ತಿರುವನಂತಪುರಂ: ನನ್ನ 19 ವರ್ಷಗಳ ರಾಜಕೀಯ ಜೀವನದಲ್ಲಿ ಮಣಿಪುರದಂತಹ ಸಂಘರ್ಷದ ಅನುಭವವನ್ನು ನಾನು ಎಂದಿಗೂ ಅನುಭವಿಸಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ತವರು ಕ್ಷೇತ್ರವಾದ ವಯನಾಡಿಗೆ (Wayanad) ಶನಿವಾರ ರಾಹುಲ್ ಗಾಂಧಿ ಭೇಟಿ ನೀಡಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಣಿಪುರ ಹಿಂಸಾಚಾರ ಕುರಿತು ಮಾತನಾಡಿ, ನಾನು ಸ್ವಲ್ಪ ದಿನಗಳ ಹಿಂದೆ ಮಣಿಪುರಕ್ಕೆ (Manipur Violence) ಹೋಗಿದ್ದೆ. ನಾನು 19 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಮಣಿಪುರದಲ್ಲಿ ನಾನು ಅನುಭವಿಸಿದ ಅನುಭವವನ್ನು ರಾಜಕೀಯ ಜೀವನದಲ್ಲಿ ಎಂದಿಗೂ ಅನುಭವಿಸಿಲ್ಲ. ಬಿಜೆಪಿ ಕುಟುಂಬಗಳನ್ನು ನಾಶ ಮಾಡುವ ಗುರಿ ಹೊಂದಿದೆ. ಭಾರತವನ್ನು ವಿಭಜಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಸಮಯದಲ್ಲಿ ಟಿಎಂಸಿ ರಕ್ತದೊಂದಿಗೆ ಆಟವಾಡಿದೆ: ಮೋದಿ ವಾಗ್ದಾಳಿ
Advertisement
Advertisement
ನೀವು ಸಾವಿರಾರು ಕುಟುಂಬಗಳನ್ನು ನಾಶಪಡಿಸಿದ್ದೀರಿ. ನೀವು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಅವಕಾಶ ನೀಡಿದ್ದೀರಿ. ನೀವು ಜನರ ಹತ್ಯೆಗೆ ಅವಕಾಶ ಮಾಡಿಕೊಟ್ಟಿದ್ದೀರಿ. ದೇಶದ ಪ್ರಧಾನಿಯಾಗಿ ನೀವು ನಗುತ್ತಿದ್ದೀರಾ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ವೈಖರಿ ವಿರುದ್ಧ ಮತ್ತೆ ರಾಹುಲ್ ಗಾಂಧಿ ಗುಡುಗಿದ್ದಾರೆ.
Advertisement
ಪ್ರಧಾನಿಯವರ ಎರಡು ಗಂಟೆ 13 ನಿಮಿಷಗಳ ಭಾಷಣದಲ್ಲಿ ಮಣಿಪುರದ ಸಮಸ್ಯೆಗೆ ಸಿಕ್ಕ ಸಮಯ ಕೇವಲ 2 ನಿಮಿಷ. ನೀವು ಭಾರತ್ ಮಾತೆಯ ಹತ್ಯೆಯ ಬಗ್ಗೆ ಕೇವಲ ಎರಡು ನಿಮಿಷಗಳ ಕಾಲ ಮಾತನಾಡಿದ್ದೀರಿ. ಹೀಗೆ ಮಾಡಲು ನಿಮಗೆ ಎಷ್ಟು ಧೈರ್ಯ? ನೀವು ಭಾರತದ ಕಲ್ಪನೆಯನ್ನು ಹೇಗೆ ತಳ್ಳಿಹಾಕುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಪ್ರಧಾನಿ ನಗುತ್ತ ಜೋಕ್ ಮಾಡಿಕೊಂಡಿದ್ದಾರೆ – ರಾಹುಲ್ ಕಿಡಿ
Advertisement
ಕಲ್ಪೆಟ್ಟಾದಲ್ಲಿ ವಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಇಂದು ಮಾತನಾಡಿದರು. ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಿದ ನಂತರ ವಯನಾಡಿಗೆ ರಾಹುಲ್ ಗಾಂಧಿ ಮೊದಲ ಭೇಟಿ ನೀಡಿದ್ದರು. ಅವರನ್ನು ಸ್ವಾಗತಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
Web Stories