ಸಿದ್ದರಾಮಯ್ಯ- ಶ್ರೀರಾಮುಲು ಒಳ ಒಪ್ಪಂದ ನನಗೆ ಗೊತ್ತಿಲ್ಲ: ಡಿ.ಕೆ ಶಿವಕುಮಾರ್

- ಸಿದ್ದರಾಮಯ್ಯ ಹೇಳಿಕೆಗೆ ಕೌಂಟರ್ ಕೊಡಲ್ಲ

Advertisements

ನವದೆಹಲಿ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಶ್ರೀರಾಮುಲು ಮಧ್ಯೆ ಯಾವ ಒಪ್ಪಂದ ನಡೆದಿದೆ ಎಂದು ನನಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

Advertisements

ಸಚಿವ ಶ್ರೀರಾಮುಲು ಹೇಳಿಕೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಮಾತನಾಡಿದ ಅವರು, ನನಗೆ ಈ ಒಳ ಒಪ್ಪಂದಗಳ ಅನುಭವ ಇಲ್ಲ ಎಂದರು. ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಶ್ರೀರಾಮುಲು ಹೇಳಿದ್ದಾರೆ ಸಂತೋಷ. ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಆಯ್ತಲ್ಲ, ಇದು ಸಂತೋಷ ಅಲ್ವ?, ಬೇರೆ ಪಕ್ಷದ ನಾಯಕರು ನಮ್ಮ ಪಕ್ಷದ ಅಧಿಕಾರಕ್ಕೆ ಬರುವ ಬಗ್ಗೆ ಮಾತನಾಡುತ್ತಿರುವುದು ಖುಷಿ ವಿಚಾರವಾಗಿದ್ದು, ಶ್ರೀರಾಮುಲು ಮತ್ತು ಮಾಧುಸ್ವಾಮಿಗೆ ನಾನು ಅಭಿನಂದಿಸುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮುರುಗೇಶ್ ನಿರಾಣಿ ಮುಂದಿನ ಸಿಎಂ- ಆಪ್ತರಿಂದ ಪೋಸ್ಟರ್ ಫುಲ್ ವೈರಲ್

Advertisements

ಇದೇ ವೇಳೆ ಮುಸ್ಲಿಮರ ಕೇರಿಯಲ್ಲಿ ಸಾವರ್ಕರ್ ಫೋಟೋ ಹಾಕಿದ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಮ್ಮ ಪಕ್ಷದ ನಾಯಕರೊಬ್ಬರು ಮಾತನಾಡಿದ ಮೇಲೆ ಅದನ್ನು ಅವರೇ ಮುಂದುವರಿಸುತ್ತಾರೆ, ನಾನು ಅದಕ್ಕೆ ಯಾವುದೇ ಕೌಂಟರ್ ಕೊಡುವುದಿಲ್ಲ, ನಮ್ಮ ಪಕ್ಷದ ನಾಯಕರು ಏನ್ ಹೇಳಿದ್ದಾರೆ ಅದನ್ನು ಅಲ್ಲಿಗೆ ಬೀಡೊಣ ಎಂದು ಜಾರಿಕೊಂಡರು

Live Tv

Advertisements
Exit mobile version