ನವದೆಹಲಿ: ಮಾಜಿ ಪ್ರಧಾನಿ, ಹಿರಿಯ ರಾಜಕಾರಣಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಇಂದು ಸಂಜೆ ವಿಧಿವಶರಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ಭಾವನಾತ್ಮಕವಾಗಿ ಸಾಲು ಸಾಲು ಟ್ವೀಟ್ ಗಳನ್ನು ಮಾಡಿದ್ದರು.
ಮೋದಿ ಸಂತಾಪ:
ಅಟಲ್‍ಜಿ ಅಗಲುವಿಕೆ ವೈಯಕ್ತಿಕವಾಗಿ ನನಗೆ ಭಾರೀ ನಷ್ಟ ತಂದಿದೆ. ನನ್ನಲ್ಲಿ ಒಂದು ಶೂನ್ಯ ಭಾವ ಸೃಷ್ಟಿಯಾಗಿದೆ. ನಾನು ಮೂಕನಾಗಿದ್ದೇನೆ. ಮಾಜಿ ಪ್ರಧಾನಿ ವಾಜಪೇಯಿ ಅಗಲುವಿಕೆಯಿಂದ ಒಂದು ಯುಗಾಂತ್ಯವಾಗಿದೆ. ಅವರು ದೇಶಕ್ಕಾಗಿಯೇ ಬದುಕಿದ್ದವರು. ದಶಕಗಳ ಕಾಲ ಸೇವೆ ಸಲ್ಲಿಸಿದ್ದವರು.
Advertisement
ನನ್ನಂತಹ ಕೋಟಿ ಕೋಟಿ ಕಾರ್ಯಕರ್ತರಿಗೆ ಅವರು ಸ್ಫೂರ್ತಿದಾಯಿ. ಅವರ ನಾಯಕತ್ವ ಗುಣದಿಂದ 21ನೇ ಶತಮಾನದಲ್ಲಿ ಭಾರತ ಸದೃಢಗೊಳ್ಳಲು ಸಾಧ್ಯವಾಯಿತು. ವಾಜಪೇಯಿ ಯೋಜನೆಗಳ ಫಲ ದೇಶದ ಪ್ರತಿಯೊಬ್ಬರಿಗೂ ಮುಟ್ಟಿದೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನವಿದೆ. ಬಿಜೆಪಿ ಕಾರ್ಯಕರ್ತರು, ಅಪಾರ ಅಭಿಮಾನಿಗಳು ನೋವಿನಲ್ಲಿ ಮುಳುಗಿದ್ದಾರೆ.
Advertisement
ಅಟಲಜೀ, ಇಂದು ನಮ್ಮೊಂದಿಗಿಲ್ಲ. ಆದ್ರೆ ಅವರ ಪ್ರೇರಣೆ, ಮಾರ್ಗದರ್ಶನ, ಪ್ರತಿಯೊಬ್ಬ ಭಾರತೀಯ ಮತ್ತು ಎಲ್ಲ ಬಿಜೆಪಿ ಕಾರ್ಯಕರ್ತರಿಗೂ ಸದಾ ದೊರೆಯುತ್ತದೆ. ದೇವರು ಅವರಿಗೆ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಲಿ. ಅಟಲ್‍ಜೀ ಸಾವಿನ ದುಃಖವನ್ನು ಭರಿಸುವ ಶಕ್ತಿ ನೀಡಲಿ.
Advertisement
ಹೋಗುವ ಮುನ್ನ ನಮ್ಮೆಲ್ಲರಿಗೂ ಒಂದು ಮಾತನ್ನು ಹೇಳಿ ಹೋಗಿದ್ದಾರೆ. ಸಾವಿನ ಆಯಸ್ಸು ಎಷ್ಟು? ಎರಡು ಕ್ಷಣ ಸಹ ಅಲ್ಲ, ಜೀವನ ನಿರಂತರವಾದ್ದು, ಇಂದು ನಮ್ಮ ಜೊತೆಯಲ್ಲಿದ್ದು ನಾಳೆ ಇರಲ್ಲ, ನನ್ನ ಜೀವಿತಾವಧಿ ತಂದಿದ್ದು, ಖುಷಿಯಿಂದ ಸಾಯಲು ಸಿದ್ಧ, ಮತ್ತೆ ಮರಳಿ ಬರುವೆನು, ನಾನೇಕೆ ಹೆದರಬೇಕು?
Advertisement
ಇಂದು ಸಂಜೆ ಏಮ್ಸ್ ಆಸ್ಪತ್ರೆಯಲ್ಲಿ ವಾಜಪೇಯಿ ಅವರು ನಿಧನರಾಗಿದ್ದು, ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
मैं नि:शब्द हूं, शून्य में हूं, लेकिन भावनाओं का ज्वार उमड़ रहा है।
हम सभी के श्रद्धेय अटल जी हमारे बीच नहीं रहे। अपने जीवन का प्रत्येक पल उन्होंने राष्ट्र को समर्पित कर दिया था। उनका जाना, एक युग का अंत है।
— Narendra Modi (@narendramodi) August 16, 2018
लेकिन वो हमें कहकर गए हैं-
“मौत की उमर क्या है? दो पल भी नहीं,
ज़िन्दगी सिलसिला, आज कल की नहीं
मैं जी भर जिया, मैं मन से मरूं,
लौटकर आऊँगा, कूच से क्यों डरूं?”
— Narendra Modi (@narendramodi) August 16, 2018
India grieves the demise of our beloved Atal Ji.
His passing away marks the end of an era. He lived for the nation and served it assiduously for decades. My thoughts are with his family, BJP Karyakartas and millions of admirers in this hour of sadness. Om Shanti.
— Narendra Modi (@narendramodi) August 16, 2018
It was due to the perseverance and struggles of Atal Ji that the BJP was built brick by brick. He travelled across the length and breadth of India to spread the BJP's message, which led to the BJP becoming a strong force in our national polity and in several states.
— Narendra Modi (@narendramodi) August 16, 2018