ಇಸ್ಲಾಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ವರ್ಷದಲ್ಲಿ ಪಾಕಿಸ್ತಾನವನ್ನು ಸಂಕಷ್ಟದಿಂದ ಪಾರು ಮಾಡ್ತಾರೆ ಎಂದು ಪಾಕ್ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (RAW) ಮಾಜಿ ನಿರ್ದೇಶಕ ಅಮರ್ಜಿತ್ ಸಿಂಗ್ ದುಲಾತ್ (Amarjit Singh Dulat) ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನ ಕೆಲ ತಿಂಗಳಿನಿಂದ ಹಣಕಾಸಿನ ಸವಾಲುಗಳನ್ನು ಎದುರಿಸುತ್ತಿದ್ದು, ಆರ್ಥಿಕ ನೆರವಿನ ಅವಶ್ಯಕತೆಯಿದೆ. ಇಂತಹ ಆರ್ಥಿಕ ಬಿಕ್ಕಟ್ಟಿನಿಂದ ನರೇಂದ್ರ ಮೋದಿ ಅವರು ದೇಶವನ್ನು ಪಾರುಮಾಡಬಹುದೆಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
Advertisement
Advertisement
ಮುಂದುವರಿದು, ಪಾಕಿಸ್ತಾನದೊಂದಿಗೆ (Pakistan) ಮಾತುಕತೆ ನಡೆಸಲು ಪ್ರತಿ ಸಮಯವೂ ಉತ್ತಮ ಸಮಯವಾಗಿದೆ. ಅದಕ್ಕಾಗಿ ನಾವು ನೆರೆಹೊರೆಯವರನ್ನೂ ತೊಡಗಿಸಿಕೊಳ್ಳಬೇಕು. ಒಟ್ಟಿನಲ್ಲಿ ಮೋದಿ ಈ ವರ್ಷದಲ್ಲಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡುತ್ತಾರೆ ಅನ್ನೋದು ನನ್ನ ಊಹೆ. ಆದ್ರೆ ಈ ಬಗ್ಗೆ ಆಂತರಿಕ ಮಾಹಿತಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ರಾತ್ರೋ ರಾತ್ರಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ!
Advertisement
Advertisement
ಈ ಕುರಿತು ದೆಹಲಿಯಲ್ಲಿ ಆಯೋಜಿಸಿದ್ದ ಏಷ್ಯಾ ಆರ್ಥಿಕ ಸಂವಾದದಲ್ಲಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ನೀಡಿದ ಚೀನಾ – ಅಮೆರಿಕ ಕಳವಳ
ಭಾರತ ಯಾವುದೇ ನೆರೆಯ ದೇಶಕ್ಕೆ ಸಹಾಯ ಮಾಡುವ ಮುನ್ನ ಸಾರ್ವಜನಿಕರ ಭಾವನೆಗಳನ್ನೂ ಎದುರುನೋಡುತ್ತದೆ. ಕಳೆದ ಕೆಲ ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತೀರಾ ಹದಗೆಟ್ಟಿದೆ. ಹಾಗಾಗಿ ನಾನು ಸಹ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಸಾರ್ವಜನಿಕ ಭಾವನೆಯನ್ನ ಎದುರು ನೋಡುತ್ತೇನೆ. ನನಗೆ ನನ್ನ ಜನರ ಮಿಡಿತ ಗೊತ್ತಿದೆ. ನಿಮಗೆ ಉತ್ತರ ತಿಳಿದಿದೆ ಎಂದು ಭಾವಿಸುತ್ತೇನೆ ಎಂದು ಪರೋಕ್ಷವಾಗಿ ಆರ್ಥಿಕ ಸಹಾಯಕ್ಕೆ ನಿರಾಕರಿಸಿದ್ದಾರೆ.