– ಉತ್ತರ ಕರ್ನಾಟಕದ ಹಳ್ಳಿ ದತ್ತು ಪಡೆಯಲು ಚಿಂತನೆ
ಧಾರವಾಡ: ನನಗೆ ಡಬಲ್ ಮೀನಿಂಗ್ ಡೈಲಾಗ್ ಇಷ್ಟವಿಲ್ಲ, ನನ್ನ ಕುಟುಂಬ ನನಗೆ ಅದನ್ನ ಕಲಿಸಿಲ್ಲ ಎಂದು ಚಿತ್ರ ನಟ ನಿನಾಸಂ ಸತೀಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ಗ್ರೆಡ್ ತರಹದ ಸಿನೆಮಾ ಮಾಡಿ ನನಗೆ ಗೆಲ್ಲೊದು ಬೇಕಾಗಿಲ್ಲ. ಪರಿಶುದ್ಧ ಸಿನೆಮಾ ಮಾಡಬೇಕು ಎಂದಿದ್ದ ನನಗೆ ಇದೇ ಪರಿಶುದ್ಧ ಗೆಲುವು ಎಂದು ಹೇಳಿದರು.
ಡಬಲ್ ಮೀನಿಂಗ್ ಸಿನಿಮಾ ತರಲು ನನಗೆ ಇಷ್ಟ ಆಗಲ್ಲ. ಅದು ನನ್ನ ಸಂಸ್ಕೃತಿ ಅಲ್ಲ. ನನ್ನ ಕುಟುಂಬದವರು ನನಗೆ ಅದನ್ನು ಕಲಿಸಿಲ್ಲ. ಆ ತರದ ಡೈಲಾಗ್ ಗಳು ಬಂದಾಗ ನನಗೆ ಅಸಹ್ಯ ಆಗುತ್ತೆ. ಹೀಗಾಗಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಅವುಗಳನ್ನು ನಿರಾಕರಿಸುತ್ತೀನಿ. ಆದ್ರೆ ಪ್ರಾಕೃತಿಕವಾಗಿ ಆ ಕಥೆಯೊಳಗಡೆ ಇದ್ದರೆ ಮಾತ್ರ ಅಂತಹ ಸೀನ್ ಗಳನ್ನು ಬಳಸಲು ಒಪ್ಪಿಗೆ ಕೊಡುತ್ತೇನೆ. ಅದು ಬಿಟ್ಟರೆ ಡಬಲ್ ಮೀನಿಂಗ್ ಡೈಲಾಗ್ ಮೂಲಕ ಜನರನ್ನು ರಂಜಿಸಲು ನಾನು ಹೋಗುವುದಿಲ್ಲ. ಒಂದು ಪರಿಶುದ್ಧವಾದ ಸಿನಿಮಾ ಮಾಡಿ ಗೆಲ್ಲಿಸಿಕೊಳ್ಳೋಣ. ಅದಕ್ಕೆ ಜನ ಸಪೋರ್ಟ್ ಮಾಡಬೇಕು ಅಂತ ಹೇಳಿದ್ರು.
ಹಳ್ಳಿ ದತ್ತು:
ಬರುವ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ತೀರಾ ಕಡು ಪರಿಸ್ಥಿತಿಯಲ್ಲಿರುವ ಹಳ್ಳಿಯನ್ನು ದತ್ತು ತೆಗೆದುಕೊಳ್ಳುತ್ತೇನೆ. ಈ ಮೂಲಕ ಉಳ್ಳವರಿಗೆ, ಕೋಟ್ಯದೀಶ್ವರರು ಎಚ್ಚೆತ್ತುಕೊಳ್ಳಲಿ. ನಾವೆಲ್ಲರೂ ಸಮಾಜದ ಜೊತೆ ಇರೋಣ. ನಾವು ತಿನ್ನೋಣ, ಅವರೂ ತಿನ್ನಲಿ. ಹೀಗೆ ಎಲ್ಲರೂ ನೆಮ್ಮದಿಯಾಗಿ ಬದುಕಲು ನಾವೆಲ್ಲರೂ ಸೇರಿ ಅವಕಾಶ ಮಾಡಿಕೊಡಬೇಕು. ಯಾವ ಊರನ್ನು ದತ್ತು ತೆಗೆದುಕೊಳ್ಳಬಹುದೆಂಬ ಲಿಸ್ಟ್ ಮಾಡಿ ಚರ್ಚೆ ನಡೆಸಿ ನನಗೆ ತಿಳಿಸಿ. ಬಳಿಕ ನಾನೇ ಆ ಊರಿಗೆ ಬಂದು ತೆಗೆದುಕೊಳ್ಳುತ್ತೇನೆ ಅಂತ ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv