Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಿಜೆಪಿಗೆ ಹೋಗಲ್ಲ ಅಂದಿದ್ದ ಶೆಟ್ಟರ್ ಯಾಕೆ ಹೋಗಿದ್ದಾರೋ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬಿಜೆಪಿಗೆ ಹೋಗಲ್ಲ ಅಂದಿದ್ದ ಶೆಟ್ಟರ್ ಯಾಕೆ ಹೋಗಿದ್ದಾರೋ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್

Bengaluru City

ಬಿಜೆಪಿಗೆ ಹೋಗಲ್ಲ ಅಂದಿದ್ದ ಶೆಟ್ಟರ್ ಯಾಕೆ ಹೋಗಿದ್ದಾರೋ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್

Public TV
Last updated: January 25, 2024 5:53 pm
Public TV
Share
3 Min Read
d.k.shivakumar
SHARE

– ಶೆಟ್ಟರ್ ನಿನ್ನೆ ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು

ಬೆಂಗಳೂರು: ಜಗದೀಶ್ ಶೆಟ್ಟರ್ (Jagadish Shetter) ಅವರು ನಿನ್ನೆ ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು. ಇಂದು ಯಾಕೆ ಬಿಜೆಪಿ ಸೇರಿದ್ದಾರೋ, ಅವರಿಗೆ ಯಾವ ಒತ್ತಡವಿತ್ತೋ ಗೊತ್ತಿಲ್ಲ. ಇದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿ ಸೇರ್ಪಡೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮತ್ತೆ ನನ್ನನ್ನು ಬಿಜೆಪಿಗೆ ವಾಪಸ್ ಬರುವಂತೆ ತಮ್ಮ ಕ್ಷೇತ್ರದ ನಾಯಕರು, ಕಾರ್ಯಕರ್ತರ ಮೂಲಕ ಆಹ್ವಾನಿಸಲಾಗುತ್ತಿದೆ ಎಂದು ಶೆಟ್ಟರ್ ಅವರು ನಿನ್ನೆ ನನಗೆ ಮಾಹಿತಿ ನೀಡಿದ್ದರು. ಕಾಂಗ್ರೆಸ್ ಪಕ್ಷ ನನಗೆ ರಾಜಕೀಯವಾಗಿ ಮರುಜೀವ ಕೊಟ್ಟಿದೆ. ಹೀಗಾಗಿ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು. ಅವರ ಮಾತಿನ ಮೇಲೆ ವಿಶ್ವಾಸ ಇಟ್ಟು, ಅವರು ಮತ್ತೆ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದೆ. ಈಗ ಮಾಧ್ಯಮಗಳ ಮೂಲಕ ಶೆಟ್ಟರ್ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಿದ್ದಾರೆ ಎಂಬ ಸುದ್ದಿ ತಿಳಿಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಬಿಗ್ ಶಾಕ್- ಮತ್ತೆ ‘ಕಮಲ’ ಹಿಡಿದ ಜಗದೀಶ್ ಶೆಟ್ಟರ್

jagadish shetter congress 1

ಅವರು ಹಿರಿಯ ನಾಯಕರು ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅವರನ್ನು ಬಹಳ ಗೌರವದಿಂದ ನಡೆಸಿಕೊಂಡಿತ್ತು. ಇತ್ತೀಚೆಗೆ ರಾಮಮಂದಿರ ವಿಚಾರದಿಂದ ಹಿಡಿದು ಬೇರೆ, ಬೇರೆ ವಿಷಯಗಳ ಬಗ್ಗೆ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಅನೇಕ ಹೇಳಿಕೆಗಳನ್ನು ನೀಡಿದ್ದರು. ನಾವು ಅವರ ಮೇಲೆ ಇಟ್ಟಿದ್ದ ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂದು ಮಾಧ್ಯಮಗಳೇ ವಿಶ್ಲೇಷಣೆ ಮಾಡುತ್ತಿವೆ. ವಿಧಾನ ಪರಿಷತ್ ಸಭಾಪತಿಗಳಿಗೆ ಅವರು ಕರೆ ಮಾಡಿ ಫ್ಯಾಕ್ಸ್ ಮೂಲಕ ರಾಜೀನಾಮೆ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಅಧಿಕಾರಿಗಳ ಮೂಲಕ ಮಾಹಿತಿ ಬಂದಿದೆ. ಅವರನ್ನು ಒತ್ತಡದ ಹಾಕಿ ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆಯೋ ಎಂಬುದು ಗೊತ್ತಿಲ್ಲ. ಅವರ ಹೇಳಿಕೆ ನೋಡಿ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.

