ಚಿತ್ರದುರ್ಗ: ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಹಾಲಿ ಶಾಸಕ ಎಸ್.ತಿಪ್ಪೇಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಎರಡು ದಿನಗಳ ಹಿಂದೆ ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಇಂದು ಮೊಳಕಾಲ್ಮೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಶಾಸಕ ತಿಪ್ಪೇಸ್ವಾಮಿ, ಈ ಹಿಂದೆ ಪರಿವರ್ತನಾ ಯಾತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ನನ್ನ ಬಳಿ ಹಣ ಕೇಳಿದ್ದಕ್ಕೆ, 25 ಲಕ್ಷ ರೂ. ನೀಡಿದ್ದೆ. ಮೋದಿ, ಅಮಿತ್ ಶಾ ಸಮಾವೇಶಗಳಿಗಾಗಿ ಇಲ್ಲಿಂದ ನನ್ನ ಖರ್ಚಿನಲ್ಲಿ ಬಸ್‍ಗಳನ್ನು ಕಳುಹಿಸಲಾಗಿತ್ತು. ಬಿಜೆಪಿ ನಾಯಕರೆಲ್ಲಾ ಪಕ್ಷ ಸಂಘಟನೆಗಾಗಿ ನನ್ನಿಂದ 4-5 ಕೋಟಿ ರೂ. ಖರ್ಚು ಮಾಡಿಸಿದ್ದಾರೆ ಅಂತಾ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.
Advertisement
ನನ್ನಿಂದ ಹಣ ಪಡೆದುಕೊಂಡ ಬಳಿಕ ಕೊನೆ ಗಳಿಗೆಯಲ್ಲಿ ನನಗೆ ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಲಾಯಿತು. ದೊಡ್ಡ ಲೀಡರ್ ಎಂದು ಹೇಳಿಕೊಂಡು ಮತ ಕೇಳಲು ಬರುವವರನ್ನು ಎಷ್ಟು ಮನೆಯ ದೀಪ ತೆಗೆದಿದ್ದೀರಿ ಎಂದು ಪ್ರಶ್ನಿಸಿ ಅಂತಾ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ರು.