ಬೆಂಗಳೂರು: ಒಂದು ಹೆಣ್ಣು ಧೈರ್ಯವಾಗಿ ಮಾತನಾಡಿದ್ರೆ, ಆಕೆಯದ್ದೇ ತಪ್ಪು ಎಂದು ಹೇಳುವಷ್ಟು ಸಮಾಜ ಕೆಳಗೆ ಹೋಗಿದೆ. ನಾನು ತಪ್ಪೇ ಮಾಡಿಲ್ಲ, ನಾನು ಯಾಕೆ ಕ್ಷಮೆ ಕೇಳಬೇಕು, ತೊಂದರೆ ಆಗಿರೋದು ನನಗೆ ಎಂದು ನಟಿ ಶೃತಿ ಹರಿಹರನ್ ಕೆಂಡಾಮಂಡಲ ಆಗಿದ್ದಾರೆ.
ಇಂದು ಅಂಬರೀಶ್ ನೇತೃತ್ವದಲ್ಲಿ ನಡೆದ ಸಂಧಾನ ವಿಫಲವಾಗಿದ್ದು, ಇಬ್ಬರು ಕಲಾವಿದರು ತಮ್ಮ ಬಿಗಿಪಟ್ಟು ಸಡಿಲ ಮಾಡಿಲ್ಲ. ಅರ್ಜುನ್ ಸರ್ಜಾ ಕಾನೂನು ಮೊರೆ ಹೋಗಿಲ್ಲ ಅಂತಾ ಹಾಗಾಗಿ ನಾನು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಅರ್ಜುನ್ ಸರ್ಜಾ ನನ್ನ ವಿರುದ್ಧ ಎರಡು ಕೇಸ್ ಹಾಕಿದ್ದಾರೆ ಎಂಬ ವಿಷಯ ಇದೀಗ ಗೊತ್ತಾಗಿದೆ. ದೂರು ನೀಡಿದ್ದರಿಂದ ಸಂತೋಷವಾಗಿದ್ದು, ಕಾನೂನು ಹೋರಾಟ ನಡೆಸಲು ನಾನು ಸಿದ್ಧವಾಗಿದ್ದೇನೆ ಎಂದು ಹೇಳುವ ಮೂಲಕ ಸಂಧಾನಕ್ಕೆ ಸಿದ್ಧವಿಲ್ಲ ಎಂಬ ಸಂದೇಶವನ್ನು ರವಾನಿಸಿದರು.
Advertisement
Advertisement
ಶುಕ್ರವಾರ ಅಂಬರೀಶ್ ಸೇರಿದಂತೆ ಎಲ್ಲ ಹಿರಿಯರು ಏನು ಹೇಳುತ್ತಾರೆ ಎಂಬುವುದನ್ನು ಕಾದು ನೋಡುತ್ತೇವೆ. ಎಲ್ಲ ಹಿರಿಯರು ಶುಕ್ರವಾರ ಒಂದು ತೀರ್ಮಾನಕ್ಕೆ ಬರುತ್ತೇನೆ ಅಂತಾ ಹೇಳಿದ್ದು, ನಾಳೆಗಾಗಿ ವೇಟ್ ಮಾಡುತ್ತಿದ್ದೇನೆ. ಶುಕ್ರವಾರ ಏನಾಗುತ್ತೆ ಎಂಬುವುದನ್ನು ಎಲ್ಲರೂ ಕಾದು ನೋಡಿ ಎಂದು ಹೇಳುವ ಮೂಲಕ ಹೋರಾಟ ಇದೀಗ ಆರಂಭ ಎಂಬ ಸೂಚನೆಯನ್ನು ನೀಡುವ ಮೂಲಕ ಸುದ್ದಿಗೋಷ್ಠಿಯಿಂದ ಹೊರ ನಡೆದರು.
Advertisement
ಇದಕ್ಕೂ ಮೊದಲು ಮಾತನಾಡಿದ ಅರ್ಜುನ್ ಸರ್ಜಾ, ಸಂಧಾನ ಎಂಬ ಮಾತೇ ಇಲ್ಲ. ಕಾನೂನು ಮೂಲಕ ಹೋರಾಟ ನಡೆಸಲು ಸಿದ್ಧವಾಗಿದ್ದೇನೆ. ಕೆಲವರು ನನ್ನ ತೇಜ್ಯೊವಧೆಗೆ ಪ್ರಯತ್ನಿಸುತ್ತಿದ್ದಾರೆ. ಅದು ಯಾರೆಂಬುವುದು ನಿಮಗೆಲ್ಲರಿಗೂ ತಿಳಿಯಲಿದೆ. ಪ್ರಕರಣ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಹೆಚ್ಚಾಗಿ ಮಾತನಾಡೋದಿಲ್ಲ. ಮಾಧ್ಯಮಗಳ ಮುಂದೆ ಪ್ರಕರಣದ ಕುರಿತು ಹೆಚ್ಚು ಮಾತನಾಡಬಾರದು ಹಿರಿಯರು ಹೇಳಿದ್ದಾರೆ. ಹಾಗಾಗಿ ನಾನು ಏನು ಹೇಳಲ್ಲ. ಸಂಧಾನ ಎಂಬುವುದೇ ಇಲ್ಲ ಎಂದು ಖಡಕ್ ಆಗಿ ಹೇಳಿದರು.
Advertisement
ಮೀಟೂ ಎಂಬುವುದು ದೊಡ್ಡ ವೇದಿಕೆ. ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರೋದು ದುರಂತ. ನಾನು ಪ್ರಕರಣದಿಂದ ಹಿಂದೆ ಸರಿದ್ರೆ ಮುಂದಿನ ದಿನಗಳಲ್ಲಿ ಈ ರೀತಿಯ ದುರಪಯೋಗ ಹೆಚ್ಚಾಗಬಾರದು ಅಂತಾ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿ ಸುದ್ದಿಗೋಷ್ಠಿಯಿಂದ ಹೊರ ನಡೆದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv