ಚಂದನವನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ – 2 ಸಿನಿಮಾ ಕುರಿತು ಸಂದರ್ಶನ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಅವರು ರಾಕಿಭಾಯ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ ಅವರು ಮತ್ತೆ ಯಶ್ ನಡುವೆ ಇದ್ದ ಸಂಬಂಧದ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದರು.
ನಾನು ಯಶ್‍ನನ್ನು ಎಂದೂ ಹೀರೋ ಆಗಿ ನೋಡಿಲ್ಲ. ನಾನು ಅವರನ್ನು ಒಬ್ಬ ಮನುಷ್ಟತ್ವವಿರುವ ಮಾನವನ ರೀತಿ ನೋಡಿದ್ದೇನೆ. ಜವಾಬ್ದಾರಿಗಳು ಯಶಸ್ಸಿನ ಜೊತೆಗೆ ಬೆಳೆಯುತ್ತೆ ಎಂಬುದನ್ನು ನಾನು ನಂಬುತ್ತೇನೆ. ಯಶ್‍ಗೆ ಮುಂದೆ ಇರುವ ಜವಾಬ್ದಾರಿ ಬಗ್ಗೆ ನನಗೆ ಪೂರ್ತಿಯಾಗಿ ಗೊತ್ತಿದೆ. ಆ ಸಂಪೂರ್ಣ ಚಿತ್ರಣ ನನ್ನ ಕಣ್ಣ ಮುಂದೆ ಇದೆ. ಅವರು ಕೇಳಿಸಿಕೊಳ್ಳುವುದು, ಬಿಡುವುದು ಅವರಿಗೆ ಬಿಟ್ಟಿದೆ ಎಂದು ನೇರವಾಗಿ ಹೇಳಿದರು. ಇದನ್ನೂ ಓದಿ: EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್
ನನ್ನ ಮತ್ತೆ ಯಶ್ ಸಾಮೀಪ್ಯ ಬೆಳೆದಿದ್ದೆ ಆ ಮನುಷ್ಯತ್ವದ ಆಧಾರದ ಮೇಲೆ. ಅವರು ಹೀರೋ ಆಗಿದ್ದಾರೆ ಎಂಬ ಕಾರಣಕ್ಕೆ ನಮ್ಮಿಬ್ಬರ ಸಂಬಂಧ ಬೆಳೆದಿಲ್ಲ. ನನಗೂ ಮತ್ತು ಯಶ್ ಒಂದೇ ರೀತಿಯ ಸಾಮ್ಯತೆ ಕಾಣಿಸಿದ್ದು ಎಂದರೆ ನಮಗಿಬ್ಬರಿಗೂ ಗಾಡ್ ಫಾದರ್ ಇಲ್ಲ. ನಮ್ಮಿಬ್ಬರನ್ನು ಕರೆದುಕೊಂಡು ಹೋಗಿ ಬೆಳೆಸುತ್ತೇವೆ ಎಂದು ಹೇಳಿದವರು ಯಾರೂ ಇಲ್ಲ.
ಯಶ್ ಈ ಹಿಂದೆ ಸಂದರ್ಶನವೊಂದರಲ್ಲಿ ನನಗೆ ಏನೂ ಗೊತ್ತಾಗುತ್ತಿಲ್ಲ ಅಂತ ಮೆಜೆಸ್ಟಿಕ್‍ನಲ್ಲಿ ನಿಂತಿದ್ದೆ ಅಂತ ಹೇಳಿದ್ದರು. ನಾವು ಸಹ ಫುಟ್‍ಪಾತ್ ಮೇಲೆ ನಿಂತು ಬಂದವರೇ ಆಗಿದ್ದೇವೆ. ಇಬ್ಬರದ್ದು ಒಂದೇ ರೀತಿ ಪರಿಸ್ಥಿತಿ ಇದ್ದಾಗ ಒಬ್ಬರನ್ನೊಬ್ಬರು ಸುಲಭವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಾರಂಭಿಸುತ್ತೇವೆ. ಅದಕ್ಕೆ ನಾವು ಅದೇ ಸಂಬಂಧವನ್ನು ಉಳಿಸಿಕೊಂಡು ಬಂದಿದ್ದೇವೆ. ಇದನ್ನೂ ಓದಿ: ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್