ಲಕ್ನೋ: ನಾನು ಯಾರನ್ನೂ ನಂಬುವುದಿಲ್ಲ. ನನ್ನನ್ನು ಭದ್ರತಾ ಪೊಲೀಸ್ ಅಧಿಕಾರಿಯೇ ಶೂಟ್ ಮಾಡಬಹುದು ಎಂದು ಸಮಾಜವಾದಿ ಪಕ್ಷದ ಸಂಸದ ಆಝಂ ಖಾನ್ ಅವರ ಪುತ್ರ ಅಬ್ದುಲ್ಲಾ ಆಝಂ ಖಾನ್ ಹೇಳಿಕೆ ಕೊಟ್ಟಿದ್ದಾರೆ.
Advertisement
ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮೊಂದಿಗೆ ಅಧಿಕಾರಿಗಳು, ಪೊಲೀಸರು, ಎರಡು ಸರ್ಕಾರಗಳಿವೆ. ನಾನು ಒಬ್ಬಂಟಿ, ನನ್ನೊಂದಿಗೆ ಯಾರೂ ಇಲ್ಲ. ನನ್ನೊಂದಿಗೆ ಇರುವ ಪೊಲೀಸರನ್ನು ನಾನು ನಂಬುವುದಿಲ್ಲ. ಅವರು ನನ್ನನ್ನು ಶೂಟ್ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ
Advertisement
Advertisement
ಭದ್ರತಾ ಪೊಲೀಸರನ್ನು ನನ್ನ ಭದ್ರತೆಗಾಗಿ ನಿಯೋಜಿಸಲಾಗಿಲ್ಲ. ನಾನು ಎಲ್ಲಿ ಇದ್ದೇನೆ ಎಂದು ತಿಳಿದುಕೊಳ್ಳಲು ನಿಯೋಜಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಅಬ್ದುಲ್ಲಾ ಅವರನ್ನು ಸುವಾರ್ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲಾಗಿದೆ.
Advertisement
#WATCH | SP leader Abdullah Azam Khan says, "…You have officers with you, Police with you, two govts with you. I'm alone, I have no one with me. I don't even trust the Policemen who are with me, they can shoot me…They're not deployed for my security but for my recce." (28.01) pic.twitter.com/kUxlsPhdBE
— ANI UP/Uttarakhand (@ANINewsUP) January 29, 2022
ಈ ಹಿಂದೆ ಅಬ್ದುಲ್ಲಾ ವಿರುದ್ಧ ರಾಂಪುರದಲ್ಲಿ 43 ಪ್ರಕರಣಗಳು ದಾಖಲಾಗಿತ್ತು. ಪರಿಣಾಮ ಇವರು 23 ತಿಂಗಳ ಸೆರೆವಾಸದ ನಂತರ ಜನವರಿ 15 ರಂದು ಸೀತಾಪುರ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದರು.
ಕಳೆದ ವರ್ಷ ಫೆಬ್ರವರಿಯಲ್ಲಿ ಅಬ್ದುಲ್ಲಾ ಮತ್ತು ಅವರ ತಂದೆಯನ್ನು ರಾಮ್‍ಪುರ ಜೈಲಿನಿಂದ ಸೀತಾಪುರ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಬಿಜೆಪಿ ದಬ್ಬಾಳಿಕೆ ಕೊನೆಗೊಳ್ಳುತ್ತದೆ. ಮಾರ್ಚ್ 10 ರಂದು ದಬ್ಬಾಳಿಕೆಗಾರನನ್ನು ಸಿಂಹಾಸನದಿಂದ ಕೆಳಗಿಳಿಸಲಾಗುವುದು ಎಂದು ಹೇಳಿದ್ದರು. ಇದನ್ನೂ ಓದಿ: ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸಿಬ್ಬಂದಿಯಿಂದ ಗ್ರಾ.ಪಂ ಕಚೇರಿಗೆ ಬೀಗ
ಉತ್ತರಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27, ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.