ಬೆಂಗಳೂರು: ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ನಾನು ಕತ್ತಲಲ್ಲಿ ಇದ್ದೇನೆ ಎಂದು ನವದೆಹಲಿ ಪ್ರತಿನಿಧಿ ಶಾಸಕ ಟಿ.ಬಿ.ಜಯಚಂದ್ರ (T.B.Jayachandra) ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರದ ಬಗ್ಗೆ ನಾನು ಏನೂ ಮಾತನಾಡಲ್ಲ. ನಾನು ಕತ್ತಲಲ್ಲಿ ಕೂತಿದ್ದೇನೆ. ಕನ್ನಡಕ ಹಾಕಿಕೊಂಡಿದ್ದೇನೆ. ಈಗಾಗಲೇ ವರಿಷ್ಠರು ಬಂದು ಸೂಚನೆ ನೀಡಿ ಹೋಗಿದ್ದಾರೆ. ನಾನು ಕಾಂಗ್ರೆಸ್‌ನ (Congress) ಶಿಸ್ತಿನ ಸಿಪಾಯಿ. ಯಾವುದೇ ಪ್ರತಿಕ್ರಿಯೆ ಕೊಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ನಂತರ ಡಿಕೆಶಿಯೇ ಸಿಎಂ ಆಗಬೇಕು: ಶಾಸಕ ಉದಯ್ ಗೌಡ
ನಾನು ಕಣ್ಣು ಆಪರೇಷನ್ ಮಾಡಿಸಿಕೊಂಡು ನಾಲ್ಕು ದಿನ ಆಗಿದೆ. ಕತ್ತಲಲ್ಲಿ ಕೂತಿದ್ದೇನೆ. ಇವತ್ತಷ್ಟೆ ನನಗೆ ಟಿವಿ ನೋಡೋಕು ಬಿಡ್ತಿಲ್ಲ. ನಾನು ಕತ್ತಲಲ್ಲಿದ್ದೀನಿ. ಕನ್ನಡಕ ಹಾಕಿಕೊಂಡಿದ್ದೀನಿ. ಯಾವ ವಿಚಾರವೂ ಗೊತ್ತಿಲ್ಲ. ಏನ್ ಚರ್ಚೆ ಆಗಿದ್ಯೋ, ಆ ಗೋಜಿಗೆ ನಾನು ಹೋಗಿಲ್ಲ ಎಂದರು.
ಜಾತಿಗಣತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಕಾಲದಲ್ಲೇ ಮಾನದಂಡ ಇಟ್ಟುಕೊಂಡು ಕಾಂತರಾಜು ವರದಿ ಕೇಳಿದ್ದೆವು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಜಾತಿಗಣತಿ ಕೇಳಿದ್ವಿ. ಆ ವರದಿಯಲ್ಲಿ ಪರಿಪೂರ್ಣ ಏನಿದೆ ಅಂತ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಶೀಘ್ರವೇ ವಿಪಕ್ಷ ನಾಯಕನ ಆಯ್ಕೆ: ಯಡಿಯೂರಪ್ಪ
ಜಯಪ್ರಕಾಶ್ ಹೆಗ್ಡೆ ವರದಿ ಕೊಡ್ತೀವಿ ಅನ್ನೋದನ್ನ ಮಾಧ್ಯಮದಲ್ಲಿ ನೋಡಿದ್ದೇನೆ. ವರದಿ ಕೊಟ್ಟಾಗ ಸರ್ಕಾರ ಸ್ವೀಕಾರ ಮಾಡಬೇಕು. ವರದಿ ಸ್ವೀಕಾರದ ಬಳಿಕ ಜಾರಿ ಮಾಡೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಚಾರ. ಅಧಿಕೃತವಾಗಿ ಸರ್ಕಾರಕ್ಕೆ ವರದಿ ಒಪ್ಪಿಸುವ ಕೆಲಸ ಮಾಡಬೇಕಿದೆ. ಸದುದ್ದೇಶದ ಹಿನ್ನೆಲೆಯಲ್ಲಿ ಐವತ್ತೈದು ಮಾನದಂಡ ಇಟ್ಟುಕೊಂಡು ಜಾತಿಗಣತಿ ಮಾಡಿಸಿದ್ದೇವೆ ಎಂದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]