– ಕಾಂಗ್ರೆಸ್‌ನಲ್ಲಿ ತಾರಕಕ್ಕೇರಿದ ಅಧ್ಯಕ್ಷ ಪಟ್ಟ ಫೈಟ್
ಬೆಂಗಳೂರು: ಕಾಂಗ್ರೆಸ್ (Congress) ಒಳಜಗಳಕ್ಕೆ ಮದ್ದರೆಯಲು ರಾಜ್ಯ ಉಸ್ತುವಾರಿ ಸುರ್ಜೇವಾಲ (Randeep surjewala) ಕೊಟ್ಟ ವಾರ್ನಿಂಗ್ ಕೆಲಸ ಮಾಡಿಲ್ಲ. ಬದಲಾಗಿ ಪಟ್ಟದ ಕದನ ಹೊಸ ಸ್ವರೂಪ ಪಡೆದಿದೆ. ಹಳೆಯ ಅಸ್ತವೊಂದಕ್ಕೆ ಸಿಎಂ ಬಣ ಸಾಣೆ ಹಿಡಿದಿದೆ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಕೂಗೆಬ್ಬಿಸಿ ಹೊಸ ಆಟಕ್ಕೆ ನಾಂದಿ ಹಾಡಿದೆ.
Advertisement
ಸಿಎಂ ಆಪ್ತ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬಹಿರಂಗವಾಗಿಯೇ ಹೇಳಿಕೆ ನೀಡಿದ ಬೆನ್ನಲ್ಲೇ ಈಗ ಗೃಹ ಸಚಿವ ಪರಮೇಶ್ವರ್ (G. Parameshwara) ಒಂದು ಹುದ್ದೆ ಪರ ಧ್ವನಿಗೂಡಿಸಿದ್ದಾರೆ.
Advertisement
ಡಿಕೆ ಶಿವಕುಮಾರ್ (DK Shivakumar) ಅವರ ಬಳಿ ಎರಡು ದೊಡ್ಡ ಖಾತೆಯಿದೆ. ಅವರಿಗೆ ಪಕ್ಷ ಸಂಘಟನೆಯ ಒತ್ತಡವೂ ಇದೆ. ನಾನು ಹಿಂದೆ ಅಧ್ಯಕ್ಷಗಿರಿಗಾಗಿ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದೆ ಎಂದು ಹೇಳುವ ಮೂಲಕ ಒಂದು ಒಂದು ಹುದ್ದೆಯ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಎಟಿಎಂ ವಾಹನದ ಮೇಲೆಯೇ ಗುಂಡು – 93 ಲಕ್ಷದೊಂದಿಗೆ ದುಷ್ಕರ್ಮಿಗಳು ಪರಾರಿ
Advertisement
Advertisement
ಅಂದು ನನಗೆ ಮಂತ್ರಿ ಅಥವಾ ಅಧ್ಯಕ್ಷಗಿರಿ ಪೈಕಿ ಒಂದು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದರು. ನಾನು ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಿದ್ದೆ. ಶಿವಕುಮಾರ್ ಈಗ ಡಿಸಿಎಂ ಮತ್ತು ಅಧ್ಯಕ್ಷರಾಗಿದ್ದಾರೆ. ಪಕ್ಷ ಸಂಘಟಿಸುವ ದೊಡ್ಡ ಜವಾಬ್ದಾರಿ ಸಹ ಇದೆ. ಹೈಕಮಾಂಡ್‌ನವರು ಏನು ತೀರ್ಮಾನ ಮಾಡ್ತಾರೋ ನೋಡಬೇಕು ಎಂದು ಹೇಳಿದರು.
ಎರಡು ಹುದ್ದೆಯಲ್ಲಿರುವ ಕಾರಣ ಸಹಜವಾಗಿ ಅಧ್ಯಕ್ಷ ಸ್ಥಾನ ಬದಲಾಯಿಸಿ ಅಂತ ಬೇರೆಯವರು ಕೇಳುತ್ತಾರೆ. ನಾನು ಅಧ್ಯಕ್ಷ ಇದ್ದಾಗಲೂ ಬದಲಾಯಿಸಿ ಅಂತ ಹೇಳಿದ್ದರು. ನಾವು ಒಂದು ಸಮುದಾಯ ಸೇರಿ ಸಭೆ ಮಾಡುತ್ತೇವೆ ಎಂದಿದ್ದನ್ನು ಹೈಕಮಾಂಡ್ ಗಮನಿಸಿದೆ. ಹಾಗೆಯೇ ಪಕ್ಷ ಸಂಘಟನೆ ಆಗುತ್ತಿದ್ಯಾ ಇಲ್ವೋ ಎಂಬುದನ್ನು ಹೈಕಮಾಂಡ್ ನಾಯಕರು ಗಮನಿಸುತ್ತಾರೆ ಎಂದರು.