ಬೆಂಗಳೂರು: ನಾನು ಖಾಕಿಯಲ್ಲಿ ಪ್ರತಿ ಕ್ಷಣ ಜೀವಿಸಿದ್ದೇನೆ ಎಂದು ಡಿಸಿಪಿ ಅಣ್ಣಾಮಲೈ ಅವರು ಅಭಿಮಾನಿಗಳಿಗೆ ಪತ್ರ ಬರೆಯುವ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಅಣ್ಣಾಮಲೈ ಅವರು ತಮ್ಮ ವೈಯಕ್ತಿಕ ಜೀವನದ ಕಾರಣಗಳಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ಅಭಿಮಾನಿಗಳು ರಾಜೀನಾಮೆ ನೀಡದಂತೆ ಕೇಳಿಕೊಂಡಿದ್ದರು. ಈಗ ಅಣ್ಣಾಮಲೈ ಪತ್ರ ಬರೆಯುವ ಮೂಲಕ ಅಭಿಮಾನಿಗಳು ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಣ್ಣಾಮಲೈ ಬಗ್ಗೆ ಗೊತ್ತಿರದ ಸಂಗತಿ ಇಲ್ಲಿದೆ
Advertisement
Advertisement
ಪತ್ರದಲ್ಲಿ ಏನಿದೆ?
ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ನನ್ನ ರಾಜೀನಾಮೆ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಇಂದು ಅಂದರೆ ಮೇ 28ರಂದು ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆಯ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳಲೂ ಸ್ವಲ್ಪ ಸಮಯ ಬೇಕಾಗುತ್ತದೆ. ನನ್ನ ಸುತ್ತ ಹರಿದಾಡುವ ಮಾತುಗಳ ಬಗ್ಗೆ ನಾನು ಸ್ಪಷ್ಟನೆ ನೀಡುತ್ತೇನೆ. ನಾನು 6 ತಿಂಗಳಿನಿಂದ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಕಳೆದ 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ. ಇದನ್ನೂ ಓದಿ: ಡಾಕ್ಟರ್ ಆದ್ರು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ
Advertisement
Advertisement
ನಾನು ನನ್ನ ಸಹದ್ಯೋಗಿಗಳ ಜೊತೆ ಕಳೆದ ಸುಂದರವಾದ ಕ್ಷಣಗಳು ಖಾಕಿ ನನಗೆ ಎಂದಿಗೂ ಮರೆಯಲು ಬಿಡುವುದಿಲ್ಲ. ಪೊಲೀಸ್ ಅಧಿಕಾರಿಯ ಕೆಲಸ ದೇವರಿಗೆ ಹತ್ತಿರವಾದ ಕೆಲಸ ಎಂದು ನಾನು ನಂಬಿದ್ದೇನೆ. ಹೆಚ್ಚು ಒತ್ತಡ ಇರುವ ಕೆಲಸಗಳು ತನ್ನದೇ ಆದ ಕಡಿಮೆ ಸಮಯದಲ್ಲಿ ಬರುತ್ತದೆ. ನಾನು ಸಾಕಷ್ಟು ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ನಾನು ಕಷ್ಟದಲ್ಲಿದ್ದಾಗ ನನಗೆ ಜನರು ಸಹಾಯ ಮಾಡಿದ್ದರು. ಆದರೆ ಅವರಿಗೆ ಕಷ್ಟದ ಸಮಯ ಬಂದಾಗ ನನಗೆ ಅವರ ಜೊತೆ ಇರಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಚುನಾವಣೆಯ ಹೀರೋಗಳನ್ನು ಪರಿಚಯಿಸಿದ ಡಿಸಿಪಿ ಅಣ್ಣಾಮಲೈ
ಕಳೆದ ವರ್ಷ ನಾನು ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡಿದ್ದಾಗ ನನ್ನ ಜೀವನದಲ್ಲಿ ನನ್ನ ಆದ್ಯತೆಗಳನ್ನು ಉತ್ತಮಗೊಳಿಸಲು ಸಹಾಯ ಮಾಡಿತ್ತು. ಮಧುಕರ್ ಶೆಟ್ಟಿ ಸರ್ ಸಾವು ನನಗೆ ನನ್ನ ಜೀವನದ ಬಗ್ಗೆ ಯೋಚಿಸಲು ಸಹಾಯ ಮಾಡಿತ್ತು. ಎಲ್ಲ ಒಳ್ಳೆಯ ಕ್ಷಣಗಳು ಮುಗಿಯುತ್ತಾ ಬಂದಿದೆ. ಖಾಕಿ ಸಮಯ ಇಲ್ಲಿಗೆ ಕೊನೆ ಆಗುತ್ತದೆ ಎಂದು ನಿರ್ಧರಿಸಿದ್ದೇನೆ. ಲೋಕಸಭಾ ಚುನಾವಣೆ ನಂತರ ರಾಜೀನಾಮೆ ನೀಡಲು ನಿರ್ಧರಿಸಿದೆ. ಚುನಾವಣೆ ಸಮಯದಲ್ಲಿ ನನ್ನ ರಾಜೀನಾಮೆಯಿಂದ ಸರ್ಕಾರಕ್ಕೆ ಅನಾನುಕೂಲವಾಗಬಾರದು ಎನ್ನುವ ಕಾರಣಕ್ಕೆ ಈಗ ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆಯಿಂದ ಯಾರಿಗಾದರೂ ನೋವಾದರೆ ಕ್ಷಮೆ ಕೇಳುತ್ತೇನೆ. ಇದು ನನಗೆ ಹಾಗೂ ನನ್ನ ಬೆಸ್ಟ್ ಫ್ರೆಂಡ್ ಅಂದರೆ ನನ್ನ ಪತ್ನಿಗೆ ಭಾವನಾತ್ಮಕವಾದ ಸಮಯ. ಇದನ್ನೂ ಓದಿ: ವೃದ್ಧಾಶ್ರಮದ ವಯೋವೃದ್ಧರ ಆಸೆಯನ್ನು ಎಸ್‍ಪಿ ಅಣ್ಣಾಮಲೈ ನೆರವೇರಿಸಿದ್ರು: ವಿಡಿಯೋ ನೋಡಿ
ಮುಂದೇನು?
