ಶಿವಮೊಗ್ಗ: ಆಜಾನ್ (Azan) ಹೇಳಿಕೆ ಕುರಿತು ಎಷ್ಟೇ ವಿರೋಧ ಎದುರಾದರೂ ನಾನು ಜನ ಸಾಮಾನ್ಯನ ನೋವನ್ನು ಹೇಳುವವನೇ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನ್ನ ವಿರುದ್ಧ ಯಾರು ಎಷ್ಟೇ ಪ್ರತಿಭಟನೆ ನಡೆಸಿದರೂ ನಾನು ಅದನ್ನು ಎದುರಿಸಲು ಸಿದ್ಧನಿದ್ದೇನೆ ಎಂದರು.
Advertisement
Advertisement
ನಾನು ಈ ರೀತಿ ಪ್ರತಿಭಟನೆ ಮಾಡುವುದನ್ನು ಯಾವುದನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ. ಜನಸಾಮಾನ್ಯರ ಮನಸ್ಸಿನಲ್ಲಿ ಏನಿದೆ ಅದನ್ನು ನಾನು ಬಾಯಿಬಿಟ್ಟು ಹೇಳುತ್ತೇನೆ. ಅನೇಕರಿಗೆ ಅದನ್ನು ಬಾಯಿ ಬಿಟ್ಟು ಹೇಳುವುದಕ್ಕೆ ಅಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಭಾಷಣ ಮಧ್ಯೆ ಆಝಾನ್- ನನಗೆ ಎಲ್ಲಿ ಹೋದ್ರು ಇದೊಂದು ತಲೆನೋವು ಅಂದ್ರು ಈಶ್ವರಪ್ಪ
Advertisement
Advertisement
ಆಜಾನ್ ಕೂಗುವುದರಿಂದ ವಿದ್ಯಾರ್ಥಿಗಳಿಗೆ ಎಷ್ಟು ತೊಂದರೆಯಾಗುತ್ತಿದೆ ಎಂದು ಅವರ ಪೋಷಕರಿಗೆ ಗೊತ್ತು. ವಿದ್ಯಾರ್ಥಿಗಳಿಗೂ ಸಹ ಗೊತ್ತು. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಎಷ್ಟು ತೊಂದರೆಯಾಗಿದೆ ಎಂದು ಅವರಿಗೆ ಗೊತ್ತು. ಇರುವುದನ್ನ ಬಹಿರಂಗವಾಗಿ ಹೇಳುವುದಕ್ಕೆ ನಾನು ಹಿಂದೆ ಮುಂದೆ ನೋಡಲ್ಲ. ಬೇರೆಯವರಿಗೆ ತೊಂದರೆಯಾಗದಂತೆ ಸೌಂಡ್ ಇಡಲು ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ರಾತ್ರಿ 10 ರಿಂದ ಬೆಳಗ್ಗೆ 6 ವರೆಗೆ ಸಂಪೂರ್ಣ ನಿಷೇಧ ಆಗಿದೆ. ಇದು ಇದ್ದು ಕೂಡ ಇವರು ಹೀಗೆ ಮಾಡ್ತಾರೆ. ಪ್ರತಿಭಟನೆ ಮಾಡ್ತಾರೆ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಮಂಗಳೂರಿನ ಕಾವೂರಿನಲ್ಲಿ ಬಿಜೆಪಿ (BJP) ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಷಣ ಮಾಡ್ತಿದ್ದಾಗ ಸ್ಥಳೀಯ ಮಸೀದಿಯಿಂದ ಆಝಾನ್ ಕೇಳಿಬಂತು. ಇದಕ್ಕೆ ಸಿಟ್ಟಾದ ಈಶರಪ್ಪ ನನಗೆ ಎಲ್ಲಿ ಹೋದ್ರು ಇದೊಂದು ತಲೆನೋವು. ಮೈಕ್ ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಅಂತ ಹೇಳಿದ್ದರು. ಮಾಜಿ ಸಚಿವರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.