ಕೋಲಾರ: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲಿ ತಿಂಡಿ ಮಾಡಿದ್ದು ಬೆಳ್ಳಿ ತಟ್ಟೆಯೋ, ಯಾವ ತಟ್ಟೆಯೋ ಅಂತಾ ಗೊತ್ತಿಲ್ಲ ಎಂದು ಭಾರೀ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ವೇಮಗಲ್ ಹಾಗೂ ನರಸಾಪುರ ಕೈಗಾರಿಕಾ ಪ್ರದೇಶಗಳಲ್ಲಿ ವಿವಿಧ ಕೈಗಾರಿಕೆಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲಿ ತಿಂಡಿ ಮಾಡಿದ್ದು ಬೆಳ್ಳಿ ತಟ್ಟೆನೋ, ಯಾವ ತಟ್ಟೆ ಅಂತಾ ಗೊತ್ತಿಲ್ಲ. ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿಗಳು ಹಾಗೂ ನಮ್ಮ ನಾಯಕರು. ಅವರಿಗೆ ಒಂದು ಸ್ಥಾನ ಇದೆ. ಹೀಗಾಗಿ ಬ್ರೇಕ್ ಫಾಸ್ಟ್‍ಗೆ ಹೋದ ಕಡೆಯೆಲ್ಲೆಲ್ಲಾ ಅವರನ್ನ ಕರೆಯಲು ಸಾಧ್ಯವಿಲ್ಲ. ನಿನ್ನೆ ಸಭೆ ನಡೆದಿಲ್ಲ. ಸಚಿವರುಗಳ ಮುಖಾಮುಖಿ ಚರ್ಚೆ ಅಷ್ಟೇ ಎನ್ನುವ ಮೂಲಕ ಸಿದ್ದರಾಮಯ್ಯನವರ ಗೈರಿಗೆ ಸಮಾಜಾಯಿಸಿ ನೀಡಿದರು.
Advertisement
Advertisement
ಪಿ.ಆರ್.ಸ್ವಾಮಿ ಮನೆ ಮೇಲೆ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಅದು ಎಸಿಬಿ ಕೆಲಸ ಯಾರು ತಪ್ಪು ಮಾಡುತ್ತಾರೋ ಅವರು ಶಿಕ್ಷೆ ಅನುಭವಿಸುತ್ತಾರೆ. ಎಸಿಬಿ ಅಧಿಕಾರಿಗಳು ಸ್ವತಂತ್ರವಾಗಿ ಕ್ರಮ ಕೈಗೊಳ್ಳಲಿ ಎಂದರು. ಇದನ್ನೂ ಓದಿ: ಡಿಕೆಶಿ ನಿವಾಸದಲ್ಲಿ ಬೆಳ್ಳಿ ತಟ್ಟೆ, ಕಪ್ ಗಳಲ್ಲಿ ಉಪಹಾರ ಸೇವಿಸಿದ ಕೈ ನಾಯಕರು
Advertisement
ಸಿಎಂ ಕುಮಾರಸ್ವಾಮಿ ದೆಹಲಿ ಭೇಟಿಯಲ್ಲಿ ವಿಶೇಷ ಏನು ಇಲ್ಲ. ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಎಚ್‍ಡಿಕೆ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ. ನಾನು ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಲ್ಲ ಎಂದು ತಿಳಿಸಿದರು.
Advertisement
ಇದೇ ವೇಳೆ ಬಿಬಿಎಂಪಿ ಉಪಮೇಯರ್ ರಮೀಳಾ ನಿಧನಕ್ಕೆ ಸಂತಾಪ ಸೂಚಿಸಿದ ಜಾರ್ಜ್, ರಮೀಳಾ ಅವರ ಕುಟುಂಬಕ್ಕೆ ನೋವನ್ನು ತಡೆದುಕೊಳ್ಳುವ ಶಕ್ತಿ ಕೊಡಲಿ, ಅವರು ಒಳ್ಳೆಯ ಲೀಡರ್ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv