– ನನಗೆ ಬಳೆಯ ಮೇಲೆ ತುಂಬಾ ಗೌರವವಿದೆ
– ನಾನು ವೈಯಕ್ತಿವಾಗಿ ಟ್ವೀಟ್ ಮಾಡಿಲ್ಲ
ಬೆಂಗಳೂರು: ನಾನು ಟ್ವಿಟ್ಟರ್ ನನ್ನು ದುರುಪಯೋಗ ಪಡಿಸಿಕೊಂಡಿಲ್ಲ. ನನಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಾ ಇತ್ತೀಚೆಗೆ ಅವರು ಮಾಡಿದ ಕೆಲ ಟ್ವೀಟ್‍ಗಳ ಬಗ್ಗೆ ಮಾತನಾಡಿ, ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ. ನನ್ನ ಮನಸ್ಸಿನಲ್ಲಿರುವುದನ್ನು ಅಲ್ಲಿ ಹೇಳಿಕೊಂಡಿದ್ದೇನೆ. ನನಗೆ ಅನ್ನಿಸಿದ್ದನ್ನು ಟ್ವಿಟ್ಟರ್ ಬಿಟ್ಟರೆ ಬೇರೆ ಎಲ್ಲಿ ಹೇಳಿಕೊಳ್ಳಲಿ ಎಂದು ಪ್ರಶ್ನೆ ಮಾಡಿದರು.
Advertisement
Advertisement
ನಾನು ಯಾರ ತಂಟೆಗೂ ಹೋಗಲ್ಲ. ನನ್ನ ಸಿನಿಮಾ ಬಗ್ಗೆ ನಾನು ಧ್ವನಿ ಎತ್ತದೇ ಇನ್ನು ಯಾರು ಮಾತನಾಡುತ್ತಾರೆ. ನಾನು ನನ್ನ ನಿರ್ಮಾಪಕರ ಪರವಾಗಿ ನಿಂತಿದ್ದೇನೆ. ಅದರಲ್ಲಿ ನನಗೆ ಯಾವುದೇ ತಪ್ಪು ಕಾಣಿಸುತ್ತಿಲ್ಲ. ಟ್ವಿಟ್ಟರ್ ನಲ್ಲಿ ನಾನು ಒಳ್ಳೆಯದನ್ನು ಹೇಳಿದ್ದೇನೆ. ನನಗೆ ಏನ್ ಹೇಳಬೇಕು ಎಂದು ಅನ್ನಿಸಿದ್ದನ್ನು ಹೇಳುತ್ತೇನೆ. ನನ್ನ ಉದ್ದೇಶ ಸರಿಯಲ್ಲ ಎಂದರೆ ನನಗೆ ಗೊತ್ತಾಗುತ್ತೆ. ನಾನು ವೈಯಕ್ತಿವಾಗಿ ಟ್ವೀಟ್ ಮಾಡಿಲ್ಲ. ನನ್ನ ಸಿನಿಮಾಗಾಗಿ ಟ್ವೀಟ್ ಮಾಡಿದ್ದೇನೆ ಎಂದು ಹೇಳಿದರು. ಇದನ್ನು ಓದಿ: ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್
Advertisement
ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ.
ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ.
— Kichcha Sudeepa (@KicchaSudeep) September 20, 2019
Advertisement
ಇದೇ ವೇಳೆ ನಾನು ನನ್ನ ಸ್ನೇಹಿತರು ಕೈಗೆ ಹಾಕಿರುವುದು ಖಡ್ಗ ಬಳೆಯಲ್ಲ ಎಂಬ ಟ್ವೀಟ್ ವಿಚಾರವಾಗಿ ಮಾತನಾಡಿದ ಕಿಚ್ಚ, ಕೆಲ ದಿನಗಳ ಹಿಂದೆ ನನಗೆ ಕೆಲ ಸಂದೇಶಗಳು ಬಂದಿದ್ದವು. ಅದರಲ್ಲಿ ನಿಮ್ಮ ಸ್ನೇಹಿತರಿಗೆ ಬಳೆ ಹಾಕಿಕೊಂಡು ಕುಳಿತುಕೊಳ್ಳಲು ಹೇಳಿ ಎಂದು ಕೆಲವರು ಹೇಳಿದ್ದರು. ಅದಕ್ಕಾಗಿ ನಾನು, ನಾವು ಹಾಕಿರುವುದು ಬಳೆಯಲ್ಲ ಖಡ್ಗ ಎಂದು ಹೇಳಿದ್ದೆ ಅಷ್ಟೇ. ನನಗೆ ಬಳೆಯ ಮೇಲೆ ತುಂಬಾ ಗೌರವವಿದೆ. ನನ್ನ ತಾಯಿ ಕೂಡ ಬಳೆ ಹಾಕುತ್ತಾರೆ. ನಾನು ಇಲ್ಲಿ ಯಾರಿಗೂ ಅರ್ಥ ಮಾಡಿಸಲು ಹುಟ್ಟಿಲ್ಲ. ನನ್ನ ಜೀವನ ಚೆನ್ನಾಗಿದ್ದು, ಕನ್ನಡಿ ನನ್ನ ನೋಡಿ ನಗದೆ ಇದ್ದರೆ ಸಾಕು ಎಂದರು.
ಪೈಲ್ವಾನ್ ಸಿನಿಮಾ ಬಗ್ಗೆ ಮಾತನಾಡಿ, ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋಗುವುದು ನನಗೆ ತುಂಬಾ ಇಷ್ಟವಾದ ಸೀನ್. ಕಿಟ್ಟಪ್ಪ ನಮಗೆ ತುಂಬಾ ಒಳ್ಳೆಯ ಸ್ವಾತಂತ್ರ್ಯ ನೀಡಿದ್ದರು. ಹಾಗಾಗಿ ಚೆನ್ನಾಗಿ ನಟನೆ ಮಾಡಲು ಅವಕಾಶ ಸಿಕ್ಕಿತು. ಚಿತ್ರದ ನಾಯಕಿ ಆಕಾಂಕ್ಷಾ ಸಿಂಗ್ ತುಂಬಾ ಒಳ್ಳೆಯ ನಟಿ, ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ. ಪೈಲ್ವಾನ್ ಎಂಬ ಸಿನಿಮಾ ಜನರ ಎಮೋಷನ್‍ಗಳನ್ನು ಎತ್ತಿ ಹಿಡಿಯುವ ಸಿನಿಮಾ ಎಂದು ತಿಳಿಸಿದರು.