ಬೆಂಗಳೂರು: ನನ್ನ ರಾಜಕೀಯ ಜೀವನದಲ್ಲಿ ಯಾರಿಗೂ ನಾನು ಅಪ್ಪಾಜಿ ಎಂದಿಲ್ಲ. ನಮ್ಮಪ್ಪನಿಗೆ ಬಿಟ್ಟು ನಾನು ಯಾರಿಗೂ ಅಪ್ಪಾಜಿ ಎಂದಿಲ್ಲ ಅಂತಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಅಗತ್ಯತೆ ಕುರಿತ ಚರ್ಚೆ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇವತ್ತು ಕೆಲಸ ಆಗುವ ತನಕ ಆ ಪಾರ್ಟಿಯಲ್ಲಿದ್ದರೆ ಅಲ್ಲಿ ಅಪ್ಪಾಜಿ, ಈ ಪಾರ್ಟಿಯಲ್ಲಿ ಇದ್ದರೆ ಇಲ್ಲಿ ಅಪ್ಪಾಜಿ ಅಂತಾರೆ ಎಂದು ಯತ್ನಾಳ್ ಹೇಳಿದಾಗ, ಹಾಗಾದ್ರೆ ನೀವು ಯಾರಿಗೆ ಈಗ ಅಪ್ಪಾಜಿ ಅಂತೀರಾ ಹೇಳಿ ಎಂದು ಶಾಸಕ ರಮೇಶ್ ಕುಮಾರ್ ಕೆದಕಿದ್ರು. ಆಗ ನಮ್ಮಪ್ಪನಿಗೆ ಬಿಟ್ಟು ಯಾರಿಗೂ ಅಪ್ಪಾಜಿ ಎಂದಿಲ್ಲ ಎಂದು ಯತ್ನಾಳ್ ಹೇಳಿದ್ರು. ಇದನ್ನೂ ಓದಿ: ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ಚೆನ್ನಮ್ಮ, ರಾಯಣ್ಣನೂ ಅಲ್ಲ: ನಟ ಚೇತನ್
ಇನ್ನೊಂದೆಡೆ ವಿಧಾನಸಭೆಯಲ್ಲಿ ಸ್ಪೀಕರ್ ಕಾಗೇರಿ ಸಚಿವರಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ರು. ಚುನಾವಣೆ ಸುಧಾರಣೆ ಅಗತ್ಯತೆ ಕುರಿತು ಚರ್ಚೆಗೆ ಸ್ಪೀಕರ್ ಒಳ್ಳೆಯ ಕೆಲಸ ಮಾಡಿದ್ದಾರೆ. ನಾಳೆ ಬದಲಾವಣೆ ಆಗೋದ್ರಲ್ಲಿ ನೀವು ಇರ್ತೀರಾ? ಎಂದು ನಗುನಗುತ್ತಾ ಯತ್ನಾಳ್ ಪ್ರಶ್ನಿಸಿದ್ರು.
ಆಗ ಮಧ್ಯಪ್ರವೇಶ ಮಾಡಿದ ಸ್ಪೀಕರ್, ಅಯ್ಯೋ.. ಅಂದ್ರೇನು? ನನ್ನ ಮೂಗಿಗೆ ಏನೂ ಹಚ್ಚಿಕೊಂಡಿರಲಿಲ್ಲ. ಈಗ ಇವರು ಹಚ್ಚು ಬಿಟ್ಟರಲ್ಲಾ? ಎಂದು ನಕ್ಕರು. ಮಾಜಿ ಸಿಎಂಗಳು ಇದ್ದಾರೆ ಅವರನ್ನು ಸ್ಪೀಕರ್ ಮಾಡಿ. ನೀವು ಮಂತ್ರಿ ಆಗ್ಬಿಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.