ಮುಡಾ 50:50 ಅನುಪಾತ ರದ್ದು ಮಾಡಿ ಅಂತಾ ನಾನು ಹೇಳಲ್ಲ: ಜಿಟಿ ದೇವೇಗೌಡ ಅಚ್ಚರಿಯ ಹೇಳಿಕೆ

Public TV
1 Min Read
gt devegowda

ಮೈಸೂರು: ಮುಡಾ (MUDA) 50:50 ಅನುಪಾತ ರದ್ದು ಮಾಡಿ ಎಂದು ನಾನು ಹೇಳಲ್ಲ ಎಂದು ಮುಡಾ ಸಭೆಗೆ ಹೋಗುವ ಮುನ್ನ ಶಾಸಕ ಜಿ.ಟಿ ದೇವೇಗೌಡ (G.T Devegowda) ಅಚ್ಚರಿ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ 50:50 ಅನುಪಾತ ರದ್ದು ಮಾಡಿ ಎಂದು ನಾನು ಹೇಳಲ್ಲ. ಆದರೆ 50:50 ಅನುಪಾತದಲ್ಲಿ ಆಗಿರುವ ಅಕ್ರಮ ಸೈಟ್‌ಗಳನ್ನ ರದ್ದು ಮಾಡಬೇಕು. ಸರ್ಕಾರ ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನ ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬೆಂಗಳೂರು | ಕುಡಿದ ಮತ್ತಲ್ಲಿ ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ವೈದ್ಯ!

ಎಲ್ಲಾ ಜಿಲ್ಲೆಗಳಲ್ಲಿ ಕೂಡ 50:50 ಅನುಪಾತದಡಿ ಭೂಮಿ ಕೊಡಲಾಗುತ್ತಿದೆ. ಇಲ್ಲವಾದರೆ ನಾಲ್ಕು ಪಟ್ಟು ಭೂಮಿಯನ್ನು ಕೊಡಬೇಕಾಗುತ್ತದೆ. ಇದರಿಂದ ಪ್ರಾಧಿಕಾರಕ್ಕೆ ಹೆಚ್ಚು ನಷ್ಟ ಆಗುತ್ತದೆ. ಹೀಗಾಗಿ ಎಲ್ಲಾ ಪ್ರಾಧಿಕಾರಿಗಳಲ್ಲಿ 60:40 ಹಾಗೂ 50: 50 ಅನುಪಾತ ಇದೆ. ನಿಯಮಾನುಸಾರ 50:50 ಅನುಪಾದಡಿ ಅರ್ಹರಿಗೆ ನಿವೇಶನ ನೀಡಲಿ. ಕಾನೂನುಬಾಹಿರವಾಗಿ ನೀಡಿದ್ದರೆ ಅದನ್ನ ವಾಪಸ್ ಪಡೆದುಕೊಳ್ಳಲಿ ಎಂದು ಹೇಳಿದರು. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಾಡೋಕೆ ಕೇಂದ್ರ ರೆಡಿಯಾಗಿದೆ: ಪ್ರತಾಪ್‌ಸಿಂಹ

ಮುಡಾದಲ್ಲಿ ಕಳೆದ ಒಂದು ವರ್ಷದಿಂದ ಸಭೆ ನಡೆದಿರಲಿಲ್ಲ. ಹೀಗಾಗಿ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ನನಗೆ ಮುಡಾ ಸಭೆ ನೋಟಿಸ್ ಬಂದಾಗ ಡಿಸಿ ಅವರನ್ನ ಕೇಳಿದ್ದೆ. ಕಳೆದ ಸಭೆಯಲ್ಲಿ ನಡೆಸಲಾಗಿರುವ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಕೆಲವೊಂದು ವಿಷಯಗಳಿಗೆ ಸಭೆಯ ಅನುಮೋದನೆ ಬೇಕಾಗಿದೆ. ಈ ವಿಚಾರಗಳನ್ನಷ್ಟೇ ಚರ್ಚೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಸರ್‌ ಎಂ.ವಿಶ್ವೇಶ್ವರಯ್ಯ ಓದಿದ್ದ ಸರ್ಕಾರಿ ಶಾಲೆಯೂ ವಕ್ಫ್‌ ಹೆಸರಿಗೆ

Share This Article