ಹುಬ್ಬಳ್ಳಿ: ಪ್ರಮೋದ್ ಮುತಾಲಿಕ್ (Pramod Muthalik) ತಾಕತ್ತು ನಾನು ನೋಡುವುದು ಬೇಕಾಗಿಲ್ಲ. ಅವನ ಎಲ್ಲಾ ತಾಕತ್ತು ನಾನು ನೋಡಿದ್ದೇನೆ. ಅವನಿಗೆ ಬೆಂಕಿ ಹಚ್ಚುವುದು ಬಿಟ್ಟರೆ ಬೇರೇನು ಗೊತ್ತಿಲ್ಲ. ಅವನ್ನು ನಾನು ಕೇರ್ ಮಾಡಲ್ಲಾ ಎಂದು ಕಾಂಗ್ರೆಸ್ (Congress) ಶಾಸಕ ಹಾಗೂ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ (Prasad Abbayya) ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ ಮಂಟೂರು ರಸ್ತೆಯಲ್ಲಿನ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವ ಹಿನ್ನೆಲೆ ಹಿಂದೂ ಸ್ಮಶಾನದಲ್ಲಿ ಕ್ಯಾಂಟೀನ್ ಕಟ್ಟುವುದಲ್ಲ. ಅಬ್ಬಯ್ಯಗೆ ತಾಕತ್ತು ಇದ್ದರೆ ಕಬರಸ್ತಾನದಲ್ಲಿ ಕ್ಯಾಂಟೀನ್ ಕಟ್ಟಲಿ ಎಂದು ಮುತಾಲಿಕ್ ಸವಾಲು ಹಾಕಿದ್ದರು. ಇದನ್ನೂ ಓದಿ: ಬ್ರಿಟಿಷರಂತೆ ಕಾಂಗ್ರೆಸ್ – ಸಿಜೆಐ ನಿವಾಸದಲ್ಲಿ ಗಣೇಶ ಪೂಜೆಗೆ ಹೋಗಿದ್ದನ್ನು ಟೀಕಿಸಿದವರಿಗೆ ಮೋದಿ ತಿರುಗೇಟು
ಈ ಕುರಿತು ಪ್ರತಿಕ್ರಿಯೆ ನೀಡುವಾಗ ಮುತಾಲಿಕ್ ಮೇಲೆ ವಾಗ್ದಾಳಿ ನಡೆಸಿದ ಅಬ್ಬಯ್ಯ, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮೇಲೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಅವನೆಲ್ಲಾ ನಾನು ತಲೆಗೆ ತೆಗೆದುಕೊಳ್ಳೊದಿಲ್ಲ. ಪ್ರಮೋದ್ ಮುತಾಲಿಕ್ ದೊಡ್ಡ ಇಂಟರ್ ನ್ಯಾಷನಲ್ ಲೀಡರ್ ಅಲ್ಲ. ಅವನು ಹೇಳಿದ ತಕ್ಷಣ ನಾನು ತಾಕತ್ತು ತೋರಿಸೋದು ಬೇಕಿಲ್ಲ. ನನಗೆ ನನ್ನ ಜನ ಬೇಕು. ನನ್ನ ಲೀಡರ್ ಬೇಕು. ನನ್ನನ್ನು ಜನ ಆರಿಸಿದ್ದು. ಮುತಾಲಿಕ್ ಅಲ್ಲಾ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಪ್ರತ್ಯಕ್ಷ – ಸಿಸಿಟಿವಿಯಲ್ಲಿ ಓಡಾಟದ ದೃಶ್ಯ ಸೆರೆ