– 10 ಕೋಟಿಗೆ ಇಂಧನ ಇಲಾಖೆ ಬಿಕರಿಯಾಗಿದೆ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Govt) ವಿರುದ್ಧ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು (HD Kumaraswamy) ಇಂದು ದಾಖಲೆ ಸಮೇತ ಬಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನನ್ನ ಬಳಿ ದಾಖಲೆ ಇದೆ ಅಂತಾ ಪೆನ್ ಡ್ರೈವ್ (Pendrive Politics) ಪ್ರದರ್ಶನ ಮಾಡಿದ್ದಾರೆ. ಶರ್ಟ್ ಪಾಕೆಟ್ ನಲ್ಲಿ ಪೆನ್ ಡ್ರೈವ್ ಹಿಡಿದುಕೊಂಡು ಬಂದಿರುವ ಕುಮಾರಸ್ವಾಮಿ, ವರ್ಗಾವಣೆ ದಂಧೆಯ ಆಡಿಯೋ (Transfer Scam Audio) ಇದೆ ಎಂದು ಹೇಳುವ ಮೂಲಕ ಮತ್ತೊಂದು ಬಾಂಬ್ ಹಾಕಿದ್ದಾರೆ.
KST ಟ್ಯಾಕ್ಸ್ ನಾನ್ ಇಟ್ಕೊಂಡಿಲ್ಲ. ತಾಜ್ ವೆಸ್ಟೆಂಡ್‍ದ್ದು ಬಾಕಿ ಬಿಲ್ ಕಾಂಗ್ರೆಸ್‍ಗೆ (Congress) ಕಳಿಸಿದ್ರಾ?. ನಾನೇನು ಬೀದಿಲಿ ಹೋಗುವವನಾ?. 2-3 ಲಕ್ಷ ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ? ಬ್ಲ್ಯೂಫಿಲ್ಮ್‍ಂ ಅನ್ನು ಟೆಂಟ್ ನಲ್ಲಿ ತೋರಿಸಿ ಬಂದವನಲ್ಲ ನಾನು ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಮಂಡ್ಯದಲ್ಲಿ ವರ್ಗಾವಣೆ ಆಯ್ತಲ್ಲ. ತನಿಖೆಯಾದವರನ್ನು ಸಸ್ಪೆಂಡ್ ಆದವರನ್ನು ಮತ್ತೆ ತೆಗೆದುಕೊಳ್ಳುತ್ತಾರೆ. ಲಾಟರಿ ದಂಧೆ ನಡೆಸಿದವರನ್ನು ಆಚೆ ಕಳಿಸಿದ್ದೇನೆ. ಈಗಲೂ ನಾನು ತಾಜ್ ವೆಸ್ಟೆಂಡ್‍ಗೆ ಹೋಗ್ತೀನಿ. ನಾನೇನ್ ಕಾಂಗ್ರೆಸ್ ನವರನ್ನು ಕೇಳ್ಕೊಂಡು ಹೋಗಬೇಕಾ?. ಪರಿಹಾರದ ದುಡ್ಡಲ್ಲಿ ಮಜಾ ಮಾಡಿದವರು ನೀವು ಎಂದು ಹೆಚ್‍ಡಿಕೆ ಗರಂ ಆದರು.
ಸಮಯ ಬರಲಿ ಪೆನ್ ಡ್ರೈವ್ ಬಿಡುಗಡೆ ಮಾಡ್ತೀನಿ. ಮೈ ಕೈ ಪರಚಿಕೊಳ್ಳುವುದು ಬೇಡ ಅಂತಾ ಗುಂಡೂರಾವ್ ಹೇಳಿದರಲ್ಲ. ನಾನೇಕೆ ಮೈ ಕೈ ಪರಚಿಕೊಳ್ಳಲಿ?. ಸೋತಾಗ್ಲೂ ಜನರ ಕಷ್ಟ-ಸುಃಖ ಕೇಳಿದ್ದೇವೆ. ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ಎಷ್ಟಿತ್ತು?. ಆಸ್ತಿ ಈಗ ಎಷ್ಟಿದೆ ತನಿಖೆ ಮಾಡಲಿ ಎಂದು ಸವಾಲೆಸೆದರು.
ಇಂಧನ ಇಲಾಖೆ ಟ್ರಾನ್ಸ್ ಫರ್ ಆಗಿದೆ. 10 ಕೋಟಿಗೆ ನಿನ್ನೆ ಬಿಕರಿಯಾಗಿದೆ. ನಗರ ಅಭಿವೃದ್ಧಿ ಇಲಾಖೆ ಇಲ್ಲ. ಇಲ್ಲಿರೋದು ನಗದು ಅಭಿವೃದ್ಧಿ ಇಲಾಖೆ ಇರೋದು. ಬಿಎಸ್‍ವೈ (B S Yediyurappa) ನನ್ನ ಬಗ್ಗೆ ಒಳ್ಳೆಯ ಮಾತಾನಾಡಿದ್ದಾರೆ. ಯಾರ್ಯಾರು ನನ್ನ ಜೊತೆ ರಾಜ್ಯದ ಸಂಪತ್ತು ಉಳಿಸಲು ಕೈ ಜೋಡಿಸ್ತಾರೋ ಅವರಿಗೆ ಸ್ವಾಗತ ಕೋರುತ್ತೇನೆ ಎಂದು ಇದೇ ವೇಳೆ ಹೆಚ್‍ಡಿಕೆ ಹೇಳಿದರು.
ಟನಲ್ ಮಾಡೋಕೆ ಹೋಗಿ ಬೆಂಗಳೂರನ್ನು ಸಮಾಧಿ ಮಾಡಿದ್ರಿ. ಈಗಾಗಲೇ ಅಭಿವೃದ್ಧಿ ವಿಚಾರದಲ್ಲಿ ಸಮಾಧಿಯಾಗಿದೆ. ಅಂಬೇಡ್ಕರ್ ಹೆಸ್ರು ಹೇಳ್ಕೊಂಡು ಲೂಟಿ ಮಾಡ್ತಾ ಇದ್ದೀರಾ. ಬೆಂಗಳೂರು ಸಮಸ್ಯೆಗೆ ವೈಜ್ಞಾನಿಕ ರೀತಿಯಲ್ಲಿ ಕೆಲಸ ಮಾಡಿ. ಟನಲ್ ಮಾಡಿಸೋಕೆ ಹೋಗೋಕೆ ಬೆಂಗಳೂರು ಹಾಳ್ ಮಾಡಬೇಡಿ ಎಂದು ಡಿಕೆಗೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.
Web Stories