ಶೆಟ್ಟರ್ ಅವರು ದೇಶದ ಹಿತದೃಷ್ಟಿಯಿಂದ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ಹೇಳಿದ್ದಾರೆ ಎಂಬ ಪ್ರಶ್ನೆಗೆ, ಅವರಿಗೆ ಟಿಕೆಟ್ ತಪ್ಪಿದಾಗ ದೇಶದ ಹಿತಾಸಕ್ತಿ ಗೊತ್ತಿರಲಿಲ್ಲವೇ? ಕಾಂಗ್ರೆಸ್ ಪಕ್ಷ ಅವರನ್ನು ಗೌರವದಿಂದ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದಾಗ ದೇಶದ ಹಿತ ಗೊತ್ತಿರಲಿಲ್ಲವೇ ಎಂದು ಮರುಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇಲ್ಲಿಯವರೆಗೆ ಸಹಕಾರ ಕೊಟ್ಟಿದ್ದಕ್ಕೆ ಡಿಕೆಶಿ, ಸಿಎಂಗೆ ಧನ್ಯವಾದ ಸಲ್ಲಿಸಿದ್ರು ಶೆಟ್ಟರ್

Jagadish Shetter

ಅವರಿಗೆ ಆಮಿಷ ಒಡ್ಡಲಾಗಿದೆಯೇ ಎಂಬ ಪ್ರಶ್ನೆಗೆ, ಈ ವಿಚಾರವಾಗಿ ಅವರೇ ಹೇಳಬೇಕು. ಕಾಂಗ್ರೆಸ್ ಪಕ್ಷ ಅವರನ್ನು ಬಹಳ ಗೌರವದಿಂದ ನಡೆಸಿಕೊಂಡಿದೆ. ನಮಗೂ ಆತ್ಮಸಾಕ್ಷಿ ಇದೆ. ಅವರಿಗೂ ಆತ್ಮಸಾಕ್ಷಿ ಇದೆ. ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯೇ ಬೇರೆ, ಬಿಜೆಪಿ ಕಾರ್ಯವೈಖರಿಯೇ ಬೇರೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಅವರಿಗೆ ‘ಬಿ’ ಫಾರಂ ಕೊಟ್ಟಿದ್ದೆ. ನನಗೆ ಅವರ ರಾಜೀನಾಮೆ ಪತ್ರ ತಲುಪಿಸಿಲ್ಲ ಎಂದಿದ್ದಾರೆ.

ಸಂಘ ಪರಿವಾರದವರು ನಂಬಿಕೆಗೆ ಅರ್ಹರಲ್ಲ ಎಂದು ಭಾವಿಸುತ್ತೀರಾ ಎಂಬ ಪ್ರಶ್ನೆಗೆ, ಎಲ್ಲಾ ವಿಚಾರದಲ್ಲೂ ಈ ರೀತಿ ತಳುಕು ಹಾಕುವುದೇಕೆ? ಸಂಘದವರು ಅವರ ಕೆಲಸ ಮಾಡುತ್ತಾರೆ. ರಾಜಕಾರಣಿಗಳು ನಮ್ಮ ಕೆಲಸ ಮಾಡುತ್ತೇವೆ. ಸಂಘಕ್ಕೂ ಅದಕ್ಕೂ ಏನು ಸಂಬಂಧ ಕಲ್ಪಿಸಲಿ? ಸಂಘ ಪರಿವಾರದವರಾಗಿದ್ದರೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದರಾ? ಶೆಟ್ಟರ್ ಅವರು ರಾಜಕಾರಣಿ, ಅವರನ್ನು ಸಂಘದವರು ಎಂದು ಯಾಕೆ ನೋಡಲಿ. ಶೆಟ್ಟರ್ ಅವರು ಯಾಕೆ ಹೋಗಿದ್ದಾರೋ ಅದು ಬೇರೆ ವಿಚಾರ. ಉಳಿದಂತೆ ಬೇರೆ ಯಾರೂ ಕೂಡ ಬಿಜೆಪಿಗೆ ಹೋಗುವುದಿಲ್ಲ. ಶೆಟ್ಟರ್ ಅವರನ್ನು ಜನ 35 ಸಾವಿರ ಮತಗಳಿಂದ ತಿರಸ್ಕರಿಸಿದರೂ ನಾವು ಅವರನ್ನು ಗೌರವಯುತವಾಗಿ ನಡೆಸಿಕೊಂಡು ಪರಿಷತ್ ಸ್ಥಾನ ನೀಡಿದ್ದೆವು. ಮಿಕ್ಕಿದ್ದು ಅವರ ಆತ್ಮಸಾಕ್ಷಿ ಹಾಗೂ ಜನರಿಗೆ ಬಿಟ್ಟ ವಿಚಾರ ಎಂದು ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಜಗದೀಶ್ ಶೆಟ್ಟರ್‌ಗೆ ಕಾಂಗ್ರೆಸ್‌ನಿಂದ ಯಾವುದೇ ಅನ್ಯಾಯ ಆಗಿಲ್ಲ: ಸಿದ್ದರಾಮಯ್ಯ

