ಚಿಕ್ಕಮಗಳೂರು: ನಾನೆಂದು ಜಾತಿ ರಾಜಕಾರಣ ಮಾಡಿಲ್ಲ. ಆ ಬಗ್ಗೆ ನನ್ನ ಕನಸು-ಮನಸ್ಸಿಲ್ಲಿಯೂ ಯೋಚನೆ ಮಾಡಿಲ್ಲ. ಲಿಂಗಾಯುತ ಸಮುದಾಯದ ಅವಹೇಳನಾಕಾರಿ ಹೇಳಿಕೆ ಎಂದು ಕಾಂಗ್ರೆಸ್ (Congress) ಬಿಂಬಿಸುತ್ತಿದ್ದು, ಅದು ಕಾಂಗ್ರೆಸ್ಸಿನ ಸುಳ್ಳಿನ ಫ್ಯಾಕ್ಟರಿಯಿಂದ ಬಂದ ಫೇಕ್ ನ್ಯೂಸ್, ಕಾಂಗ್ರೆಸ್ಸಿಗರೇ ಹಬ್ಬಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ (BJP Vijaya Sankalpa Yatre) ಬಳಿಕ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಲಿಂಗಾಯತ ವಿರೋಧಿ ಭಾವನೆ ಹುಟ್ಟು ಹಾಕುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
Advertisement
Advertisement
ಇಂತಹ ಪ್ರಯತ್ನವನ್ನು ಹಿಂದೆಯೂ ಮಾಡಿ ವಿಫಲರಾಗಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಈಗಲೂ ವಿಫಲರಾಗುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾನು ಮಾತನಾಡದಿದ್ದರೆ ಕ್ಷಮೆಯಾಚನೆ ಮಾಡುತ್ತಿದ್ದೆ. ನಾನು ಆ ರೀತಿ ಮಾತನಾಡಿಲ್ಲ ಕ್ಷಮೆ ಕೇಳುವ ಪ್ರಮೇಯವೇ ಇಲ್ಲ ಎಂದರು. ಇದನ್ನೂ ಓದಿ: ಭಾರತದ ಆಂತರಿಕ ಸವಾಲುಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಲಾರೆ: ವರುಣ್ ಗಾಂಧಿ
Advertisement
Advertisement
ಜನರು ಜಾತಿ ಮೀರಿ ವೋಟ್ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಜಾತಿ ಹೆಸರಿನಲ್ಲಿ ಒಡೆಯಬಹುದು ಎಂದು ಸುಳ್ಳಿನ ಫ್ಯಾಕ್ಟರಿ ಮೂಲಕ ದಾಳ ಉರುಳಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು ನೀಡಲಾಗಿದೆ. ನನ್ನನ್ನ ಎಲ್ಲಾ ಜಾತಿಯ ಜನ ವೋಟ್ ಹಾಕಿ ಗೆಲ್ಲಿಸಿದ್ದಾರೆ. ಲಿಂಗಾಯುತ ಸಮುದಾಯವರು ನನ್ನನ್ನ ಜಾರಿ ಮೀರಿ ನಾಲ್ಕು ಬಾರಿ ಗೆಲ್ಲಿಸಿ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕೂರಿಸಿದ್ದಾರೆ. ನಾನೇಕೆ ಜಾತಿ ರಾಜಕಾರಣ ಮಾಡಲಿ. ಲಿಂಗಾಯುತ ಸಮುದಾದಯ ಅಭ್ಯರ್ಥಿ ಇದ್ದಾಗಲೇ ಲಿಂಗಾಯುತ ಮತದಾರರು ಹೆಚ್ಚಿರುವ ಕಡೆಯೇ ನನಗೆ ಮತ ನೀಡಿ ಲೀಡ್ ಕೊಟ್ಟು ಗೆಲ್ಲಿಸಿದ್ದಾರೆ. ಅವರ ಆ ಋಣ ತೀರಿಸೋದಕ್ಕೆ ಆಗಲ್ಲ. ಹೀಗಿರುವಾಗ ನಾನೇಕೆ ಲಿಂಗಾಯುತ ಸಮುದಾಯದ ಬಗ್ಗೆ ಮಾತನಾಡಲಿ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ಸುದ್ದಿ ಅನ್ನುತ್ತಾರೆ. ನಾನು 11 ದಿನದಿಂದ ಬೆಂಗಳೂರಿಗೆ ಹೋಗೇ ಇಲ್ಲ. ರಾಜ್ಯ ಪ್ರವಾಸದಲ್ಲಿ ಇದ್ದೇನೆ. ಎಲ್ಲಿ ಹೇಳಿಕೆ ನೀಡಿದ್ದೇನೆ. ಇದು ಕಾಂಗ್ರೆಸ್ ಮಾಡುತ್ತಿರುವ ಕುತಂತ್ರ. ಇದೆಲ್ಲಾ ನಡೆಯುವುದಿಲ್ಲ. ಲಿಂಗಾಯುತರಿಗೆ ಸಿ.ಟಿ.ರವಿ ಏನೆಂದು ಗೊತ್ತಿದೆ ಎಂದರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.