ಬೆಂಗಳೂರು: ನನ್ನ ಹತ್ರ ಇಂಟೆಲಿಜೆನ್ಸ್ ಇಲ್ಲ, ಗೃಹ ಸಚಿವ ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ಸಾಹೇಬರಿಗೆ ಗೊತ್ತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ ಮೇಲೆ ತನಿಖೆ ಮಾಡುವುದಾಗಿ ಹೇಳಿದ್ದೇವು. 40% ಕಮಿಷನ್ ಅಥವಾ ಪಿಎಸ್‌ಐ ಹಗರಣ ಇರಬಹುದು, ತನಿಖೆ ಮಾಡುವುದಾಗಿ ನಾವು ಜನರಿಗೆ ಭರವಸೆ ಕೊಟ್ಟಿದ್ದೆವು. 40% ಕಮಿಷನ್ ಆರೋಪದ ಬಗ್ಗೆ ಆಯೋಗದ ಮುಖ್ಯಸ್ಥರು ಬುಧವಾರ ವರದಿ ಕೊಟ್ಟಿದ್ದಾರೆ. ಇವತ್ತು ಕ್ಯಾಬಿನೆಟ್ ಇದೆ, ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗುತ್ತದೆ. ಸಿಎಂ ಮತ್ತು ಕ್ಯಾಬಿನೆಟ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುವುದರ ಆಧಾರದ ಮೇಲೆ ಕ್ರಮವಾಗುತ್ತದೆ ಎಂದರು.ಇದನ್ನೂ ಓದಿ: ರನ್ಯಾರಾವ್ ಕೇಸ್; ಸಿಬಿಐ ತನಿಖೆ ಮುಗಿಯುವ ತನಕ ಬಿಜೆಪಿಯವರು ಕಾಯಬೇಕು: ಸತೀಶ್ ಜಾರಕಿಹೊಳಿ
ಇದೇ ವೇಳೆ ರನ್ಯಾ ರಾವ್ ಕೇಸ್ ವಿಚಾರವಾಗಿ ಮಾತನಾಡಿ, ಮಾಧ್ಯಮದಲ್ಲಿ ಏನು ಬರುತ್ತಿದೆಯೋ, ನನಗೂ ಅದಷ್ಟೇ ಗೊತ್ತಿದೆ. ನನ್ನ ಹತ್ರ ಇಂಟೆಲಿಜೆನ್ಸ್ ಇಲ್ಲ. ಗೃಹ ಸಚಿವರು ಮತ್ತು ಸಿಎಂ ಸಾಹೇಬ್ರಿಗೆ ಗೊತ್ತಿದೆ. ಸರ್ಕಾರದಲ್ಲಿ ಯಾರೇ ಭಾಗಿಯಾಗಿದ್ದರೂ, ತನಿಖೆಯಿಂದ ಹೊರಬರುತ್ತದೆ ಎಂದು ತಿಳಿಸಿದರು.
5 ವರ್ಷ ನಾನೇ ಸಿಎಂ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಾಹೇಬರು ಹಿರಿಯ ನಾಯಕರು. ಅವರು ಮಾಸ್ ಲೀಡರ್, ಸರ್ಕಾರವನ್ನು ಚೆನ್ನಾಗಿ ನಡೆಸುತ್ತಿದ್ದಾರೆ. ಅವರು ಏನೇ ಹೇಳಿದರು ನಮ್ಮ ಆಶೀರ್ವಾದ ಇರುತ್ತದೆ ಎಂದರು.ಇದನ್ನೂ ಓದಿ: ಡೆಲ್ಲಿ ಅಂಗಳ ತಲುಪಿದ ನಟಿ ರನ್ಯಾ ರಾವ್ ಕೇಸ್: ಇಬ್ಬರು ಸಚಿವರು ಸೇಫ್