೆ ಹ್ಯಾಂಡ್‌ಶೇಕ್ ಮಾಡ್ತೀರಾ?- ಪ್ರಶ್ನೆಗೆ ಸೂರ್ಯಕುಮಾರ್ ಹೇಳಿದ್ದೇನು?