TAGGED:bjpcongressd k shivakumarJagadish Shetterಕಾಂಗ್ರೆಸ್ಜಗದೀಶ್ ಶೆಟ್ಟರ್ಡಿ.ಕೆ.ಶಿವಕುಮಾರ್ಬಿಜೆಪಿ
Share This Article
Facebook Whatsapp Whatsapp Telegram

Cinema news

high court ranveer singh
ದೈವಕ್ಕೆ ಅಪಮಾನ ಆರೋಪ – ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್‌ಗೆ ಹೈಕೋರ್ಟ್ ಸೂಚನೆ
Cinema Court Latest Top Stories
Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema

You Might Also Like

Vaibhav Sooryavanshi
Cricket

ಗುವಾಹಟಿಯಲ್ಲಿ ಸರಿಸಾಟಿಯಿಲ್ಲದ ವೈಭವ್‌ ಪ್ರದರ್ಶನ – ಆರ್‌ಸಿಬಿ ʻಜೋಶ್‌ʼಗೆ ಸೋಲಿನ ಪೆಟ್ಟು, ರಾಜಸ್ಥಾನ್‌ಗೆ 6 ವಿಕೆಟ್‌ ಜಯ

Public TV
By Public TV
1 hour ago
Bidar Eshwar Khandre
Bidar

ಬೀದರ್‌ನ ವಿವಿಧ ಮಠಗಳಿಗೆ ಸರ್ಕಾರದ ದೇಣಿಗೆ ವಿತರಿಸಿದ ಈಶ್ವರ್‌ ಖಂಡ್ರೆ‌‌

Public TV
By Public TV
2 hours ago
Dharwad 1
Dharwad

ಧಾರವಾಡ | ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಕೊಲೆ

Public TV
By Public TV
2 hours ago
Donald Trump Angry
Latest

ಮದ್ದುಗುಂಡುಗಳನ್ನ ಯುದ್ಧನೌಕೆಗೆ ತುಂಬಿಸ್ತಿದ್ದೇವೆ – ಮಾತುಕತೆಗೆ ಒಪ್ಪದಿದ್ರೆ ಇರಾನ್‌ ಮೇಲೆ ಭೀಕರ ದಾಳಿ: ಟ್ರಂಪ್‌ ಕೊನೇ ವಾರ್ನಿಂಗ್‌

Public TV
By Public TV
3 hours ago
Artemis 2 Crew
Latest

5 ದಶಕಗಳ ಬಳಿಕ ಚಂದ್ರಯಾನ ಕೈಗೊಂಡಿದ್ದ ಆರ್ಟೆಮಿಸ್-2 ತಂಡ ಶನಿವಾರ ಭೂಮಿಗೆ

Public TV
By Public TV
4 hours ago
andhra girl death
Latest

ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿ ಮೂವರು ಸಾವು – ಕ್ಯಾಮೆರಾ ಮುಂದೆಯೇ ಪ್ರಾಣಬಿಟ್ಟ ಯುವತಿಯರು

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?