ಮಾಲಿವುಡ್ ಜನಪ್ರಿಯ ಖಳನಾಯಕ ವಿನಾಯಕನ್ ನೇರವಾಗಿ ತಮ್ಮ ಲೈಂಗಿಕ ಸಂಬಂಧದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಇವರ ವಿವಾದಿತ ಮಾತಿನಿಂದಾಗಿ ಅಭಿಮಾನಿಗಳು ಬೇಸರಗೊಂಡಿದ್ದು ಮಲಯಾಳಂ ಸಿನಿಮಾ ರಂಗದಲ್ಲಿ ಇವರ ಮಾತು ಭಾರೀ ವಿವಾದಕ್ಕೆ ಕಾರಣವಾಗಿದೆ.
ಕೇರಳ ಮೂಲದ ವಿನಾಯಕನ್ ತಮಿಳು ಸಿನಿಮಾಗಳಾದ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದರು. ಆದರೆ ಇತ್ತೀಚೆಗೆ ನಡೆದ ಇವೆಂಟ್ವೊಂದರಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ಇವರು ಮಹಿಳೆಯರ ಕೋಪಕ್ಕೆ ಗುರಿಯಾಗಿದ್ದಾರೆ. ವಿನಾಯಕನ್ ಕೇವಲ ನಟ ಮಾತ್ರವಲ್ಲ, ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿಯೂ ಗುರುತಿಸಿಕೊಂಡಿದ್ದು ತಮ್ಮ ಅದ್ಭುತ ಪ್ರತಿಭೆಯಿಂದಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನೂ ಹೊಂದಿದ್ದಾರೆ. ಇದನ್ನೂ ಓದಿ: ‘ಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ
ಇತ್ತೀಚೆಗೆ ಮಲಯಾಳಂನ ‘ಒರುಥಿ’ ಸಿನಿಮಾ ಪ್ರಚಾರದ ವೇಳೆ ಈ ನಟ ಮಾತನಾಡುತ್ತಾ, “ಈವರೆಗೂ ನಾನು 10 ಮಹಿಳೆಯರ ಜೊತೆ ಸೆಕ್ಸ್ ಮಾಡಿದ್ದೇನೆ. ನೇರವಾಗಿಯೇ ಅವರನ್ನು ನನ್ನ ಜೊತೆ ನೀವು ಮಲಗುತ್ತೀರಾ ಎಂದು ಕೇಳುತ್ತೇನೆ. ಅವರು ಸರಿ ಎಂದರೆ ಓಕೆ. ಇಲ್ಲವೆದರೆ ನಾನು ಅಲ್ಲಿಗೆ ಬಿಟ್ಟುಬಿಡುತ್ತೇನೆ. ಸೆಕ್ಸ್ ವಿಷಯದಲ್ಲಿ ನಾನು ಯಾರನ್ನೂ ಬಲವಂತ ಮಾಡುವುದಿಲ್ಲ. ಮಹಿಳೆ ಬಳಿ ಸೆಕ್ಸ್ ಬಗ್ಗೆ ಕೇಳುವುದು ‘ಮೀಟೂ’ ಎಂದಾದರೆ ನಾನದನ್ನು ಮುಂದುವರೆಸುತ್ತೇನೆ’ ಎಂದು ನೇರವಾಗಿ ಹೇಳಿದ್ದಾರೆ.
ಈ ಹೇಳಿಕೆಯಿಂದ ವಿನಾಯಕನ್ ಅಭಿಮಾನಿಗಳು ಸೇರಿದಂತೆ ಸಿನಿರಂಗವೇ ಅಸಮಾಧಾನ ವ್ಯಕ್ತಪಡಿಸಿದೆ. ಅದರಲ್ಲಿಯೂ ಮಹಿಳೆಯರು ಇವರ ವಿರುದ್ಧ ರೋಚಿಗೆದ್ದಿದ್ದಾರೆ. ಅಲ್ಲದೇ ‘ಒರುಥಿ’ ಸಿನಿಮಾದಲ್ಲಿ ನಟಿ ನವ್ಯಾ ನಾಯರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ವಿನಾಯಕನ್ ಈ ಹೇಳಿಕೆ ನೀಡುವಾಗ ಅವರು ವೇದಿಕೆ ಮೇಲೆಯೇ ಇದ್ದರು. ಇದರಿಂದ ನವ್ಯಾ ಅಭಿಮಾನಿಗಳು ಸಹ ಬೇಸರ ವ್ಯಕ್ತಪಡಿಸಿದ್ದು, ಟೀಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಉಪ್ಪಿ, ರಾಮ್ ಗೋಪಾಲ್ ವರ್ಮಾ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿದೆ ಭೂಗತಲೋಕ
ಈ ಕುರಿತು ಪ್ರತಿಕ್ರಿಯಿಸಿರುವ ನಟಿ ನವ್ಯಾ, ‘ಅವರು ಹಾಗೆ ಮಾತನಾಡಿದಾಗ ನಾನು ಅಸಹಾಯಕಳಾಗಿದ್ದೆ. ಆ ವೇಳೆ ನಾನು ಏನ್ನನ್ನೂ ಮಾಡಲು ಆಗುತ್ತಿರಲಿಲ್ಲ. ಅರ್ಥ ಮಾಡಿಕೊಳ್ಳಿ’ ಎಂದು ಸಮರ್ಥಿಸಿಕೊಂಡಿದ್ದಾರೆ. ಬಳಿಕ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ.