ಬೆಂಗಳೂರು: ನನಗೆ ಶುಗರ್ (Diabetes) ಇದೆ, ಅನ್ನ ಬಿಟ್ಟು, ಚಪಾತಿ ತಿಂತಾ ಇದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ನಡೆದ ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅನ್ನಭಾಗ್ಯದ ಬಗ್ಗೆ ಅವರು ಮಾತನಾಡಿದರು. ಈ ವೇಳೆ, ಎಲ್ಲರೂ ಕೂಡ ಎರಡು ಹೊತ್ತು ಊಟ ಮಾಡಲೇಬೇಕು ಎಂದು ಅನ್ನಭಾಗ್ಯ ಯೋಜನೆ ತಂದಿದ್ದು. ಇಲ್ಲಿ ಎಷ್ಟು ಜನ ಇದ್ದಾರೋ ಗೊತ್ತಿಲ್ಲ ಅನ್ನ ಉಣ್ಣೋರು. ಜಾತ್ರೆ, ಹಬ್ಬ ಇದ್ದಾಗ ಮಾತ್ರ ನಾವು ಅನ್ನ ಉಣ್ಣೋರು. ನಮಗೆ ಅನ್ನನೇ ಸಿಕ್ತಾನೇ ಇರಲಿಲ್ಲ. ಎಲ್ಲರೂ ಕೂಡ ಅನ್ನ ಉಣ್ಣಲೇಬೇಕೆಂದು ಅನ್ನಭಾಗ್ಯ ಯೋಜನೆ ತಂದಿರೋದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಮಾಡಿಯೇ ಮಾಡ್ತೀವಿ, ಯಾರಿಗೂ ಅನ್ಯಾಯ ಮಾಡಲ್ಲ: ಸಿದ್ದರಾಮಯ್ಯ
ಇದೇ ವೇಳೆ ಅವರ ಆರೋಗ್ಯದ ಬಗ್ಗೆ ಮಾತನಾಡಿ, ನನಗೆ ಈಗ ಶುಗರ್ ಕಾಯಿಲೆ ಬಂದಿದೆ. ನಾನು ಅನ್ನನೇ ತಿನ್ನೋದನ್ನು ಬಿಟ್ಟು ಬಿಟ್ಟಿದ್ದೇನೆ. ಚಪಾತಿ ತಿಂತಾ ಇದೀನಿ. ಸಿರಿ ಧಾನ್ಯಗಳನ್ನೂ ತಿನ್ನುವ ರೂಢಿ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಸೋಲಿನ ಕಹಿ ಬಗ್ಗೆ ಸಿಎಂ ಎದುರೇ ಸಚಿವ ಮುನಿಯಪ್ಪ ನೋವಿನ ಮಾತು