ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ನನಗೆ ವರ್ಗಾವಣೆ (Transfer) ಮಾಡೋ ಅಧಿಕಾರವೇ ಇರಲಿಲ್ಲ ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy), ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಕಚೇರಿಯಲ್ಲಿ ವರ್ಗಾವಣೆ ದಂಧೆ ಎಂದು ಆರೋಪ ಮಾಡಿದ್ದ ಕುಮಾರಸ್ವಾಮಿಗೆ ತಮ್ಮ ಅವಧಿಯಲ್ಲಿ ಆಗಿದ್ದನ್ನೇ ಈಗ ಹೇಳ್ತಿದ್ದಾರೆ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಅವಕಾಶ ಕೊಟ್ಟರೆ ನಾನೂ ಮಾಡ್ತೀನಿ: ವಿಪಕ್ಷ ನಾಯಕ ಸ್ಥಾನ ಆಕಾಂಕ್ಷೆ ಹೊರಹಾಕಿದ ಅಶ್ವಥ್ ನಾರಾಯಣ್
ಸಿದ್ದರಾಮಯ್ಯ ಅವರು ನೆನಪು ಮಾಡಿಕೊಳ್ಳಬೇಕು. ನಾನು ಸಿಎಂ ಆಗಿದ್ದಾಗ ನಿಮ್ಮ ಮಂತ್ರಿಗಳು ನನ್ನನ್ನ ಯಾವ ರೀತಿ ನಡೆಸಿಕೊಂಡಿದ್ದಾರೆ ಅನ್ನೋದನ್ನ ಒಮ್ಮೆ ನೆನಪು ಮಾಡಿಕೊಳ್ಳಬೇಕು. ನಿಮ್ಮ ಪಕ್ಷ ಸಚಿವರು ಪೊಗರುದಸ್ತು ಇಲಾಖೆ ಇಟ್ಟುಕೊಂಡಿದ್ರು. ಏನ್ ಜನರ ಕೆಲಸ ಮಾಡಲಿಕ್ಕೆ ಇಟ್ಟುಕೊಂಡಿದ್ರಾ ಇಲಾಖೆಗಳನ್ನ? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನಗೆ ವರ್ಗಾವಣೆ ಮಾಡೋ ಅಧಿಕಾರವೇ ಇರಲಿಲ್ಲ. ಕಾಂಗ್ರೆಸ್ ಅವರು ಹೇಳಿದಂತೆ ನಾನು ವರ್ಗಾವಣೆ ಮಾಡಬೇಕಿತ್ತು ಅಂತಾ ತಿಳಿಸಿದರು.
ನನ್ನ ಕಾಲದಲ್ಲಿ ವಿಧಾನಸೌಧದಲ್ಲೇ ಚರ್ಚೆ ಮಾಡಿದ್ದೇನೆ. ಬೆಂಗಳೂರು ಪ್ರಾಧಿಕಾರಕ್ಕೆ 10-15 ಕೋಟಿ ಹಣ ಕೊಡ್ತೀವಿ ಅಂತಾ ಬಂದವರನ್ನ ಆಚೆಗಿಟ್ಟಿದೆ. ಯಲಹಂಕ ತಹಶೀಲ್ದಾರ್‌ಗೆ 1.5 ಕೋಟಿ ಕೊಡೋಕೆ ಬಂದಿದ್ದವರನ್ನ ಉಗಿದು ಆಚೆಗಿಟ್ಟಿದ್ದೆ. ಇದು ಕುಮಾರಸ್ವಾಮಿ ನಡೆದುಕೊಂಡಂತ ರೀತಿ. ನನ್ನ ಅವಧಿಯಲ್ಲಿ 5 ರೂ. ತೆಗೆದುಕೊಳ್ಳದೇ ಪ್ರಾಮಾಣಿಕವಾಗಿ ವರ್ಗಾವಣೆ ಮಾಡಿದ್ದೇನೆ ಅಂತಾ ಹೆಚ್‌ಡಿಕೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಈ ತಿಂಗಳ ಉಚಿತ ವಿದ್ಯುತ್ ಪಡೆಯೋಕೆ ಜುಲೈ 25 ರೊಳಗೆ ನೋಂದಾಯಿಸಿಕೊಳ್ಳಿ: ಇಂಧನ ಇಲಾಖೆ ಸೂಚನೆ
ಇದೇ ವೇಳೆ ಅನ್ನಭಾಗ್ಯ ಯೋಜನೆಗೆ ಹಣ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಈ ಸರ್ಕಾರದಲ್ಲಿ ಎಷ್ಟೋ ಜನ ಸಿಎಂ ಇದ್ದಾರೆ. ಸಿದ್ದರಾಮಯ್ಯ ಒಬ್ಬರೇ ಈ ಸರ್ಕಾರದ ಸಿಎಂ ಅಲ್ಲ. ಹಲವಾರು ಜನ ಸಿಎಂ ಇದ್ದಾರೆ. ಸಿದ್ದರಾಮಯ್ಯ ಅವರು 15 ದಿನಗಳಲ್ಲಿ ಹಣ ಕೊಡ್ತೀನಿ ಅಂದ್ರು. ಆದ್ರೆ ಸಚಿವ ಸತೀಶ್ ಜಾರಕಿಹೊಳಿ ಆಗಸ್ಟ್ ಅಂತಾರೆ. ಯಾರ ಮಾತು ನಂಬಬೇಕು? ಈ ಸರ್ಕಾರದಲ್ಲಿ ಎಷ್ಟು ಜನ ಸಿಎಂ ಇದ್ದಾರೆ? ಇವರ ಹೈಕಮಾಂಡ್ ಯಾರ್ಯಾರಿಗೆ ಮಾತನಾಡುವ ಅಧಿಕಾರ ಕೊಟ್ಟಿದೆ? ಎಂದು ಕಿಡಿ ಕಾರಿದ್ದಾರೆ.
Web Stories