ಇಸ್ಲಾಮಾಬಾದ್: ಡಯಟ್ ಮಾಡಲು ನಾನು ಪ್ರತಿದಿನ 24 ಮೊಟ್ಟೆ ತಿನ್ನುತ್ತೇನೆ ಎಂದು ಪಾಕಿಸ್ತಾನ (Pakistan) ಕ್ರಿಕೆಟಿಗ ಹ್ಯಾರಿಸ್ ರೌಫ್ (Haris Rauf) ಹೇಳಿದ್ದಾರೆ.
2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಪದಾರ್ಪಣೆ ಮಾಡಿದ 29 ವರ್ಷದ ಹ್ಯಾರಿಸ್ ರೌಫ್ 16 ಏಕದಿನ ಪಂದ್ಯಗಳಲ್ಲಿ 29 ವಿಕೆಟ್ ಹಾಗೂ 57 ಟಿ20 ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಅವರು ತಮ್ಮ ಕ್ರಿಕೆಟ್ ಜರ್ನಿ ಕುರಿತು ಖಾಸಗಿ ವಾಹಿನಿಯಲ್ಲಿ ನಡೆಯುತ್ತಿದ್ದ ಸಂದರ್ಶನದ ವೇಳೆ ತಮ್ಮ ಡಯಟ್ ರಹಸ್ಯವನ್ನ ಹೇಳಿಕೊಂಡಿದ್ದಾರೆ.
Advertisement
Advertisement
ಮೊಟ್ಟೆ (EGG) ಮೇಲಿನ ಪ್ರೀತಿಯನ್ನು ಬಹಿರಂಗಪಡಿಸುತ್ತಾ, ದೇಹದ ತೂಕವನ್ನು ಸಮತೋಲನದಲ್ಲಿ ಹೆಚ್ಚಿಸಿಕೊಳ್ಳಲು ಆಹಾರ ಕ್ರಮ ಹೇಗಿತ್ತು ಎಂಬುದನ್ನ ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಪ್ರಿಟೋರಿಯಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ
Advertisement
Advertisement
`ನಾನು ದಿನಕ್ಕೆ ದಿನಕ್ಕೆ 24 ಮೊಟ್ಟೆಗಳನ್ನ ತಿನ್ನುತ್ತೇನೆ. ಪಾಕ್ ಕ್ರಿಕೆಟ್ ತಂಡದ ಕೋಚ್ ಅಕೀಬ್ ಜಾವೇದ್ ನನಗೆ ಡಯಟ್ ಪ್ಲಾನ್ ಹೇಳಿಕೊಟ್ಟರು. ಉಪಾಹಾರಕ್ಕೆ 8, ಮಧ್ಯಾಹ್ನ ಊಟಕ್ಕೆ 8 ಹಾಗೂ ರಾತ್ರಿಯ ಊಟಕ್ಕೆ 8 ಮೊಟ್ಟೆ ಸೇವಿಸುವಂತೆ ಪ್ಲ್ಯಾನ್ ಕೊಟ್ಟರು. ನಾನು ಮೊದಲ ಬಾರಿ ಕ್ರಿಕೆಟ್ ಅಕಾಡೆಮಿಗೆ ಹೋದಾಗ ಮೊಟ್ಟೆಯ ಕ್ರೇಟ್‌ಗಳ ರಾಶಿಯನ್ನೇ ಹಾಕಲಾಗಿತ್ತು. ಒಂದು ಕ್ಷಣ ಯಾವುದೋ ಕೋಳಿ ಫಾರ್ಮ್‌ಗೆ ತರಿಸಿದಂತೆ ಭಾಸವಾಗಿತ್ತು’ ಎಂದು ಹಾಸ್ಯ ಮಾಡಿದ್ದಾರೆ.
ನಾನು ಮೊದಲು 72 ಕೆ.ಜಿ ಇದ್ದೆ, ಆದ್ರೆ ಅಕೀಬ್ ಭಾಯ್ ನಿನ್ನ ಎತ್ತರಕ್ಕೆ 82-83 ಕೆಜಿ ಇದ್ರೆ ಸೂಕ್ತ ಅಂತಾ ಹೇಳಿದ್ರು. ಅದರಂತೆ ಡಯಟ್ ಯೋಜನೆ ರೋಪಿಸಿಕೊಂಡೆ. ಈಗ ನಾನು 82 ಕೆ.ಜಿ ಇದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಿಸ್ಕ್ ತೆಗೆದುಕೊಳ್ಳಲು ಮುಂದಾಗದ ಬಿಸಿಸಿಐ – ಬುಮ್ರಾಗೆ ವಿಶ್ರಾಂತಿ ಮುಂದುವರಿಕೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k