ಸದ್ಯಕ್ಕೆ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಾನು ನನ್ನ ಜೀವನದಲ್ಲಿ ಕಳೆದುಕೊಂಡ ಪುಟ್ಟ ಪುಟ್ಟ ಕ್ಷಣಗಳನ್ನು ಎಂಜಾಯ್ ಮಾಡುತ್ತೇನೆ. ನನ್ನ ಮಗ ಈಗ ಬೇಗ ಬೆಳೆಯುತ್ತಿದ್ದಾನೆ. ನಾನು ಈಗ ಅವನಿಗೆ ಒಳ್ಳೆಯ ತಂದೆ ಆಗಬೇಕು. ಅವನು ಬೆಳೆಯುವ ಪ್ರತಿ ಕ್ಷಣ ಅವನಿಗೆ ನನ್ನ ಸಮಯ ಬೇಕು. ನಾನು ನನ್ನ ಮನೆಗೆ ಹಿಂತಿರುಗಿ ಕೃಷಿ ಕೆಲಸ ಮಾಡುತ್ತೇನೆ. ಅಲ್ಲದೆ ನನ್ನ ಕುರಿಗಳು ನನ್ನ ಮಾತುಗಳನ್ನು ಕೇಳುತ್ತದೆಯೋ ಎಂಬುದನ್ನು ನೋಡುತ್ತೇನೆ. ಏಕೆಂದರೆ ನಾನು ಈಗ ಪೊಲೀಸ್ ಅಧಿಕಾರಿ ಅಲ್ಲ. ಇದನ್ನೂ ಓದಿ: ತಾನೊಬ್ಬ ಎಸ್ಪಿ ಅನ್ನೋದನ್ನೆ ಮರೆತು ಮಹತ್ವದ ಕೆಲಸ ಮಾಡಿದ್ರು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ!
ಕಾರ್ಕಳ, ಉಡುಪಿ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ನನ್ನ ಜೊತೆ ನ್ಯಾಯಕ್ಕಾಗಿ ಹೋರಾಡಿದ ಪ್ರತಿಯೊಬ್ಬ ಅದ್ಭುತ ವ್ಯಕ್ತಿಯನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಹಿರಿಯ ಅಧಿಕಾರಿಗಳು ಕಲಿಸಿ ಕೊಟ್ಟ ಮಾರ್ಗದರ್ಶನ ಹಾಗೂ ನನಗಿಂತ ಸ್ಮಾರ್ಟ್ ಆದ ಜೂನಿಯರ್ ಅಧಿಕಾರಿಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ನನ್ನ ಪೇದೆಗಳನ್ನು ಸಹ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಅವರಿಗಾಗಿ ಜೀವಿಸಿದ್ದೇನೆ ಹಾಗೂ ಅವರಿಗೆ ಅರ್ಹತೆ ಇರುವ ಉತ್ತಮ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಇದನ್ನೂ ಓದಿ: ಪ್ರವಾಸಿಗರ ಕೆಟ್ಟುನಿಂತ ವಾಹನ ರಿಪೇರಿಗಾಗಿ ಕೈಯಲ್ಲಿ ಸ್ಪ್ಯಾನರ್ ಹಿಡಿದ ಎಸ್‍ಪಿ ಅಣ್ಣಾಮಲೈ
ನಾನು ಘನತೆಯಿಂದ ಹಾಗೂ ಹೆಮ್ಮೆಯಿಂದ ನನ್ನ ಸೇವೆಯನ್ನು ಸಲ್ಲಿಸಿದ್ದೇನೆ ಎಂದುಕೊಳ್ಳುತ್ತೇನೆ. ಯಾವುದೇ ಸಮಯದಲ್ಲಿ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಒಂದು ಮಾತು ಸತ್ಯ ನಾನು ನಿಮ್ಮನ್ನು ಹಾಗೂ ಮುಖ್ಯವಾಗಿ ನಿಮ್ಮ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.