ಕೊಲಂಬೊ: ನಿದಾಸ್ ತ್ರಿಕೋನ ಸರಣಿಯ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಗೆ ರೋಚಕ ಗೆಲುವು ತಂದುಕೊಟ್ಟ ದಿನೇಶ್ ಕಾರ್ತಿಕ್, ಬಹಳ ದಿನಗಳಿಂದ ಈ ರೀತಿಯ ಹೊಡೆತ ಬಾರಿಸುವುದನ್ನು ಅಭ್ಯಾಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ 133 ರನ್ ಗೆ 5 ವಿಕೆಟ್ ಕಳೆದು ಕೊಂಡಿದ್ದ ಸಂಕಷ್ಟದ ವೇಳೆಯಲ್ಲಿ ಮೈದಾನ ಪ್ರವೇಶಿದ ಕಾರ್ತಿಕ್ ಮೊದಲ 3 ಎಸೆತಗಳಲ್ಲಿ ಎರಡು ಸಿಕ್ಸರ್, ಒಂದು ಬೌಂಡರಿ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವನ್ನು ತಂದುಕೊಟ್ಟಿದ್ದರು.
Advertisement
Advertisement
ಪಂದ್ಯದ ಬಳಿಕ ಮಾತನಾಡಿದ ಕಾರ್ತಿಕ್ ನಾನು ಈ ರೀತಿಯ ಹೊಡೆತಗಳನ್ನು ಸಿಡಿಸಲು ಅಭ್ಯಾಸ ಮಾಡಿದ್ದೆ. ಕ್ರಿಸ್ ನಲ್ಲಿ ಬಲವಾಗಿ ನೆಲೆಯೂರಿ ಚೆಂಡನ್ನು ಬೌಂಡರಿ ಬಾರಿಸಲು ಸಮರ್ಥನಾಗಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ತನ್ನನ್ನು ಬೆಂಬಲಿಸಿದ ಎಲ್ಲ ಸಿಬ್ಬಂದಿಗೂ ಧನ್ಯವಾದ ತಿಳಿಸಿದ್ದಾರೆ.
Advertisement
ಯುವ ಆಟಗಾರರೇ ತುಂಬಿದ್ದ ಟೀಂ ಇಂಡಿಯಾ ಸರಣಿಯಲ್ಲಿ ಗೆಲುವು ಪಡೆಯುವುದರೊಂದಿಗೆ ನ್ಯಾಯ ನೀಡಿದೆ. ಗೆಲುವಿನೊಂದಿಗೆ ಸರಣಿ ಮುಕ್ತಾಯ ಗೊಳಿಸುತ್ತಿರುವುದು ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.
Advertisement
ಗೆಲುವಿನ 167 ರನ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಪರ ಕ್ಯಾಪ್ಟನ್ ರೋಹಿತ್ ಶರ್ಮಾ (56) ಅರ್ಧಶತಕ ಸಿಡಿಸಿದರು. ಮಾಧ್ಯಮ ಕ್ರಮಾಂಕದ ಆಟಗಾರ ಮನೀಶ್ ಪಾಂಡೆ (28) ಕಾಣಿಕೆ ನೀಡಿದ ಬಳಿಕ ಸೋಲಿನ ಸುಳಿಗೆ ಸಿಲುಕಿತ್ತು. ಕೊನೆಯ ಎರಡು ಓವರ್ ಗಳಲ್ಲಿ ಗೆಲುವಿಗೆ 34 ರನ್‍ಗಳ ಅಗತ್ಯವಿತ್ತು.
ಈ ವೇಳೆ ಬ್ಯಾಟಿಂಗ್ ಬಂದ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 29 ರನ್ ಸಿಡಿಸಿ ಟೀ ಇಂಡಿಯಾ ಗೆಲುವಿಗೆ ಕಾರಣರಾದರು. ಅಲ್ಲದೇ ಪಂದ್ಯದ ಕೊನೆಯ ಎಸೆತದಲ್ಲಿ 5 ರನ್ ಅಗತ್ಯವಿತ್ತು. ಈ ವೇಳೆ ಸಿಕ್ಸರ್ ಸಿಡಿಸಿ ಹೀರೋ ಎನಿಸಿಕೊಂಡರು.