ವಾಷಿಂಗ್ಟನ್: ಮೈಕ್ರೊಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ (Twitter) ಸಿಇಒ ಎಲೋನ್ ಮಸ್ಕ್ (Elon Musk) ಕೆಲ ಪ್ರಭಾವಿ ವ್ಯಕ್ತಿಗಳಿಗೆ ಟ್ವಿಟ್ಟರ್ ಖಾತೆಗಳಲ್ಲಿ ಬ್ಲೂ ಟಿಕ್‌ಗಳನ್ನು (Blue Tick) ಪಡೆಯಲು ತಾವೇ ಪಾವತಿ ಮಾಡುವುದಾಗಿ ತಿಳಿಸಿದ್ದರು. ಆದರೆ ಈ ನೀಲಿ ಟಿಕ್ ನನಗೆ ಬೇಡ. ಬದಲಿಗೆ ಅದಕ್ಕೆ ವ್ಯಯಿಸಲಾಗುವ ಹಣವನ್ನು ಯುದ್ಧಪೀಡಿತ ಉಕ್ರೇನ್‌ಗೆ (Ukraine) ಸಹಾಯ ಮಾಡಲು ದೇಣಿಗೆ ನೀಡಿ ಎಂದು ಅಮೆರಿಕದ ಜನಪ್ರಿಯ ಲೇಖಕ ಸ್ಟೀಫನ್ ಕಿಂಗ್ (Stephen King) ಕಟುವಾಗಿಯೇ ಮಸ್ಕ್‌ಗೆ ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಯಲ್ಲಿ ಬ್ಲೂ ಟಿಕ್ ಕಾಣಿಸಿಕೊಳ್ಳಲು ಪಾವತಿ ಮಾಡುವಂತಹ ಚಂದಾದಾರಿಕೆಯನ್ನು ಹೊರತಂದಿತ್ತು. ಕಳೆದ ವಾರ ಸೆಲೆಬ್ರಿಟಿ, ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಪಾವತಿ ಮಾಡದೇ ಹೋದ ಎಲ್ಲಾ ಬಳಕೆದಾರರ ಖಾತೆಗಳಲ್ಲಿ ನಿಲಿ ಟಿಕ್ ಮಾರ್ಕ್ ಮಾಯವಾಗಿತ್ತು. ಆದರೆ ಬಳಿಕ ಕೆಲ ಪ್ರಭಾವಿ ವ್ಯಕ್ತಿಗಳ ಖಾತೆಗಳಲ್ಲಿ ನೀಲಿ ಟಿಕ್ ಮಾರ್ಕ್‌ಗಳು ಮತ್ತೆ ಗೋಚರಿಸತೊಡಗಿವೆ. ಈ ಪೈಕಿ ಹೆಚ್ಚಿನವರು ತಮ್ಮ ಪರಿಶೀಲಿಸಿದ ಖಾತೆಗಾಗಿ ಯಾವುದೇ ರೀತಿಯಲ್ಲಿ ಪಾವತಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ನೀಲಿ ಟಿಕ್ ಮಾರ್ಕ್ ಅನ್ನು ಮರಳಿ ಪಡೆದಿರುವ ಪ್ರಭಾವಿ ವ್ಯಕ್ತಿಗಳ ಪೈಕಿ ಸ್ಟೀಫನ್ ಕಿಂಗ್ ಕೂಡಾ ಒಬ್ಬರು. ತಾವು ಟ್ವಿಟ್ಟರ್‌ನ ನೀಲಿ ಟಿಕ್‌ಗೆ ಚಂದಾದಾರರಾಗಿಲ್ಲವಾದರೂ ತಮ್ಮ ಖಾತೆಯಲ್ಲಿ ನೀಲಿ ಟಿಕ್ ಕಾಣಿಸುತ್ತಿದೆ ಎಂದು ಕಿಂಗ್ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಲೋನ್ ಮಸ್ಕ್, “ನಿಮಗೆ ಸ್ವಾಗತ, ನಿಮ್ಮ ಪರಿಶೀಲಿಸಿ ಖಾತೆಗಾಗಿ ಸ್ವತಃ ತಾವೇ ಪಾವತಿಸಿರುವುದಾಗಿ” ತಿಳಿಸಿದ್ದಾರೆ. ಈ ಬಳಿಕ ಸ್ಟೀಫನ್ ಕಿಂಗ್ ಹಾಗೂ ಮಸ್ಕ್ ನಡುವೆ ವಾಗ್ಯುದ್ಧ ಪ್ರಾರಂಭವಾಗಿದೆ.
