ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

Public TV
1 Min Read
bhavana ramanna IVF

ಟಿ ಭಾವನಾ ಅಮ್ಮನಾಗುತ್ತಿದ್ದಾರೆ. ಅವರೀಗ ಏಳು ತಿಂಗಳ ಗರ್ಭಿಣಿಯಾಗಿದ್ದು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಇದುವರೆಗೂ ಮದುವೆಯಾಗದ ಭಾವನಾ ಹೇಗೆ ಮಗು ಪಡೆದರು ಎಂದು ಆಶ್ಚರ್ಯವಾಗೋದು ನಿಜ. ಆದರೆ ಅವರು ಐವಿಎಫ್ ಮೂಲಕ ಮಗು ಪಡೆಯುತ್ತಿದ್ದು ತಮ್ಮ ಗರ್ಭದಲ್ಲೇ ಮಗುವನ್ನ ಹೆರುತ್ತಿರುವುದು ವಿಶೇಷ.

ನಟಿಯಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಭಾವನಾ ಸಿಂಗಲ್ ಜೀವನ ನಡೆಸುತ್ತಿದ್ದಾರೆ. ಮುಂದುವರೆದ ವೈದ್ಯಕೀಯ ತಂತ್ರಜ್ಞಾನದಲ್ಲೀಗ ಪುರುಷನ ದೈಹಿಕ ಸಂಪರ್ಕ ಇಲ್ಲದೆ ಈಗ ತಾಯಿಯಾಗಬಹುದು. ಹಾಗೆಯೇ ಭಾವನಾ ತಾಯಿಯಾಗುತ್ತಿದ್ದು ಅವರಿಗೀಗ ವಯಸ್ಸು 40ರ ಆಸುಪಾಸು.

ಭರತನಾಟ್ಯ ಕಲಾವಿದೆಯಾಗಿ ಫಿಟ್ ಆಗಿರುವ ಭಾವನಾ ಇದೀಗ ಮಗು ಹೆರಲು ಸಿದ್ಧರಾಗಿದ್ದು, ಅವಳಿ ಮಕ್ಕಳನ್ನು ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಅವರು ತಾಯಿಯಾಗಲಿದ್ದಾರೆ. ಹೆಚ್ಚಿನ ವಿಚಾರಗಳನ್ನ ಅವರೇ ಹಂಚಿಕೊಳ್ಳಬೇಕಿದೆ.

Share This Article