ರೋಹಿತ್ ನಾಯಕತ್ವ ತೊರೆಯಬಹುದು: ಮಂಜ್ರೇಕರ್

Public TV
1 Min Read
sanjay manjrekar

ಮುಂಬೈ: ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ  ನಾಯಕತ್ವವನ್ನು ತೊರೆಯಬಹುದು ಎಂದು ಎಂದು ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ರೋಹಿತ್ ಈಗಾಗಲೇ ಮುಂಬೈಗೆ ಐದು ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಅದನ್ನು ಮರೆಯುವಂತಿಲ್ಲ. ಅವರು ಕೂಡಾ ವಿರಾಟ್ ಕೊಹ್ಲಿಯಂತೆಯೇ ನಾಯಕತ್ವವನ್ನು ತೊರೆಯಬಹುದು. ಸ್ವಲ್ಪ ವಿಶ್ರಾಂತಿ ಪಡೆದು ಶುದ್ಧ ಬ್ಯಾಟರ್ ಆಗಿ ಆಡಬಹುದು. ತಂಡದ ನಾಯಕನಾಗಿ ಪೊಲಾರ್ಡ್‍ಗೆ ಜವಾಬ್ದಾರಿಯನ್ನು ವಹಿಸಬಹುದು ಎಂದು ನಾನು ಭಾವಿಸಿದ್ದೇನೆ ಎಂದರು. ಇದನ್ನೂ ಓದಿ: 74 ಎಸೆತಗಳಲ್ಲಿ 165 ರನ್‌ ಚಚ್ಚಿದ ಉತ್ತಪ್ಪ, ದುಬೆ – ಚೆನ್ನೈಗೆ 23 ರನ್‌ಗಳ ಜಯ

Kieron Pollard

ಐಪಿಎಲ್ 2022 ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಂಡವನ್ನು ಜಯದ ಲಯಕ್ಕೆ ಕೊಂಡಯ್ಯಲು ಹೆಣಗಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು: ರವಿಶಾಸ್ತ್ರಿ

ಐಪಿಎಲ್ 2022 ರಲ್ಲಿ ರೋಹಿತ್ ಎಲ್ಲಾ ಇನ್ನಿಂಗ್ಸ್‌ಗಳಲ್ಲಿ ವಿಫಲರಾಗಿದ್ದಾರೆ. ಭಾರತಕ್ಕಾಗಿ ಆಡಿದಾಗ ಅವರ ಸ್ಟ್ರೈಕ್-ರೇಟ್ ಉತ್ತಮವಾಗಿರುತ್ತದೆ. ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ತಂಡದ ಬಗ್ಗೆ ಕಡಿಮೆ ಯೋಚಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ROHITH SHARMA 4

ನಾವು ಭಾರತೀಯ ಕ್ರಿಕೆಟ್‍ನಲ್ಲಿ ಕಾಣುವ ರೋಹಿತ್ ಅವರನ್ನು ಐಪಿಎಲ್‍ನಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ. ರೋಹಿತ್ ಐಪಿಎಲ್ 2022 ಕ್ಕೆ ನಂತರ ನಿವೃತ್ತಿ ಹೊಂದಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *