ಮುಂಬೈ: ಟೀಂ ಇಂಡಿಯಾ (Team India) ಕ್ರಿಕೆಟ್ ತಂಡದ ಆಟಗಾರ ಹಾಗೂ ಗುಜರಾತ್ ಟೈಟನ್ಸ್ (Gujarat Titans) ತಂಡದ ನಾಯಕ ಶುಭಮನ್ ಗಿಲ್ (Shubman Gill) ಡೇಟಿಂಗ್ ವದಂತಿಯ (relationship status) ಬಗ್ಗೆ ಮೌನ ಮುರಿದಿದ್ದು, ನಾನು ಮೂರು ವರ್ಷಗಳಿಂದ ಸಿಂಗಲ್ ಆಗಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.
ಗಿಲ್ ಮತ್ತು ಸಾರಾ ತೆಂಡೂಲ್ಕರ್ ನಡುವಣ ಪ್ರೇಮ ಪುರಾಣ ಸುದ್ದಿ ಜಾಲತಾಣದಲ್ಲಿ ಆಗಾಗ್ಗೆ ಸದ್ದು ಮಾಡುತ್ತಿದ್ದು, ಇವರಿಬ್ಬರ ಪ್ರೇಮ ಪುರಾಣಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇಬ್ಬರೂ ಕದ್ದು ಮುಚ್ಚಿ ಡೇಟಿಂಗ್ ಮಾಡುತ್ತಿರುವುದು ಹಲವು ಬಾರಿ ಬೆಳಕಿಗೆ ಬಂದಿದೆ ಎಂದು ಹೇಳಲಾಗಿತ್ತು. ಆದ್ರೆ, ಎಲ್ಲಿಯೂ ಕೂಡ ಇಬ್ಬರಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ. ಇದನ್ನೂ ಓದಿ: ಹಾಸನದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ
ಇದೀಗ ಡೇಟಿಂಗ್ ವದಂತಿಗಳ ಬಗ್ಗೆ ಮಾತನಾಡಿದ ಅವರು, ನಾನು ಮೂರು ವರ್ಷಗಳಿಂದ ಸಿಂಗಲ್ ಆಗಿದ್ದೇನೆ. ಇವುಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಪ್ರತಿ ದಿನ ನನ್ನ ಬಗ್ಗೆ ಹುಟ್ಟಿಕೊಳ್ಳುವ ಡೇಟಿಂಗ್ ವದಂತಿಗಳನ್ನು ಕೇಳಿದಾಗ ನಿಜಕ್ಕೂ ಅದೆಲ್ಲಾ ಹಾಸ್ಯಾಸ್ಪದ ಎಂದೆನಿಸುತ್ತದೆ. ಈ ಉಹಾಪೋಹಗಳು ನನ್ನನ್ನು ಹಲವಾರು ವ್ಯಕ್ತಿಗಳೊಂದಿಗೆ ಸಂಪರ್ಕ ಕಲ್ಪಿಸುವದರ ಜೊತೆಗೆ ನಾನು ಒಮ್ಮೆಯೂ ನೋಡಿರದ ಹಾಗೂ ಭೇಟಿಯಾಗದ ವ್ಯಕ್ತಿಯೊಂದಿಗೆ ಸಂಬಂಧ ಹುಟ್ಟಿಸುತ್ತದೆ ಎಂದು ಹೇಳಿದರು.
ನಾನು ನನ್ನ ವೃತ್ತಿಜೀವನದ ಮೇಲೆ ಮಾತ್ರ ಗಮನಹರಿಸುತ್ತೇನೆ. ಹೀಗಾಗಿ ಇದ್ಯಾವುದಕ್ಕೂ ನಾನು ಸಮಯ ಕೊಡುವುದಿಲ್ಲ. ವರ್ಷಪೂರ್ತಿ ದಿನವೂ ನಾನು ನನ್ನ ಕೆಲಸದಲ್ಲಿಯೇ ತೊಡಗಿರುತ್ತೇನೆ, ಹೀಗಿರುವಾಗ ನಾನು ಒಬ್ಬರೊಂದಿಗೆ ಸಂಬಂಧ ಬೆಳೆಸಲು ಬೇಕಾಗುವ ಸಮಯ ನನ್ನ ಬಳಿಯಿಲ್ಲ ಎಂದರು.
ಇನ್ನೂ ನಾನು ಮೈದಾನದಲ್ಲಿರುವಾಗ ಸಾಮಾನ್ಯವಾಗಿ ಈ ರೀತಿಯ ವದಂತಿಗಳು ನನ್ನ ಕಿವಿಗೆ ಬೀಳುತ್ತವೆ. ಆದರೆ ಒಮ್ಮೆ ನಾನು ಮೈದಾನಕ್ಕಿಳಿದರೆ ಸಂಪೂರ್ಣವಾಗಿ ನನ್ನನ್ನು ನಾನು ಆಟದಲ್ಲಿ ತೊಡಗಿಸಿಕೊಳ್ಳುತ್ತೇನೆ. ಟಾರ್ಗೆಟ್, ಬೌಲರ್‌ಗಳು, ಬೌಂಡರಿ ನನ್ನ ಆಟದ ಬಗ್ಗೆ ನಾನು ಹೆಚ್ಚು ಗಮನವಹಿಸುತ್ತೇನೆ ಎಂದರು ಹೇಳಿಕೊಂಡರು. ಇದನ್ನೂ ಓದಿ: ಕಾಶ್ಮೀರದ ಹಲವೆಡೆ ಭದ್ರತಾ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ – ಇದುವರೆಗೆ 175ಕ್ಕೂ ಹೆಚ್ಚು ಮಂದಿ ವಶಕ್ಕೆ