Advertisement
ಬಳಿಕ ಟ್ವೀಟ್ ಮಾಡಿರುವ ಸ್ಟೀಫನ್ ಕಿಂಗ್, “ನನಗೆ ಬ್ಲೂ ಟಿಕ್‌ನ ಅಗತ್ಯವಿರಲಿಲ್ಲ. ಇದಕ್ಕೆ ವ್ಯಯಿಸಲಾಗಿರುವ ಹಣವನ್ನು ಉಕ್ರೇನ್‌ಗೆ ದೇಣಿಗೆ ನೀಡಬಹುದಿತ್ತು. ಬ್ಲೂಟಿಕ್ ಚಂದದಾರಿಕೆ ಹಣ ಕೇವಲ 8 ಇದೆ. ಆದರೆ ಮಸ್ಕ್ ಇನ್ನೂ ಸ್ವಲ್ಪ ಹೆಚ್ಚಿನ ಹಣವನ್ನು ದೇಣಿಗೆಯಾಗಿ ನೀಡಬಹುದು ಎಂದು ಸಲಹೆ ನೀಡಿದ್ದಾರೆ.
Advertisement
ಈ ವೇಳೆ ಮಸ್ಕ್ ತಾವು ಉಕ್ರೇನ್‌ಗೆ ಈ ಹಿಂದೆಯೇ ನೀಡಿದ್ದ ಸಹಾಯದ ಬಗ್ಗೆ ತಿಳಿಸಿದ್ದಾರೆ. ನಾನು ಈಗಾಗಲೇ ಉಕ್ರೇನ್‌ಗೆ 100 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದೇನೆ. ಆದರೆ ನೀವು ಇಲ್ಲಿಯವರೆಗೆ ಎಷ್ಟು ದೇಣಿಗೆ ನೀಡಿದ್ದೀರಿ ಎಂಬುದನ್ನು ತಿಳಿಯಲು ಬಯಸುತ್ತೇನೆ ಎಂದು ಸ್ಟೀಫನ್ ಕಿಂಗ್‌ಗೆ ಸವಾಲೆಸೆದಿದ್ದಾರೆ. ಇದನ್ನೂ ಓದಿ: Twitter – 10 ಲಕ್ಷ ಫಾಲೋವರ್ಸ್ ಹೊಂದಿದ್ರೆ ಸಿಗುತ್ತೆ ಬ್ಲೂ ಟಿಕ್?
ಮಸ್ಕ್ನ ಸ್ಪೇಸ್‌ಎಕ್ಸ್ ಯುದ್ಧ ಪೀಡಿತ ದೇಶವಾದ ಉಕ್ರೇನ್‌ನಲ್ಲಿ ಟರ್ಮಿನಲ್, ಹೊಸ ಉಪಗ್ರಹಗಳು, ಉಪಗ್ರಹ ಉಡಾವಣೆ ಮತ್ತು ಉಪಗ್ರಹ ನಿರ್ವಹಣೆಗಾಗಿ ಪಾವತಿಸುತ್ತಿದೆ. ಉಕ್ರೇನ್‌ನ ಉಪ ಪ್ರಧಾನ ಮಂತ್ರಿ ಮೈಖೈಲೊ ಫೆಡೋರೊವ್ ಅವರು ಸ್ಪೇಸ್‌ಎಕ್ಸ್ ಸ್ಟಾರ್‌ಲಿಂಕ್‌ನ ಕೆಲಸವನ್ನು ದೇಶದಲ್ಲಿ ಮುಂದುವರೆಸಿದ್ದಕ್ಕಾಗಿ ಮಸ್ಕ್‌ಗೆ ಧನ್ಯವಾದ ಅರ್ಪಿಸಿದ ಟ್ವೀಟ್ ಅನ್ನು ಸಹ ಮಸ್ಕ್ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಪಾವತಿ ಮಾಡದೇ ಹೋದ ಪ್ರಭಾವಿ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಗಳಲ್ಲಿ ಬ್ಲೂ ಟಿಕ್ ಅನ್ನು ಕಳೆದುಕೊಂಡಿದ್ದರು. ಇದಾದ ಕೇವಲ 3 ದಿನಗಳಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳ ಖಾತೆಗಳಲ್ಲಿ ಮತ್ತೆ ಬ್ಲೂ ಟಿಕ್ ಕಾಣಿಸಿಕೊಳ್ಳಲಾಗುತ್ತಿದೆ. ಕೆಲ ಪ್ರಭಾವಿ ವ್ಯಕ್ತಿಗಳ ಪರಿಶೀಲಿಸಿದ ಖಾತೆಗಳಿಗಾಗಿ ಮಸ್ಕ್ ತಾವೇ ಪಾವತಿ ಮಾಡುವುದಾಗಿ ತಿಳಿಸಿದ್ದರು. ಇದಾದ ಬಳಿಕ 10 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಟ್ವಿಟ್ಟರ್ ಬಳಕೆದಾರರು ಉಚಿತವಾಗಿ ಬ್ಲೂ ಟಿಕ್ ಅನ್ನು ಪಡೆಯಬಹುದು ಎಂದು ವರದಿಯೊಂದು ತಿಳಿಸಿದೆ. ಇದನ್ನೂ ಓದಿ: ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್ ಸ್ಪಷ್ಟನೆ